ಪೌರತ್ವ ಕಾನೂನು ವಿರೋಧಿಸಿ ಕಮಲ್ ಹಾಸನ್ ಸುಪ್ರೀಂನಲ್ಲಿ ಅರ್ಜಿ
ಚೆನ್ನೈ, ಡಿಸೆಂಬರ್, 16: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ದಕ್ಷಿಣ ಭಾರತದ ಪ್ರಸಿದ್ದ ನಟ ಹಾಗೂ ಮಕ್ಕಳ ನಿಧಿ ಮಯಂ ಪಕ್ಷದ ಅಧ್ಯಕ್ಷ ಕಮಲ ಹಾಸನ್ ಹೇಳಿಕೆ ನೀಡಿದ್ದು, ಇದನ್ನು ಪ್ರಶ್ನಿಸಿ ನಾವು ಸುಪ್ರಿಂಕೋರ್ಟಗೆ ಹೋಗಿದ್ದೇವೆ. ಈ ಮಸೂದೆ ತಾರತಮ್ಯವನ್ನು ಮತ್ತಷ್ಟು ಹೆಚ್ಚು ಮಾಡುವ ಬಿಜೆಪಿಯ ನಡೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಬುಧವಾರ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕಮಲ್ ಹಾಸನ್, ಸುಪ್ರೀಂಕೋರ್ಟ ನಲ್ಲಿ ಹೊಸ ಕಾನೂನು ವಿರೋಧಿಸಿ ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿಗಳ ಮುಂದೆ ಡಿಸೆಂಬರ್ 18 ರಂದು ವಿಚಾರಣೆಗೆ ಬರಲಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ಆರೋಗ್ಯವಂತ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ಮಾಡಲು ಹೊರಟಂತಿದೆ. ಮಸೂದೆಗೆ ತಿದ್ದುಪಡೆ ತರುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನಕ್ಕೆ ದ್ರೋಹ ಮಾಡಲು ಹೊರಟಿದೆ. ಕೇಂದ್ರದ ಇಂತಹ ನಡೆಯನ್ನು ನವಭಾರತದ ಯುವಕರು ಖಂಡಿಸಬೇಕು ಮತ್ತು ಮುಂದೆ ಇಂತಹ ಕೆಲಸಕ್ಕೆ ಇಳಿಯದಂತೆ ಪಾಠ ಕಲಿಸಬೇಕು ಎಂದು ಅವರು ಹೇಳಿದ್ದಾರೆ.

ವಿವಾದಿತ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ಮಸೂದೆ ಸಂಸತ್ ನಲ್ಲಿ ಅನುಮೋದನೆ ಪಡೆದುಕೊಂಡು ಕಾನೂನಾಗಿದೆ. ಇದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈಶಾನ್ಯ ಭಾರತದಲ್ಲಿ ಹಾಗೂ ದೆಹಲಿಯಲ್ಲಿ ಹಿಂಸಾಚಾರಗಳು ನಡೆಯುತ್ತಿವೆ. ಪ್ರತಿಭಟನೆ ಈಶಾನ್ಯ ರಾಜ್ಯಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.












Click it and Unblock the Notifications