ದಾಖಲೆಯ ಕಬಾಲಿ ಬಿಡುಗಡೆಗೆ 'ಲಿಂಗಾ' ಕಂಟಕ

Written By:
Subscribe to Oneindia Kannada

ಚೆನ್ನೈ, ಜುಲೈ, 21: ತರೆಗೆ ಅಪ್ಪಳಿಸುವ ಮುನ್ನವೇ ದಾಖಲೆ ಮಾಡಿರುವ 'ಕಬಾಲಿ' ಬಿಡುಗಡೆಗೆ ಆತಂಕ ಎದುರಾಗಿದೆ. ಹೌದು.. ರಜನಿಕಾಂತ್ ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರವೇ ಶತ್ರು ಸ್ಥಾನದಲ್ಲಿ ನಿಂತಿದೆ.

ಹವಾ ಎಬ್ಬಿಸಿರುವ ಕಬಾಲಿ ಬಿಡುಗಡೆಗೆ 'ಲಿಂಗಾ' ಕಂಟಕ ಎದುರಾಗಿದೆ. ಮದ್ರಾಸ್ ಹೈ ಕೋರ್ಟ್ ರಜನಿಕಾಂತ್ ಅವರಿಗೆ ನೋಟಿಸ್ ಸಹ ನೀಡಿದೆ.[ಬ್ರೇಕಿಂಗ್ ನ್ಯೂಸ್: 'ಕಬಾಲಿ' ಎಂಟ್ರಿ ಸೀನ್ ಆನ್ ಲೈನ್ ನಲ್ಲಿ ಲಭ್ಯ.!]

ಕಬಾಲಿ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ 'ಲಿಂಗಾ' ವಿತರಕರು ಮದ್ರಾಸ್ ಹೈಕೋರ್ಟ್ ಗೆ ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆ ನಂತರ ರಜನೀಕಾಂತ್ ಗೆ ನೋಟಿಸ್ ನೀಡಲಾಗಿದೆ. ಹಾಗಾದರೆ ಕಬಾಲಿ ಬಿಡುಗಡೆಗೆ ಅಡ್ಡಿ ಉಂಟಾಗಲು ಏನು ಕಾರಣ? ಲಿಂಗಾಕ್ಕೂ ಇದಕ್ಕೂ ಏನು ಸಂಬಂಧ..ಮುಂದಕ್ಕೆ ಓದಿ...[ಕಬಾಲಿ ಬಿಡುಗಡೆಗೆ ಎದುರಾಗಿದ್ದ ವಿಘ್ನ ದೂರ]

ಕತೆ ಏನು?

ಕತೆ ಏನು?

2014ರಲ್ಲಿ ತೆರೆಕಂಡಿದ್ದ ಲಿಂಗಾ ಚಿತ್ರ ವಿತರಕರಿಗೆ ನಷ್ಟ ಉಂಟುಮಾಡಿತ್ತು. 89 ಲಕ್ಷ ರೂ. ನೀಡುವುದಾಗಿ ನಟ ರಜನಿಕಾಂತ್ ವಿತರಕರಿಗೆ ಭರವಸೆ ನೀಡಿದ್ದರು. ಆದರೆ ಈ ಮೊತ್ತ ಪಾವತಿಯಾಗದ ಕಾರಣ ತಡೆ ನೀಡಬೇಕು ಎಂದು ವಿತರಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

22 ಕ್ಕೆ ಬಿಡುಗಡೆ

22 ಕ್ಕೆ ಬಿಡುಗಡೆ

ಕಬಾಲಿ ಜುಲೈ 22 ಕ್ಕೆ ಬಿಡುಗಡೆಗೆ ಸಿದ್ಧವಾಗಿ ನಿಂತಿದ್ದಾನೆ. ಹಳೆಯ ದಾಖಲೆಗಳನ್ನೆಲ್ಲ ಮುರಿದ ರಜನಿಕಾಂತ್ ಚಿತ್ರ ಪ್ರಪಂಚದಾದ್ಯಂತ ಏಕಕಾಲಕ್ಕೆ ತೆರೆ ಮೇಲೆ ಬರಲಿದೆ.

ಗುರುವಾರವೇ ತೀರ್ಪು

ಗುರುವಾರವೇ ತೀರ್ಪು

ಲಿಂಗಾ ವಿತರಕರ ಮನವಿ ಆಲಿಸುವ ನ್ಯಾಯಾಲಯ ಗುರುವಾರವೇ ತೀರ್ಪು ನೀಡಲಿದ್ದು ಕಬಾಲಿ ಬಿಡುಗಡೆಯಾಗುತ್ತದೆಯೋ? ಇಲ್ಲವೋ ಎಂದು ಹೇಳಲಿದೆ.

ಸೋರಿಕೆಯಾಗಿದೆಯೇ?

ಸೋರಿಕೆಯಾಗಿದೆಯೇ?

ಇನ್ನೊಂದೆಡೆ ಕಬಾಲಿ ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ ಎಂಬ ಗುಲ್ಲು ಎದ್ದಿದೆ. ಬರೋಬ್ಬರಿ 225ಕ್ಕೂ ಹೆಚ್ಚು ವೆಬ್ ಸೈಟ್ ಗಳಲ್ಲಿ ಹಾಗೂ ಟೊರೆಂಟ್ ತಾಣಗಳಲ್ಲಿ 'ಕಬಾಲಿ' ಫುಲ್ ಸಿನಿಮಾ ಲೀಕ್ ಆದ ಮಾಹಿತಿ ಬಂದ ಕೂಡಲೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ನಿರ್ಮಾಪಕ ಕಲೈಪುಲಿ.ಎಸ್.ಧನು ಆ ಎಲ್ಲಾ ತಾಣಗಳನ್ನ ಬ್ಲಾಕ್ ಮಾಡಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Madras high court on Thursday issued notice to Rajinikanth on a petition seeking to restrain release of his new film, Kabali, until he paid Rs 89 lakh, promised as compensation, to distributor of his previous outing, Lingaa, which released in 2014.
Please Wait while comments are loading...