ಜಯಾ ಸೊಸೆ ದೀಪಾ ಜಯಕುಮಾರ್ ರಿಂದ ಹೊಸ ಪಕ್ಷ ಘೋಷಣೆ
ತಮಿಳರ ಪಾಲಿನ 'ಅಮ್ಮ' ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಅವರು ತಮ್ಮ ಹೊಸ ಪಕ್ಷದ ಹೆಸರು ಘೋಷಿಸಿದ್ದಾರೆ. ಹೊಸ ಪಕ್ಷಕ್ಕೆ 'ಎಂಜಿಆರ್ ಅಮ್ಮ ದೀಪಾ ಪೆರವೈ' ಎಂದು ಹೆಸರಿಡಲಾಗಿದೆ.
ಚೆನ್ನೈ, ಫೆಬ್ರವರಿ 24: ತಮಿಳರ ಪಾಲಿನ 'ಅಮ್ಮ' ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಅವರು ತಮ್ಮ ಹೊಸ ಪಕ್ಷದ ಹೆಸರು ಘೋಷಿಸಿದ್ದಾರೆ. ಹೊಸ ಪಕ್ಷಕ್ಕೆ 'ಎಂಜಿಆರ್ ಅಮ್ಮ ದೀಪಾ ಪೆರವೈ' ಎಂದು ಹೆಸರಿಡಲಾಗಿದೆ.
ಶುಕ್ರವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಹೊಸ ಪಕ್ಷದ ಕಚೇರಿ ಉದ್ಘಾಟಿಸಿದ್ದ ದೀಪಾ ಅವರು ಸಂಜೆ ವೇಳೆಗೆ ಹೊಸ ಪಕ್ಷದ ಹೆಸರು ಹಾಗೂ ಲಾಂಚನವನ್ನು ಬಿಡುಗಡೆ ಮಾಡಿದ್ದಾರೆ.

ಜತೆಗೆ ಜಯಲಲಿತಾ ಅವರು ಸ್ಪರ್ಧಿಸುತ್ತಿದ್ದ ಆರ್ ಕೆ ನಗರ ವಿಧಾನಸಭಾ ಕ್ಷೇತ್ರದಿಂದಲೇ ಮುಂದಿನ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.












Click it and Unblock the Notifications