ಕೊನೆಗೂ ಐಸಿಯುನಿಂದ ಹೊರ ಬಂದ ಜಯಲಲಿತಾ

By: ವಿಕಾಸ್ ನಂಜಪ್ಪ
Subscribe to Oneindia Kannada

ಚನ್ನೈ, ನವೆಂಬರ್ 19: ಹಲವು ದಿನಗಳಿಂದ ಅಪೊಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜಯಲಲಿತಾ ಅವರನ್ನು ಐಸಿಯು ಯಿಂದ ಸ್ಥಳ ಬದಲಾಯಿಸಲಾಗಿದೆ. ಇನ್ನು ನಾಲ್ಕು ದಿನಗಳಲ್ಲಿ ಅವರು ಬಿಡುಗಡೆಯಾಗಬಹುದು ಎನ್ನುತ್ತಿದ್ದಾರೆ ವೈದ್ಯರು.

ಎರಡು ದಿನಗಳ ಹಿಂದೆ ಅವರನ್ನು ಐಸಿಯುನಲ್ಲಿ ಸೋಂಕಿನ ಸಂಬಂಧ ಚಿಕಿತ್ಸೆ ನೀಡಲಾಗುತ್ತಿತ್ತು. ಹಾಗೆಯೇ ಡಾಕ್ಟರ್ ಅವರ ಆರೋಗ್ಯ ಸುದಾರಿಸಿದೆ, ಯಾವ ಸಮಯದಲ್ಲಾದರೂ ಮನೆಗೆ ತೆರಳಬಹುದು ಎಂದು ಹೇಳಿದ್ದರು.

ಇನ್ನು ಶನಿವಾರವೇ ಜಯಾ ಅವರು ಬಿಡುಗಡೆಯಾಗಿ ಬಿಡುತ್ತಾರೆ ಎಂಬ ವದಂತಿ ತಮಿಳುನಾಡಿನೆಲ್ಲೆಡೆ ಹರಿದಾಡುತ್ತಿತ್ತು. ಆದರೆ ಅವರು ಇನ್ನು ನಾಲ್ಕು ದಿನಗಳಲ್ಲಿ ಬಿಡುಗಡೆಯಾಗ ಬಹುದು ಎಂದು ಅಪೊಲೋ ಡಾಕ್ಟರ್ ಪ್ರದೀಪ್‌ ರೆಡ್ಡಿ ತಿಳಿಸಿದ್ದರು.[ಇದು ನನ್ನ ಪುನರ್ಜನ್ಮ: ಚೇತರಿಕೆ ನಂತರ 'ಅಮ್ಮ' ಮೊದಲ ಹೇಳಿಕೆ]

jaya

ಹಾಗೆಯೇ ಅವರ ಮಾನಸಿಕ ಸೈರ್ಯವೂ ಹೆಚ್ಚಿದ್ದು, ಸೋಂಕಿನ ಕೊನೆ ಪರೀಕ್ಷೆಗಾಗಿ ಐಸಿಯುನಲ್ಲಿ ಅವರಿದ್ದಾರೆ ಎಂದು ಹೇಳಿದ್ದರು.

ಜಯಲಲಿತಾರವರು ಆಸ್ಪತ್ರೆಗೆ ದಾಖಲಾಗಿದ್ದು ಸೆ.22 ರಂದು. ಅದೂ ದೇಹದಲ್ಲಿ ನೀರಿನ ಕೊರತೆ, ಜ್ವರದ ಕಾರಣದಿಂದ ಅವರು ಈಗ ಸುಧಾರಿಸಿದ್ದು ಆಹಾರವನ್ನು ಸೇವಿಸುತ್ತಿದ್ದಾರೆ. ಅವರಿಗೆ ಹೆಚ್ಚಿನ ಸತ್ವಯುಕ್ತ ಆಹಾರ ನೀಡಲಾಗುತ್ತಿದೆ ಎಂದು ರೆಡ್ಡಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tamil Nadu chief minister J Jayalalithaa has been shifted out of ICU. She was taken to the ICU two days back to avoid cross infection. Earlier it was stated that she may discharged from the Appolo hospital in anither four days.
Please Wait while comments are loading...