ಜಯಲಲಿತಾ ಆರೋಗ್ಯ ಪರಿಸ್ಥಿತಿ ಮುಚ್ಚಿಡುವ ಅಗತ್ಯವೇನು: ಡಿಎಂಕೆ ಪ್ರಶ್ನೆ

Posted By: Prithviraj
Subscribe to Oneindia Kannada

ಚೆನ್ನೈ, ಅಕ್ಟೋಬರ್, 13 : ಕಳೆದ 19 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಪರಿಸ್ಥಿತಿಯನ್ನು ಮುಚ್ಚಿಡುವ ಅಗತ್ಯವಾದರೂ ಏನು ಪ್ರತಿಪಕ್ಷ ಡಿಎಂಕೆ ಪ್ರಶ್ನಿಸಿದೆ.

ಡಿಎಂಕೆ ವರಿಷ್ಠ ಎಂ. ಕರುಣಾನಿಧಿಯವರು ಹಲವು ಬಾರಿ ಮನವಿ ಮಾಡಿದರೂ ಮುಖ್ಯಮಂತ್ರಿಯವರ ಭೇಟಿಗೆ ನಿರಾಕರಿಸಿರುವ ಹಿಂದಿನ ಉದ್ದೇಶವಾದರೂ ಏನು ಎಂದು ಡಿಎಂಕೆ ಕಿಡಿಕಾರಿದೆ.

ಈ ಮಧ್ಯೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಜಯಲಲಿತಾ ಅವರನ್ನು ಭೇಟಿ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಇತರೆ ನಾಯಕರಂತೆ ಅವರೂ ಸಹ ಕೇವಲ ವೈದ್ಯರನ್ನು ಭೇಟಿ ಮಾಡಿ, ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಪಡೆದು ಟ್ವಿಟ್ಟರ್ ನಲ್ಲಿ ಹೇಳಿಕೆ ನೀಡಿರಬಹುದು ಎಂದು ಡಿಎಂಕೆ ಆರೋಪಿಸಿದೆ.[ಅಜಿತ್ -ತಮಿಳುನಾಡಿನ ಮುಂದಿನ ಸಿಎಂ: ಜಯಲಲಿತಾ ಆಸೆ]

ಮುಖ್ಯಮಂತ್ರಿಯವರ ಆರೋಗ್ಯ ಪರಿಸ್ಥಿತಿ ಕುರಿತು ಆಸ್ಪತ್ರೆ ಹೊರಡಿಸುತ್ತಿರುವ ಅಧಿಕೃತ ಪ್ರಕಟಣೆ ಹಾಗೂ ಎಐಎಡಿಎಂಕೆ ಪಕ್ಷದ ವಕ್ತಾರೆ ಸಿ. ಸರಸ್ವತಿ ನೀಡುತ್ತಿರುವ ಹೇಳಿಕೆಗಳಿಂದ ಮಾತ್ರ ತಿಳಿಯುತ್ತಿದೆ. ಇದರ ಹೊರತಾಗಿ ಬೇರೆ ಯಾವ ಮಾಹಿತಿಯೂ ಇಲ್ಲ ಎಂದು ಡಿಎಂಕೆ ಹೇಳಿದೆ.[ಜಯಲಲಿತಾ ಆರೋಗ್ಯ ಮಾಹಿತಿ ಕೋರಿ ರಾಷ್ಟ್ರಪತಿಗೆ ಪತ್ರ]

ಇನ್ನು ಸಿ. ಸರಸ್ವತಿ ನೀಡುತ್ತಿರುವ ಹೇಳಿಕೆಗಳು " ಒಂದೇ ರೀತಿ ಆಗಿದ್ದು, ಹೇಳಿಕೆಗಳ ಪುನರುಚ್ಛಾರ ಬಿಟ್ಟರೆ ಬೇರೆ ಯಾವ ಮಾಹಿತಯೂ ಅವರಿಂದ ಲಭ್ಯವಾಗಿಲ್ಲ ಎಂದು ಡಿಎಂಕೆ ಆರೋಪಿಸಿದೆ.

ಜಯಲಲಿತಾ ಆರೋಗ್ಯ ಪರಿಸ್ಥಿತಿ ಮುಚ್ಚಿಡುವ ಅಗತ್ಯವೇನು: ಡಿಎಂಕೆ ಪ್ರಶ್ನೆ

"ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯವನ್ನು ತಜ್ಞ ವೈದ್ಯರು ಪರಿಶೀಲಿಸುತ್ತಿದ್ದಾರೆ. ಅವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಶ್ವಾಸಕೋಶ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಇತರೆ ಎಲ್ಲಾ ಕ್ರಮಗಳನ್ನು ವೈದ್ಯರು ತೆಗೆದುಕೊಂಡಿದ್ದಾರೆ" ಅಕ್ಟೋಬರ್ 8ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿತ್ತು.

ಈ ಪ್ರಕಟಣೆಯಿಂದ ಕೇವಲ ಅವರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಮಾತ್ರ ತಿಳಿಯುತ್ತಿದೆ. ಅವರು ಎದುರಿಸುತ್ತಿರುವ ನಿಜವಾದ ಪರಿಸ್ಥಿತಿ ಏನು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಇದು ರಾಜ್ಯದ ಜನರಲ್ಲಿ ಅನುಮಾನು ಮೂಡಿಸುತ್ತಿದ್ದು, ವದಂತಿಗಳು ಹರಡುತ್ತಿವೆ ಎಂದು ಡಿಎಂಕೆ ಹೇಳಿದೆ.

ಮುಖ್ಯಮಂತ್ರಿಯವರ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡುತ್ತಿರುವ 43ಕ್ಕೂ ಹೆಚ್ಚು ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Is the helth of the Tamil Nadu chief minister an official secret, the DMK asks. The DMK's patriach, M Karunanidhi has several times questioned why no leader is being allowed to meet the Chief Minister in the hospital.
Please Wait while comments are loading...