ಮೇಲಧಿಕಾರಿಯ ಕಿರುಕುಳ ಐಪಿಎಸ್ ಹರೀಶ್ ಜೀವ ತಿಂದಿತೆ?

ಚೆನ್ನೈ, ಫೆಬ್ರವರಿ, 20 : ನಿಗೂಢ ರೀತಿಯಲ್ಲಿ ಚೆನ್ನೈನಲ್ಲಿ ಸಾವನ್ನಪ್ಪಿದ ಕನ್ನಡಿಗ ಐಪಿಎಸ್ ಅಧಿಕಾರಿ ಎನ್.ಹರೀಶ್ ಅವರ ಸಾವಿನ ಬಗ್ಗೆ ಹಲವಾರು ಅನುಮಾನಗಳು ಕಾಡುತ್ತಲೆ ಇವೆ.

ಪೊಲೀಸರು ಮತ್ತು ಮಾಧ್ಯಮಗಳ ವರದಿಯಂತೆ ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಈಗ ಹರಿದಾಡುತ್ತಿರುವ ವಾಟ್ಸಪ್ ಸಂದೇಶಗಳು ಬೇರೆಯದೇ ಕತೆಯನ್ನು ಹೇಳುತ್ತಿವೆ, ಹರೀಶ್ ಸಾವಿನ ನಂತರ ವಾಟ್ಸಪ್ ಸಂದೇಶವೊಂದು ತಮಿಳುನಾಡಿನಲ್ಲಿ ಹರಿದಾಡುತ್ತಿದ್ದು ಹರೀಶ್ ಸಾವಿಗೆ ತಮಿಳುನಾಡಿನ ಮಾಜಿ ಡಿಜಿಪಿ ರಾಮಾನುಜಂ ಕಾರಣ ಎಂದು ಹೇಳುತ್ತಿದೆ.[ಹುಟ್ಟೂರಲ್ಲಿ ಹರೀಶ್ ಅಂತ್ಯಕ್ರಿಯೆ]

ips

"ಹಿರಿಯ ಅಧಿಕಾರಿಗಳು ಆತನನ್ನು (ಹರೀಶ್) ರಕ್ಷಿಸುವ ಕೆಲಸ ಮಾಡಲಿಲ್ಲ. ಇದೀಗ "ಅಮ್ಮ" ಹರೀಶ್ ಬಗ್ಗೆ ಸರಿಯಾಗಿಯೇ ನಡೆದುಕೊಂಡಿದ್ದಾರೆ. ಅವರ ತೇಜೋವಧೆ ಮಾಡಲಾಗಿದೆ, ಇದಕ್ಕೆ ಕಾರಣ ನೀವೇ ಅಲ್ಲದೇ ಬೇರೆ ಯಾರೂ ಅಲ್ಲ" ಎಂಬ ಸಂದೇಶ ಹರಿದಾಡುತ್ತಿದ್ದು ರಾಮಾನುಜಂ ಕಡೆ ಬೆರಳು ಮಾಡುತ್ತಿವೆ. ಅಷ್ಟಕ್ಕೂ ಈ ಸಂದೇಶವನ್ನು ಬರೆದವರು ಯಾರು ಎಂಬುದರ ಕುರಿತಾಗಿ ನಿಖರತೆ ಇಲ್ಲ.[ನಿಗೂಢ ಸಾವನ್ನಪ್ಪಿದ ಕನ್ನಡಿಗ ಅಧಿಕಾರಿ]

ಸಂದೇಶ ಹಿರಿಯ ಪೊಲೀಸ್ ಅಧಿಕಾರಿಗಳ ಮೊಬೈಲ್ ಗೂ ತಲುಪಿದೆ. ನೀವು ಪ್ರಮೋಶನ್ ಗಾಗಿ ಅವರನ್ನು ಅಲೆದಾಡಿಸಿದಿರಿ. ಬೇಡಿಕೊಳ್ಳುವಂತೆ ಮಾಡಿದಿರಿ , ಅಮೇಲೆ ಕಾರಣ ನೀಡದೆ ಪ್ರಮೋಶನ್ ಹಿಂದಕ್ಕೆ ಪಡೆದುಕೊಂಡಿರಿ ಎಂದು ನೇರವಾಗಿ ರಾಮಾನುಜಂ ಅವರನ್ನು ಉದ್ದೇಶಿಸಿಯೇ ಸಂದೇಶ ಬರೆಯಲಾಗಿದೆ.

ಹರೀಶ್ ಸಾವಿನ ನಂತರ ಮಾತನಾಡಿದ್ದ ರಾಮಾನುಜಂ, ಅವರು ತಮಿಳು ಪರೀಕ್ಷೆಯಲ್ಲಿ ಪಾಸ್ ಆಗಿರಲಿಲ್ಲ. ಇದೇ ಕಾರಣಕ್ಕೆ ಪ್ರಮೋಶನ್ ನೀಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದರು.[ಡಿಕೆ ರವಿಯದು ಆತ್ಮಹತ್ಯೆ ಎಂದು ಶರಾ ಬರೆದ ಸಿಬಿಐ]

ಹರೀಶ್ ಬ್ಯಾಚ್ ಮೇಟ್ ಗಳು ಹೇಳುವ ಪ್ರಕಾರ ಇನ್ನು ವಿಭಿನ್ನವಾಗಿದೆ. ಹರೀಶ್ ಪುಸ್ತಕ ಪ್ರೇಮಿಯಾಗಿದ್ದರು. ಆತ ಒಬ್ಬ ಒಳ್ಳೆಯ ಮನುಷ್ಯ, ಕೊಂಚ ನಾಚಿಕೆ ಸ್ವಭಾವದವ. ನಾನು ಸಹ ಆತನ ಬಳಿಯಿಂದಲೇ ಪುಸ್ತಕವನ್ನು ಕೊಂಡು ಹೋಗುತ್ತಿದ್ದೆ ಎಂದು ಸಿಐಡಿ ವಿಭಾಗದ ಲಾಡಾ ಮಾರ್ಟಿನ್ ಹೇಳುತ್ತಾರೆ,

ಒಟ್ಟಿನಲ್ಲಿ ಹರೀಶ್ ಸಾವು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅದಕ್ಕೆ ಉತ್ತರ ಬರಬೇಕೆಂದರೆ ಸಮಗ್ರ ತನಿಖೆಯೊಂದೇ ದಾರಿ. ಆದರೆ ತಮಿಳುನಾಡು ಸರ್ಕಾರದಿಂದ ಅಂಥದನ್ನು ನಿರೀಕ್ಷೆ ಮಾಡಲು ಸಾಧ್ಯವೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+