ಹಿಂದಿ ಭಾಷೆ ಡೈಪರ್ ನಲ್ಲಿರುವ ಕೂಸು: ಕಮಲ್ ಹಾಸನ್ ವ್ಯಂಗ್ಯ
Recommended Video
Kamal Haasan : Hindi Is Still A Tittle Child Diapers | Oneindia Kannada
ಚೆನ್ನೈ, ಅಕ್ಟೋಬರ್ 04: "ಹಿಂದಿ ಇನ್ನೂ ಡೈಪರ್ ನಲ್ಲಿರುವ ಕೂಸು, ಭಾರತದ ಇತರ ಭಾಷೆಗಳ ಪ್ರಾಚೀನತೆಗೆ ಹೋಲಿಸಿದರೆ ಹಿಂದಿ ತೀರಾ ಹೊಸತು" ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ.
ಹಿಂದಿ ಹೇರಿಕೆಯ ಬಗ್ಗೆ ದಕ್ಷಿಣ ಭಾರತದ ರಾಜ್ಯಗಳು ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಕಮಲ್ ಹಾಸನ್ ಈ ರೀತಿ ವ್ಯಂಗ್ಯ ಮಾಡಿದ್ದಾರೆ.
"ತಮಿಳು, ಸಂಸ್ಕೃತ, ತೆಲುಗು ಭಾಷೆಗಳಿಗೆ ಹೋಲಿಸಿದರೆ ಹಿಂದು ಈಗಷ್ಟೇ ಹುಟ್ಟಿರುವ ಭಾಷೆ. ನಾನು ಈ ಮಾತನ್ನು ಅಪಹಾಸ್ಯದಿಂದ ಹೇಳುತ್ತಿಲ್ಲ. ನನಗೆ ಆ ಭಾಷೆಯ ಬಗ್ಗೆ ಇರುವ ಎಲ್ಲ ಗೌರವಗಳೊಂದಿಗೇ ಹೇಳುತ್ತಿದ್ದೇನೆ. ಆ ಭಾಷೆಯ ಬಗ್ಗೆ ನಮಗೂ ಗೌರವವಿದೆ, ಆದರೆ ಅದನ್ನು ಒತ್ತಾಯದಿಂದ ಯಾರ ಮೇಲೂ ಹೇರುವುದಕ್ಕೆ ಹೋಗಬಾರದು ಎಂಬುದು ನನ್ನ ಭಾವನೆ" ಎಂದು ಕಮಲ್ ಹಾಸನ್ ಹೇಳಿದರು.

ಇತ್ತೀಚೆಗಷ್ಟೇ ಹಿಂದಿ ಹೇರಿಕೆಯ ಬಗ್ಗೆ ಮಾತನಾಡಿದ್ದ ಕಮಲ್ ಹಾಸನ್, ಭಾಷಾ ಹೋರಾಟ ಜಲ್ಲಿಕಟ್ಟು ಹೋರಾಟಕ್ಕಿಂತ ಹೆಚ್ಚು ಉಗ್ರವಾಗಿರುತ್ತದೆ ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದರು.












Click it and Unblock the Notifications