ತಮಿಳುನಾಡು; ಭಾರೀ ಮಳೆ 3 ಸಾವು, 4 ಜಿಲ್ಲೆಯಲ್ಲಿ ರೆಡ್ ಅಲರ್ಟ್

ಚೆನ್ನೈ, ಡಿಸೆಂಬರ್ 30; ತಮಿಳುನಾಡಿನಲ್ಲಿ ಭಾರೀ ಮಳೆಯಾಗಿದೆ. ರಾಜ್ಯದಲ್ಲಿ ಒಟ್ಟು 3 ಜನರು ಮೃತಪಟ್ಟಿದ್ದಾರೆ. ಚೆನ್ನೈನ ವಿವಿಧ ಪ್ರದೇಶಗಳು ಜಲಾವೃತವಾಗಿವೆ. ಶುಕ್ರವಾರವೂ ಸಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಕರಾವಳಿ ಭಾಗದಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು, ಚೆನ್ನೈ, ಕಾಂಚಿಪುರಂ, ತಿರುವಳ್ಳೂರು ಮತ್ತು ಚೆಂಗಲ್‌ಪೇಟೆನಲ್ಲಿ ಭಾರೀ ಮಳೆ ಮುನ್ಸೂಚನೆ ಇದೆ. ಹವಾಮಾನ ಇಲಾಖೆ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.

Heavy Rain In Tamil Nadu 3 Killed Red Alert In 4 Districts

ತಮಿಳುನಾಡಿನ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಸಚಿವ ಕೆ. ರಾಮಚಂದ್ರನ್ ಮಾತನಾಡಿದ್ದು, "ರಾಜ್ಯದಲ್ಲಿ ಮಳೆಯ ಅನಾಹುತದಿಂದ ಮೂವರು ಮೃತಪಟ್ಟಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ 24 ಗಂಟೆಯಲ್ಲಿ 20 ಸೆಂ. ಮೀ. ಮಳೆಯಾಗುವ ಮುನ್ಸೂಚನೆ ಇದೆ" ಎಂದು ಹೇಳಿದ್ದಾರೆ.

ಚೆನ್ನೈ ನಗರದಲ್ಲಿ ಸುಮಾರು 17 ಸೆಂ. ಮೀ. ಮಳೆಯಾಗಿದೆ. ಇದರಿಂದಾಗಿ ನಗರದ ಹಲವಾರು ರಸ್ತೆಗಳು ಜಾಲವೃತವಾಗಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಟ ನಡೆಸುತ್ತಿದ್ದಾರೆ.

ಮಳೆಯಿಂದಾಗಿ ಚೆನ್ನೈನ ಮೌಂಟ್ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. ಜನರಿಗೆ ಅನುಕೂಲವಾಗಲು ರಾತ್ರಿ 12 ಗಂಟೆಯ ತನಕ ಮೆಟ್ರೋ ರೈಲು ಓಡಿಸಲಾಗುತ್ತದೆ ಎಂದು ಚೆನ್ನೈ ಮೆಟ್ರೋ ನಿಗಮ ಘೋಷಣೆ ಮಾಡಿದೆ.

ಗುರುವಾರ ರಾತ್ರಿ ಭಾರೀ ಮಳೆಯಾಗಬಹುದು. ಶುಕ್ರವಾರ ರಾಜ್ಯದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 6 ಗಂಟೆಗಳ ಕಾಲ ಚೆನ್ನೈ ಮತ್ತು ಸುತ್ತಮುತ್ತಲು ಮುಳೆ ಮುಂದುವರೆಯುವ ಸಾಧ್ಯತೆ ಇದೆ.

ರಾತ್ರಿ 8.30ರ ಮಾಹಿತಿಯಂತೆ ಚೆನ್ನೈ (ಎಂಆರ್‌ಸಿ ನಗರ) 198 ಮಿ. ಮೀ., ನಾಗಬಾಕಂನಲ್ಲಿ 160 ಮಿ. ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.

ಗುರುವಾರ ಮಧ್ಯಾಹ್ನದಿಂದ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ 17.65 ಸೆಂ. ಮೀ. ಮಳೆ ಎಂಆರ್‌ಸಿ ನಗರದಲ್ಲಿ ದಾಖಲಾಗಿದೆ. ನಾಗಬಾಕಂನಲ್ಲಿ 14.65 ಸೆಂ. ಮೀ. ಮತ್ತು ಮೀನಬಾಕಂನಲ್ಲಿ 10 ಸೆಂ. ಮೀ. ಮಳೆಯಾಗಿದೆ.

ತಮಿಳುನಾಡಿನ ಉತ್ತರ ಕರಾವಳಿ, ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನವೆಂಬರ್ ತಿಂಗಳಿನಲ್ಲಿಯೂ ತಮಿಳುನಾಡಿನಲ್ಲಿ ಭಾರೀ ಮಳೆಯಾಗಿತ್ತು.

ಭಾರತದ ಪೂರ್ವ ಹಾಗೂ ಈಶಾನ್ಯ ಭಾಗದಲ್ಲಿ ಐದು ದಿನಗಳ ಕಾಲ ಮಳೆ ಮುನ್ಸೂಚನೆ ನೀಡಲಾಗಿದೆ. ಛತ್ತೀಸ್‌ಗಢ್, ವಿದರ್ಭ, ಜಾರ್ಖಂಡ್, ಓಡಿಶಾದಲ್ಲಿಯೂ ಮುಂದಿನ 24 ಗಂಟೆ ಮಳೆಯಾಗುವ ನಿರೀಕ್ಷೆ ಇದೆ.

ಭಾರತೀಯ ಹವಾಮಾನ ಇಲಾಖೆ ಅರುಣಾಚಲ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯದ ಹಲವು ಕಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ.

ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶದಲ್ಲಿ ಚದುರಿದಂತೆ ಮಳೆಯಾಗಲಿದೆ. ಹಿಮ ಸುರಿಯಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ. ಜನವರಿ 7ರ ಬಳಿಕ ವಾತಾವರಣದಲ್ಲಿ ಮತ್ತೆ ಬದಲಾವಣೆಯಾಗಲಿದೆ ಎಂದು ತಿಳಿಸಲಾಗಿದೆ.

ಈ ವರ್ಷ ಮುಂಗಾರು ಅವಧಿಯಲ್ಲಿ ಆರಂಭವಾದ ಮಳೆ ನವೆಂಬರ್ ತನಕ ಸುರಿದಿದೆ. ವಿವಿಧ ರಾಜ್ಯಗಳಲ್ಲಿ ಅಕಾಲಿಕ ಮಳೆ ಸುರಿದಿದ್ದು, ಅಪಾರ ಹಾನಿ ಮಾಡಿದೆ. ಡಿಸೆಂಬರ್‌ ತಿಂಗಳಿನಲ್ಲಿಯೇ ಮಳೆ ಬಿಡುವು ಕೊಟ್ಟಿತ್ತು. ತಿಂಗಳ ಅಂತ್ಯಕ್ಕೆ ಮತ್ತೆ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+