ತಮಿಳುನಾಡಿಗೆ ಈ ಬಾರಿ ಉತ್ತಮ ಮಳೆ ನಿರೀಕ್ಷೆ

Posted By:
Subscribe to Oneindia Kannada

ಚೆನ್ನೈ, ಸೆ. 29: ಕಾವೇರಿ ನೀರು ಸಿಗದೆ ಪರಿತಪಿಸುತ್ತಿರುವ ತಮಿಳುನಾಡಿನ ಜನತೆಗೆ ಒಳ್ಳೆಯ ಸುದ್ದಿ ಇಲ್ಲಿದೆ. 2016 ನೇ ಸಾಲಿನ ಮುಂದಿನ 3 ತಿಂಗಳು ತಮಿಳುನಾಡಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಭೂ ವಿಜ್ಞಾನ ಮತ್ತು ಭಾರತೀಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬುಧವಾರ ರಾತ್ರಿ ಚೆನ್ನೈ ನಗರದ ಅನೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಸಿಕ್ಕಿದೆ.

ನುಂಗಂಬಾಕ್ಕಮ್ ನಲ್ಲಿ 82 ಮಿ.ಮೀ ಮಳೆಯಾಗಿದ್ದರೆ, ಮೀನಂ ಬಾಕ್ಕಂನಲ್ಲಿ 77 ಮಿ.ಮೀ ಮಳೆ ದಾಖಲಾಗಿದೆ ಎಂದು ಸ್ಕೈಮೆಟ್ ವೆದರ್.ಕಾಂ ವರದಿ ಮಾಡಿದೆ. ಸಾಮಾನ್ಯವಾಗಿ 137.3 ಮಿ.ಮೀ ಮಳೆ ದಾಖಲಾಗುತ್ತಿತ್ತು. ಈ ಬಾರಿ 298 ಮಿ.ಮೀ ಮಳೆ ದಾಖಲಾಗಿದೆ.[ಉತ್ತರ ಭಾರತದಲ್ಲಿ ಭಾರೀ ಮಳೆ ಎಚ್ಚರಿಕೆ]

ಈಶಾನ್ಯ ಮಾರುತ ತಮಿಳುನಾಡಿಗೆ ಸಾಮಾನ್ಯವಾಗಿದ್ದು (ಪ್ರತಿಶತ ಶೇ. 90 ರಿಂದ 100 ರವರೆಗೆ) ಇರಲಿದೆ. 2015 ರಲ್ಲಿ ಭಾರತೀಯ ಹವಾಮಾನ ಇಲಾಖೆ ನೀಡಿದ್ದ ಮಾಹಿತಿ ಶೇ. 100 ರಷ್ಟು ನೈಜವಾಗಿದೆ. ಹೀಗಾಗಿ ಈ ಬಾರಿಯೂ ಮುನ್ಸೂಚನೆ ಕೈಕೊಡುವುದಿಲ್ಲ ಎಂಬ ನಂಬಿಕೆಯಿದೆ.[ಮಳೆಗೆ ಉತ್ತರ ಕರ್ನಾಟಕ ತತ್ತರ : ಅಪಾರ ಆಸ್ತಿಪಾಸ್ತಿ ನಷ್ಟ]

Heavy Rain expected in Tamil Nadu : Weather Forecast

ಶೇಕಡ 30 ರಷ್ಟು ಮಳೆ ತಮಿಳುನಾಡಿಗೆ ಈಶಾನ್ಯ ಮುಂಗಾರುನಿಂದ (ಅಕ್ಟೋಬರ್ ರಿಂದ ಡಿಸೆಂಬರ್ ವರೆಗೆ) ಬರಲಿದೆ. ಈ ಮಾರುತದಿಂದ ಈ ವರ್ಷ ಶೇಕಡ 48 ರಷ್ಟು ಮಳೆಯಾಗಲಿದೆ.

ಮಳೆಯ ಪ್ರಮಾಣವನ್ನು ಭಾರತೀಯ ಹವಾಮಾನ ಇಲಾಖೆ ಸತತವಾಗಿ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುತ್ತಿದೆ. ಇದಕ್ಕಾಗಿ (ಪಿಸಿಆರ್) 5 ಪ್ಯಾರಾಮೀಟರ್ ಪ್ರಿನ್ಸಿಪಲ್ ಕಾಂಪೋನೆಂಟ್ ರಿಗ್ರೆಷನ್ ವಿಧಾನವನ್ನು ಅಳವಡಿಸಿಕೊಂಡಿದೆ. ಅದರಂತೆಯೇ 4 (ಪಿಸಿಆರ್) ಮಾಡೆಲ್ ನ್ನು ಪ್ರತ್ಯೇಕವಾಗಿ ತಮಿಳುನಾಡಿನ ಹವಾಮಾನಕ್ಕಾಗಿಯೇ ಮೀಸಲಿರಿಸಲಾಗಿದೆ.[ನೀರು ರಕ್ಷಿಸಿ, ಇಲ್ಲಾ ಕಠಿಣ ಬೇಸಿಗೆ ಎದುರಿಸಿ, ಖಡಕ್ ಎಚ್ಚರಿಕೆ!]

Paddy field

ಇದನ್ನು ಬಳಸಿಕೊಂಡು ಮುನ್ಸೂಚನೆ ನೀಡಬಹುದಾದಲ್ಲಿ ಸಮಭಾಜಕ ವೃತ್ತದಿಂದ ಪೂರ್ವ ಪೆಸಿಫಿಕ್ ಕಡೆ ವಾಲಿ ತೀಕ್ಷಗೊಂಡಿದೆ. ಇದರನ್ವಯ ಬರುವ ಅಕ್ಟೋಬರ್ 2016 ರಿಂದ ಡಿಸೆಂಬರ್ 2016 ರವರೆಗೆ ತಮಿಳುನಾಡು, ಆಂಧ್ರ ಕರಾವಳಿ, ರಾಯಲಸೀಮ, ಕೇರಳ ಮತ್ತು ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಪ್ರತಿಶತ 90 ರಿಂದ 100 ರವರೆಗೆ ಮಳೆಯಾಗಲಿದೆ. (1951 ರಿಂದ 2000 ವರೆಗೆ 332.1 ಮೀ ಮಳೆಯಾಗಿದೆ)

2016 ನೆ ವರ್ಷದಲ್ಲಿ ತಮಿಳುನಾಡಿಗೆ ಉತ್ತಮ ಮಳೆಯಾಗುವ ಲಕ್ಷಣಗಳಿವೆ (ಶೇ. 90 ರಿಂದ 100 ರವರೆಗೆ) ತಮಿಳುನಾಡಿನಲ್ಲಿ ಈಶಾನ್ಯ ಮಾರುತದಿಂದ 1951 ರಿಂದ 2000 ರವರೆಗೆ 438.0 ಮಿ.ಮೀ. ಮಳೆಯಾಗಿರುತ್ತದೆ ಎಂದು ಕೇಂದ್ರ ಸರ್ಕಾರದ ಭೂ ವಿಜ್ಞಾನ ಮತ್ತು ಹವಾಮಾನ ಇಲಾಖೆ ನವದೆಹಲಿಯ ಪ್ರಕಟಣೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The trough from South Odisha to South Tamil Nadu across coastal Andhra Pradesh persists and, under its influence, rain or thundershowers are expected at many places across coastal Andhra Pradesh during the next 24 hours. Here is a reportSkymetweather.com for next three months.
Please Wait while comments are loading...