ಜರ್ಮನ್ ಮಹಿಳೆ ಮೇಲೆ ಹಾಡಹಗಲೇ ಸಾಮೂಹಿಕ ಅತ್ಯಾಚಾರ

ಚೆನ್ನೈ, ಏಪ್ರಿಲ್ 03 : ಇಪ್ಪತ್ನಾಲ್ಕು ವರ್ಷದ ಜರ್ಮನಿಯ ಮಹಿಳೆಯ ಮೇಲೆ ಹಾಡಹಗಲೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನ ಮಹಾಬಲಿಪುರಂನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಭಾರತದ ಪ್ರವಾಸಕ್ಕೆಂದು ಬಂದಿದ್ದ ತಂಡದಲ್ಲಿದ್ದ ಆಕೆಯನ್ನು ರೆಸಾರ್ಟೊಂದರ ಬಳಿ ಎಳೆದುಕೊಂಡು ಹೋಗಿ ಅಪರಿಚಿತ ದುರುಳರು ಅತ್ಯಾಚಾರ ಎಸಗಿದ್ದಾರೆ. ಆ ಸಮಯದಲ್ಲಿ ಜರ್ಮನಿಯ ಸಂಜಾತೆ ಏಕಾಂಗಿಯಾಗಿ ಸಂಚರಿಸುತ್ತಿದ್ದಳು.[ದೆಹಲಿಯಲ್ಲಿ ಮಹಿಳೆ ಮೇಲೆ ಬಿಪಿಓ ಉದ್ಯೋಗಿಗಳಿಂದ ಅತ್ಯಾಚಾರ]

German tourist gangraped in Mahabalipuram

ಖಾಸಗಿ ಬೀಚ್ ನಲ್ಲಿ ಸೂರ್ಯಸ್ನಾನ ಮಾಡುತ್ತಿದ್ದ ಮಹಿಳೆ, ನಂತರ ವಾಯು ವಿಹಾರಕ್ಕೆಂದು ಏಕಾಂಗಿಯಾಗಿ ಹೊರಟಿದ್ದಾರೆ. ಹೊರಟವರು ತುಂಬ ದೂರ ಸಾಗಿ ನಿರ್ಜನ ಪ್ರದೇಶ ತಲುಪಿದ್ದಾರೆ. ಅಲ್ಲಿ ಬಿಸಿಲಿನ ಝಳ ತಾಳದೆ ತಲೆತಿರುಗಿ ಬಿದ್ದಿದ್ದಾರೆ.[ಕಳ್ಳರಿಂದ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ]

ಆಗ ಆಕೆಯನ್ನು ಸುತ್ತುವರಿದ ಕೆಲ ಅಪರಿಚಿತರು ಆಕೆಯ ಮೇಲೆ ಮುಗಿಬಿದ್ದು ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ನಡೆದಿರುವುದು ಭಾನುವಾರ ಬೆಳಿಗ್ಗೆ 8.30ರ ಸುಮಾರಿಗೆ. ಘಟನೆ ನಿಖರವಾಗಿ ಎಲ್ಲಿ ನಡೆದಿದ್ದು ಎಂಬುದು ಕೂಡ ಆಕೆಗೆ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಂದ ಹೇಗೋ ತಪ್ಪಿಸಿಕೊಂಡು ಬಂದ ಅವರು, ತಾವು ಜೊತೆಯಾಗಿ ಭಾರತ ಪ್ರವಾಸಕ್ಕೆ ಬಂದಿದ್ದ ಜರ್ಮನಿಯ ಪ್ರವಾಸಿಗರಿಗೆ ಇದನ್ನು ತಿಳಿಸಿದ್ದಾರೆ. ಈ ಸಂಗತಿಯನ್ನು ದೆಹಲಿಯಲ್ಲಿರುವ ಜರ್ಮನಿ ರಾಯಭಾರ ಕಚೇರಿಗೆ ತಿಳಿಸಲಾಗಿದೆ. ಅಲ್ಲಿಂದ ಕಾಂಚಿಪುರಂ ಪೊಲೀಸರಿಗೆ ದೂರು ನೀಡಲಾಗಿದೆ.

ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ, ದೂರಿನಲ್ಲಿ ನಡೆದ ಘಟನೆಯ ಬಗ್ಗೆ ಮಹಿಳೆ ಸ್ಪಷ್ಟ ಮಾಹಿತಿ ನೀಡಿಲ್ಲ. ಸಿಕ್ಕಿರುವ ಮಾಹಿತಿಯನ್ನಾಧರಿಸಿ ಪೊಲೀಸರು ದುರುಳರ ಬೇಟೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+