ಮುಂಬೈನಿಂದ ಮದುರೈ ತನಕ 'ಅಮ್ಮ'ನಿಗಾಗಿ ಪ್ರಾರ್ಥನೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 05: ತಮಿಳುನಾಡಿನ 'ಅಮ್ಮ' ಜಯಲಲಿತಾ ಅವರ ಆರೋಗ್ಯ ಸುಧಾರಣೆಗಾಗಿ ಸೋಮವಾರದಂದು ಮುಂಬೈನಿಂದ ಮದುರೈ ತನಕ, ಕರಾವಳಿಯಿಂದ ಕಡಲೂರಿನ ತನಕ ಎಲ್ಲೆಡೆಯಿಂದ ಶುಭ ಹಾರೈಕೆ, ಪ್ರಾರ್ಥನೆ ಸಲ್ಲಿಕೆಯಾಗಿದೆ.

ಕಳೆದ 74 ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಭಾನುವಾರ ಸಂಜೆ ಹೃದಯಾಘಾತವಾಗಿದ್ದು, ಐಸಿಯುನಲ್ಲಿ ತಜ್ಞ ವೈದ್ಯರು ಆರೈಕೆ ಮಾಡುತ್ತಿದ್ದಾರೆ, ಕೃತಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.[ಜಯಲಲಿತಾ ಅವರ ಸ್ಥಿತಿ ಗಂಭೀರ: ಅಪೋಲೋ ಆಸ್ಪತ್ರೆ]

ಜತೆಗೆ ECMO ಹಾಗೂ ಇನ್ನಿತರ ಜೀವ ಸಂರಕ್ಷಕ ವ್ಯವಸ್ಥೆ ಕಲ್ಪಿಸಲಾಗಿದೆ. ಲಂಡನ್ನಿನ ವೈದ್ಯ ರಿಚರ್ಡ್ ಹಾಗೂ ಏಮ್ಸ್ ವೈದ್ಯರ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. [ತಮಿಳುನಾಡು 'ಅಮ್ಮ'ನಿಗಾಗಿ ಸಿನಿತಾರೆಯರು ಪ್ರಾರ್ಥನೆ]

ದೆಹಲಿಯ ಏಮ್ಸ್ ನಿಂದ ನಾಲ್ಕು ಮಂದಿ ತಜ್ಞ ವೈದ್ಯರ ತಂಡ ನಿರಂತರವಾಗಿ ಅಪೋಲೋ ಆಸ್ಪತ್ರೆ ಜತೆ ಸಂಪರ್ಕದಲ್ಲಿದೆ. ಅದರೆ, ಅಭಿಮಾನಿಗಳು, ಕಾರ್ಯಕರ್ತರ ಆತಂಕ ನಿವಾರಣೆಯಾಗಿಲ್ಲ, ಎಲ್ಲೆಡೆ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತಿದೆ.

ತಮಿಳುನಾಡಿನ ದೇಗುಲಗಳಲ್ಲಿ ಪ್ರಾರ್ಥನೆ

ತಮಿಳುನಾಡಿನ ದೇಗುಲಗಳಲ್ಲಿ ಪ್ರಾರ್ಥನೆ

ತಮಿಳುನಾಡಿನ ಪ್ರಮುಖ ದೇಗುಲಗಳಾದ ಮದುರೈ ಮೀನಾಕ್ಷಿ, ಕಂಚಿ ಕಾಮಾಕ್ಷಿ ದೇಗುಲಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಕೆಯಾಗಿದೆ. ಜಯಾ ಅವರ ಆರೋಗ್ಯ ಸುಧಾರಣೆಗೆ ನಿರಂತರವಾಗಿ ಭಕ್ತರು ಪ್ರಾರ್ಥಿಸುತ್ತಿದ್ದಾರೆ.

ಅಲಹಾಬಾದಿನಲ್ಲಿ ತಮಿಳರಿಂದ ಪ್ರಾರ್ಥನೆ

ತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯ ಸುಧಾರಣೆಗಾಗಿ ಅಲಹಾಬಾದಿನಲ್ಲಿ ತಮಿಳರಿಂದ ಪ್ರಾರ್ಥನೆ

ಮದುರೈನಲ್ಲಿ ಅಭಿಮಾನಿಗಳಿಂದ ಪ್ರಾರ್ಥನೆ

ಮದುರೈನಲ್ಲಿ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ ಸಲ್ಲಿಕೆಯಾಗುತ್ತಿದ್ದು, ಅನೇಕರು ಉಪವಾಸ ವ್ರತ ಕೈಗೊಂಡಿದ್ದಾರೆ.

ಕಾನ್ಪುರದಲ್ಲಿ ಅಮ್ಮನಿಗಾಗಿ ಪೂಜೆ

ಕಾನ್ಪುರದಲ್ಲಿ ತಮಿಳುನಾಡಿನ ಅಮ್ಮನಿಗಾಗಿ ಪೂಜೆ, ಪುನಸ್ಕಾರ ನಡೆಸಲಾಗಿದೆ. ಉತ್ತರಪ್ರದೇಶದಲ್ಲಿ ಜಯಲಲಿತಾ ಅವರಿಗೆ ಬೆಂಬಲ ಅಧಿಕವಾಗಿದೆ.

ಮುಂಬೈನಲ್ಲಿ ಜಯಲಲಿತಾಗಾಗಿ ಪ್ರಾರ್ಥನೆ

ಜಯಲಲಿತಾ ಅವರ ಆರೋಗ್ಯ ಸುಧಾರಣೆಗಾಗಿ ಮುಂಬೈನಲ್ಲಿ ಧಾರಾವಿ ಶಕ್ತಿ ವಿನಾಯಕ ದೇಗುಲದಲ್ಲಿ ಪ್ರಾರ್ಥನೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On Monday, the entire country prayed for the recovery of Tamil Nadu Chief Minister J Jayalalithaa, who suffered a cardiac arrest, on Sunday.
Please Wait while comments are loading...