ಮೋದಿ ಮೆಚ್ಚಿ ಗುಡಿ ಕಟ್ಟಿದ ತಮಿಳುನಾಡು ರೈತ

Recommended Video

      ಮೋದಿಯನ್ನು ಪೂಜಿಸುವ ಈ ರೈತ ಯಾರು ಗೊತ್ತಾ? | MODI | TAMIL NADU | ONEINDIA KANNADA

      ಚೆನ್ನೈ, ಡಿಸೆಂಬರ್ 26: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಸಂಖ್ಯ ಅಭಿಮಾನಿಗಳಿದ್ದಾರೆ. ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಾರೆ. ತಮಿಳುನಾಡಿನ ರೈತನೋರ್ವ ಮೋದಿ ಪ್ರೇಮವನ್ನು ಭಿನ್ನವಾಗಿ ವ್ಯಕ್ತಪಡಿಸಿದ್ದಾರೆ.

      ತಮಿಳುನಾಡಿನ ತಿರುಚಿರಾಪಲ್ಲಿ ಬಳಿಯ ರೈತನೋರ್ವ ಮೋದಿ ಕಾರ್ಯ ಮೆಚ್ಚಿ ಮೋದಿ ಮೂರ್ತಿಯುಳ್ಳ ದೇವಾಲಯ ನಿರ್ಮಿಸಿದ್ದಾನೆ.

      ಎರಾಕ್ಕುಡಿ ಎಂಬ ಗ್ರಾಮದಲ್ಲಿ ಮೋದಿ ದೇವಾಲಯ ನಿರ್ಮಾಣವಾಗಿದ್ದು, 50 ವರ್ಷ ವಯಸ್ಸಿನ ಪಿ.ಶಂಕರ್ ಎಂಬ ರೈತ ಈ ದೇವಾಲಯ ನಿರ್ಮಿಸಿದ್ದಾನೆ.

      Farmer In Tamilnadu Built a Temple For Narendra Modi

      ರೈತ ಶಂಕರ್ ಹೇಳುವಂತೆ, 'ನಾನು ಪ್ರಧಾನಿ ಮೋದಿ ಅವರ ಕಾರ್ಯಗಳಿಂದ ತುಂಬಾ ಪ್ರಭಾವಿತನಾಗಿದ್ದೇನೆ. ಅವರ ಯೋಜನೆಗಳ ಫಲಾನುಭವಿಯೂ ಆಗಿದ್ದೇನೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ನನಗೆ ಹಲವು ಉಪಯೋಗ ಆಗಿವೆ' ಎಂದು ಅವರು ಹೇಳಿದ್ದಾರೆ.

      ಸಣ್ಣ 8*8 ಕೊಠಡಿಯನ್ನು ನಿರ್ಮಿಸಿ ಮಧ್ಯದಲ್ಲಿ ಮೋದಿ ಮುರ್ತಿಯನ್ನು ಇಡಲಾಗಿದೆ. ಅದೇ ಕೊಠಡಿಯಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ, ಹಾಲಿ ಸಿಎಂ ಪಳನಿಸ್ವಾಮಿ, ಗೃಹ ಮಂತ್ರಿ ಅಮಿತ್ ಶಾ ಚಿತ್ರಗಳನ್ನೂ ಇಡಲಾಗಿದೆ. ಈ ದೇವಾಲಯ ಕಟ್ಟಲು ಶಂಕರ್‌ ಗೆ 1.2 ಲಕ್ಷ ಖರ್ಚಾಗಿದೆಯಂತೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+