ತಮಿಳುನಾಡಿಗೆ 'ನಾಡಾ' ಚಂಡಮಾರುತ , ಕರ್ನಾಟಕದಲ್ಲೂ ಮಳೆ

Posted By:
Subscribe to Oneindia Kannada

ಚೆನ್ನೈ, ನವೆಂಬರ್ 30: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ತಮಿಳುನಾಡು, ಪುದುಚೇರಿ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಭಾರಿ ಮಳೆ ಸಂಭವಿಸುವ ಸಾಧ್ಯತೆಯಿದೆ. ಈ ಚಂಡಮಾರುತಕ್ಕೆ 'ನಾಡಾ' ಎಂದು ಕರೆಯಲಾಗಿದ್ದು, ಡಿಸೆಂಬರ್ 2ರಂದು ತಮಿಳುನಾಡಿನ ಕರಾವಳಿಗೆ ಅಪ್ಪಳಿಸಲಿದೆ.

ಚೆನ್ನೈನಿಂದ 770 ಕಿ.ಮೀ ದೂರದಲ್ಲಿತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿ ನಾಡಾ ಚಂಡಮಾರುತ ಏಳಲಿದ್ದು, ಡಿಸೆಂಬರ್ 2ರಂದು ಕಡಲೂರು ಮೂಲಕ ಭಾರತವನ್ನು ಪ್ರವೇಶಿಸಿ ಉತ್ತರ ತಮಿಳುನಾಡು ಕರಾವಳಿ ಮೂಲಕ ಹಾದು ಹೋಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. [ಚಂಡಮಾರುತಗಳ ಚೆಂದದ ಹೆಸರಿನ ರಹಸ್ಯ]

Cyclone NADA coming Tamil Nadu's way, warning issued

ಕರ್ನಾಟಕದಲ್ಲೂ ಮಳೆ: ತಮಿಳುನಾಡಿನಲ್ಲಿ ಬುಧವಾರ ಸಾಧಾರಣ ಮಳೆ, ಗುರುವಾರದಿಂದ ಮೂರು ದಿನ ಭಾರೀ ಮಳೆ ನಿರೀಕ್ಷೆಯಿದೆ. ಕರ್ನಾಟಕದ ದಕ್ಷಿಣ ಒಳನಾಡು, ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.

ಮುನ್ನಚ್ಚರಿಕೆ ಸಂದೇಶ: ತಮಿಳುನಾಡು ಮತ್ತು ಪುದುಚೇರಿ ವ್ಯಾಪ್ತಿಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಿಲ್ಲುಸುವಂತೆ ಸೂಚಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ತೀರ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಸಾಗಿದೆ.

45 ರಿಂದ 55 ಕಿಲೋ ಮೀಟರ್ ಪ್ರತಿ ಗಂಟೆಯಂತೆ ಗಾಳಿ ಬೀಸಲಿದ್ದು, ವೇದರಾನ್ಯಾಮ್, ಪುದುಚೇರಿ, ಕಡಲೂರಿನ ಹಲವೆಡೆ ಭೂಕುಸಿತ ಉಂಟಾಗುವ ಸಾಧ್ಯತೆಯಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ತಮಿಳುನಾಡಿನ ಜಲ ಪ್ರಳಯ ಉಂಟಾಗಿದ್ದನ್ನು ಇಲ್ಲಿ ಸ್ಮರಿಸಬಹುದು.(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The meteorology department has issued a cyclone warning and heavy rain forecast to Tamil Nadu. Heavy rains are expected to lash parts of Tamil Nadu on December 2 as cyclone NADA is predicted to cross coast of Tamil Nadu.
Please Wait while comments are loading...