ರೈಲಿನಲ್ಲಿ ಸಾಗಿಸುತ್ತಿದ್ದ ಕೋಟ್ಯಂತರ ರು. ಹಣ ದರೋಡೆ!
ಚೆನ್ನೈ, ಆಗಸ್ಟ್ 09 : ಪಕ್ಕಾ ಸಿನೆಮಾ ಸ್ಟೈಲಿನಲ್ಲಿ, ಮೇಲಿನಿಂದ ರಂಧ್ರ ಕೊರೆದು ರೈಲಿನಲ್ಲಿ ಸಾಗಿಸುತ್ತಿದ್ದ ಕೋಟ್ಯಂತರ ಹಣವನ್ನು ಲೂಟಿ ಮಾಡಿದ ಘಟನೆ ಚೆನ್ನೈನಲ್ಲಿ ಸೋಮವಾರ ರಾತ್ರಿ ನಡೆದಿದೆ. ಗಾಬರಿಯ ಸಂಗತಿಯೆಂದರೆ, ಗ್ರೇಟ್ ರಾಬರಿ ನಡೆದಿರುವುದು ಬೆಳಕಿಗೆ ಬಂದಿದ್ದು ಮಂಗಳವಾರ 11 ಗಂಟೆಗೆ.
ರೈಲು ಚೆನ್ನೈಗೆ ಬೆಳಗಿನ ಜಾವ 4 ಗಂಟೆಗೆ ತಲುಪಿದರೂ ಲೂಟಿಯಾಗಿದ್ದು ಗೊತ್ತಾಗಿರಲಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಬಂದು 11 ಗಂಟೆಗೆ ಪರಿಶೀಲಿಸಿದಾಗ ಲೂಟಿಯಾಗಿರುವುದು ತಿಳಿದುಬಂದು ದಂಗುಬಡಿದಿದ್ದಾರೆ. [ಕೋಟಿ ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಯೇ ಇರಲಿಲ್ಲ!]

ಲೂಟಿಯಾಗಿದ್ದು ಸಣ್ಣ ಮೊತ್ತವಲ್ಲ. ಚೆನ್ನೈ ಎಕ್ಸೆ ಪ್ರೆಸ್ ರೈಲಿನಲ್ಲಿ ಎರಡು ಬೋಗಿಗಳಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 342 ಕೋಟಿ ರು. ಮೊತ್ತದ ಹಳೆ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸಾಗಿಸುತ್ತಿತ್ತು.
ಎಷ್ಟು ಗಂಟೆಗೆ ಹಣವನ್ನು ಲೂಟಿ ಮಾಡಲಾಗಿದೆ, ಎಷ್ಟು ಜನರಿಂದ ಮಾಲಾಗಿದೆ, ಯಾವ ಸ್ಥಳದಲ್ಲಿ ರಾಬರಿಯನ್ನು ನಡೆಸಲಾಗಿದೆ, ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಗಳು ಇರಲಿಲ್ಲವೆ ಅಥವಾ ಭದ್ರತಾ ಸಿಬ್ಬಂದಿಯ ಕೈವಾಡವೇ ಇರಬಹುದೆ... ಮುಂತಾದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.












Click it and Unblock the Notifications