ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ
ಚೆನ್ನೈ, ಮೇ 21; ಕೊರೊನಾ ಸೋಂಕು ಇಡೀ ವಿಶ್ವವನ್ನೇ ಕಾಡುತ್ತಿದೆ. ತಮಿಳುನಾಡಿನಲ್ಲಿ ಕೊರೊನಾಗೆ ದೇವರ ಸ್ವರೂಪ ನೀಡಲಾಗಿದ್ದು, ಆರ್ಭಟ ತಣ್ಣಗಾಗಿಸುವಂತೆ 'ಕೊರೊನಾ ದೇವಿ'ಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತಿದೆ.
Recommended Video
ತಮಿಳುನಾಡಿನ ಕೊಯಮತ್ತೂರಿನಲ್ಲಿ 'ಕೊರೊನಾ ದೇವಿ' ದೇವಾಲಯ ನಿರ್ಮಾಣ ಮಾಡಲಾಗಿದೆ. ಕಾಮಾಚಿಪುರಿ ಅಧೀನಂ ಪೀಠ ಈ ದೇವಾಲಯ ನಿರ್ಮಿಸಿದೆ. ಪ್ರತಿದಿನವೂ ಈ ದೇವಾಲಯದಲ್ಲಿ ಅರ್ಚಕರು ದೇವಿಗೆ ಪೂಜೆ ಮಾಡುತ್ತಿದ್ದಾರೆ.
ಕೊರೊನಾ ಆರ್ಭಟ ದೇಶದಲ್ಲಿ ಕಡಿಮೆಯಾಗಲಿ ಎಂದು ನಿತ್ಯ ಪೂಜೆಗಳನ್ನು ಮಾಡಲಾಗುತ್ತಿದೆ. ಒಟ್ಟು 48 ದಿನಗಳ ಕಾಲ ಪೂಜೆ ಸಲ್ಲಿಸಲಾಗುತ್ತದೆ ಎಂದು ಅರ್ಚಕರು ಹೇಳಿದ್ದಾರೆ.

"ವಿಶೇಷ ಪೂಜೆಗಳು, ಮಹಾಯಾಗದ ಮೂಲಕ ದೇವಿಯನ್ನು ಸಂತೃಪ್ತಿಗೊಳಿಸಲಾಗುತ್ತದೆ. ಈ ಮೂಲಕ ದೇವಿಯನ್ನು ಶಾಂತಳಾಗಿರುವಂತೆ ಬೇಡಿಕೊಳ್ಳಲಾಗುತ್ತದೆ" ಎಂದು ದೇವಾಲಯದ ಮುಖ್ಯಸ್ಥ ಶಿವಲಿಂಗೇಶ್ವರ್ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಸಾಂಕ್ರಾಮಿಕ ರೋಗಗಳು ಬಂದಾಗ ಈ ಹಿಂದೆಯೂ ದೇವಾಲಯಗಳನ್ನು ನಿರ್ಮಿಸಿ ಪೂಜೆ ಸಲ್ಲಿಸಲಾಗಿತ್ತು. ಈಗ ಕೊರೊನಾ ಕಾಲದಲ್ಲಿಯೂ ದೇವಾಲಯ ನಿರ್ಮಿಸಲಾಗಿದೆ.

ಕೊರೊನಾ ಅಮ್ಮನ ದೇವಾಲಯದಲ್ಲಿ ಅರ್ಚಕರು ಪೂಜೆ ಸಲ್ಲಿಸುತ್ತಿರುವ ಪೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ವೈರಲ್ ಆಗಿವೆ.
ತಮಿಳುನಾಡಿನಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 17,34,804. ಸಕ್ರಿಯ ಪ್ರಕರಣಗಳ ಸಂಖ್ಯೆ 2,63,390. ಇದುವರೆಗೂ ರಾಜ್ಯದಲ್ಲಿ 19,131 ಜನರು ಮೃತಪಟ್ಟಿದ್ದಾರೆ.












Click it and Unblock the Notifications