ಮಾದಕ ಸಸ್ಯ ಬೆಳೆಸಿದ ಆರೋಪ, ಸಂಗೀತಗಾರ ಬಂಧನ
ನ್ನೈ, ಅ.09: ಯುವ ಸಂಗೀತಗಾರರೊಬ್ಬರು ತಮ್ಮ ಮನೆ ಟೆರೇಶ್ ಗಾರ್ಡನ್ ನಲ್ಲಿ ನಿಷೇಧಿತ ಮಾರಿಜುವಾನಾ ಮಾದಕ ಸಸ್ಯ ಬೆಳೆಸಿದ ಆರೋಪದ ಮೇಲೆ ಬಂಧನಕ್ಕೊಳಪಟ್ಟಿದ್ದಾರೆ.
ತಮಿಳು ಕಿರುಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿ ಜನಪ್ರಿಯತೆ ಗಳಿಸುತ್ತಿರುವ 25 ವರ್ಷ ವಯಸ್ಸಿಅನ್ ಅಭಿಶೇಕ್ ಎಂಬ ಸಂಗೀತಗಾರ ಬಂಧನಕ್ಕೊಳಪಟ್ಟಿದ್ದಾರೆ. ಅಭಿಶೇಕ್ ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಸಣ್ಣ ಸಣ್ಣ ಪಾಟುಗಳಲ್ಲಿ ಐದಾರು ಮಾರಿಜುವಾನಾ(ಗಂಜಾ) ಸಸ್ಯ ಬೆಳೆಸಿದ್ದರು.

ಅಭಿಶೇಕ್ ನಿವಾಸದ ಮೇಲೆ ದಿಢೀರ್ ಎಂದು ದಾಳಿ ನಡೆಸಿದ ಚೆನ್ನೈ ಪೊಲೀಸರು ಅಭಿಶೇಕ್ ರನ್ನು ಬಂಧಿಸಿದ್ದಾರೆ. ಅವರ ಮನೆಯಲ್ಲಿ ಸುಮಾರು 3 ಅಡಿ ಬೆಳೆದಿದ್ದ ಸಸ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅಭಿಶೇಕ್ ಜೊತೆಗೆ ಮನೆಯಲ್ಲಿದ್ದ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಅಭಿಶೇಕ್ ಅವರು ನೃತ್ಯ ಸಂಯೋಜಕಿ ಲಲಿತಾ ಮಣಿ ಅವರ ಸಂಬಂಧಿಕರಾಗಿದ್ದು, ಲಲಿತಾ ಅವರ ಒಡೆತನದ ಮನೆಯನ್ನೇ ಬಾಡಿಗೆ ಪಡೆದು ವಾಸಿಸುತ್ತಿದ್ದರು. ಅಭಿಶೇಕ್ ಅವರ ಗೆಳೆಯರಿಗೆ ಗಂಜಾ ಸೇವಿಸುವ ಅಭ್ಯಾಸವಿರುವುದು ಪತ್ತೆಯಾಗಿದೆ. ವಲಸರವಕ್ಕಂನ ವಲ್ಲಿಯಾಮ್ಮಯಿ ರಸ್ತೆಯಲ್ಲಿರುವ ಮನೆಯಲ್ಲಿ ಕ್ಯಾಂಡಲ್ ಲೈಟ್ ಮ್ಯೂಸಿಕ್ ಸ್ಟುಡಿಯೋಸ್ ನ ಸಿಬ್ಬಂದಿಗಳು ಕೂಡಾ ಆಗಾಗ ವಾಸಿಸುತ್ತಿದ್ದರು.
ಅಭಿಶೇಕ್ ಕೆಲ ಬೀಜಗಳನ್ನು ಹೂಕುಂಡಗಳಿಗೆ ಹಾಕುವ ಅಭ್ಯಾಸ ಇರಿಸಿಕೊಂಡಿದ್ದಾರೆ. ಇದೇ ಈಗ ಸಸ್ಯವಾಗಿದೆ ಎಂದು ಎಸಿಪಿ ಅನಂದ್ ಕುಮಾರ್ ಹೇಳಿದ್ದಾರೆ. ಇದೇ ಕಟ್ಟಡ ಮತ್ತೊಂದು ಭಾಗದಲ್ಲಿ 2013ರಲ್ಲಿ ಕೊಲೆ ನಡೆದಿತ್ತು ಎಂದು ದಾಖಲೆಗಳಿಂದ ತಿಳಿದು ಬಂದಿದೆ.












Click it and Unblock the Notifications