ಕಾವೇರಿಗಾಗಿ ಪ್ರತಿಭಟನೆ 600 ಹೆಚ್ಚು ಮಂದಿ ಬಂಧನ

Posted By:
Subscribe to Oneindia Kannada

ತಿರುಚ್ಚಿ(ತಮಿಳುನಾಡು), ಅಕ್ಟೋಬರ್ 17: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ವಿವಿಧ ಸಂಘಟನೆಗಳಿಂದ 48 ಗಂಟೆಗಳ ರೈಲು ತಡೆ ಪ್ರತಿಭಟನೆ ಆರಂಭಗೊಂಡಿದೆ. ವಿಪಕ್ಷ ನಾಯಕ ಎಂಕೆ ಸ್ಟಾಲಿನ್ ಸೇರಿದಂತೆ ಅನೇಕ ಮುಖಂಡರನ್ನು ಪೊಲೀಸರು 'ಕೋರ್ಟ್ ಅರೆಸ್ಟ್' ಮಾಡಿದ್ದಾರೆ.

ಕಾವೇರಿ ನದಿ ಪಾತ್ರದ ಜನ ಜೀವನ, ಅಣೆಕಟ್ಟುಗಳ ವಸ್ತುಸ್ಥಿತಿ ಅಧ್ಯಯನ ನಡೆಸಿದ ಉನ್ನತ ತಾಂತ್ರಿಕ ಸಮಿತಿ ತನ್ನ ವರದಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಲಿದ್ದು, ಇದನ್ನು ವಿರೋಧಿಸಿ ತಮಿಳುನಾಡಿನ ವಿವಿಧೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯ ಅಪ್ಡೇಟ್ಸ್ ಇಲ್ಲಿದೆ.

* ವಿಪಕ್ಷ ಡಿಎಂಕೆ ಹಾಗೂ ಬೆಂಬಲಿತ ಕೆಲ ಸಂಘಟನೆಗಳು ರೈಲುಗಳನ್ನು ತಡೆದು ಪ್ರತಿಭಟಿಸಿವೆ. ಚೆನ್ನೈ, ತಂಜಾವೂರು ಸೇರಿ ಅನೇಕ ಕಡೆ ರೈಲುಗಳನ್ನು ತಡೆದಿದ್ದಾರೆ.
* ಚೆನ್ನೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
* ಶ್ರೀರಂಗಂ ರೈಲು ನಿಲ್ದಾಣದ ಬಳಿ ರೈಲು ಸಂಚಾರಕ್ಕೆ ಅಡ್ಡಿಪಡಿಸಿದ ಮಾಜಿ ಡಿಎಂಕೆ ಸಚಿವ ಕೆಎನ್ ನೆಹರೂ ಅವರನ್ನು ಬಂಧಿಸಲಾಗಿದೆ.
* ತಿರುಚ್ಚಿ ಸಮೀಪದ ಕುಡಮುರಟ್ಟಿ ಎಂಬಲ್ಲಿ ರೈಲು ಹಳಿಗಳ ಮೇಲೆ ಸಾಲಾಗಿ ಮಲಗಿದ ರೈತರು, ಸೇಲಂ ಜಿಲ್ಲೆಗೆ ತೆರಳುತ್ತಿದ್ದ ಗೂಡ್ಸ್ ರೈಲುಗಳ ತಡೆ.
* ಚೆನ್ನೈನ ಎಗ್ಮೋರ್ ರೈಲು ನಿಲ್ದಾಣದಲ್ಲಿ ತಮಿಳ್ ಮನೀಲ ಕಾಂಗ್ರೆಸ್ ಕಾರ್ಯಕರ್ತರ ಬಂಧನ.
(ಒನ್ಇಂಡಿಯಾ ಸುದ್ದಿ)

ಹಲವಾರು ಮುಖಂಡರು ಕೋರ್ಟ್ ಅರೆಸ್ಟ್

ಹಲವಾರು ಮುಖಂಡರು ಕೋರ್ಟ್ ಅರೆಸ್ಟ್

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ವಿವಿಧ ಸಂಘಟನೆಗಳಿಂದ 48 ಗಂಟೆಗಳ ರೈಲು ತಡೆ ಪ್ರತಿಭಟನೆ ಆರಂಭಗೊಂಡಿದೆ. ವಿಪಕ್ಷ ನಾಯಕ ಎಂಕೆ ಸ್ಟಾಲಿನ್ ಸೇರಿದಂತೆ ಅನೇಕ ಮುಖಂಡರನ್ನು ಪೊಲೀಸರು 'ಕೋರ್ಟ್ ಅರೆಸ್ಟ್' ಮಾಡಿದ್ದಾರೆ

ತಮಿಳುನಾಡಿನ ವಿವಿದೆಡೆ ರೈಲು ಸಂಚಾರ ಸ್ಥಗಿತ

ತಮಿಳುನಾಡಿನ ವಿವಿದೆಡೆ ರೈಲು ಸಂಚಾರ ಸ್ಥಗಿತ

ತಿರುಚ್ಚಿ ಸಮೀಪದ ಕುಡಮುರಟ್ಟಿ ಎಂಬಲ್ಲಿ ರೈಲು ಹಳಿಗಳ ಮೇಲೆ ಸಾಲಾಗಿ ಮಲಗಿದ ರೈತರು, ಸೇಲಂ ಜಿಲ್ಲೆಗೆ ತೆರಳುತ್ತಿದ್ದ ಗೂಡ್ಸ್ ರೈಲುಗಳ ತಡೆ.
* ಚೆನ್ನೈನ ಎಗ್ಮೋರ್ ರೈಲು ನಿಲ್ದಾಣದಲ್ಲಿ ತಮಿಳ್ ಮನೀಲ ಕಾಂಗ್ರೆಸ್ ಕಾರ್ಯಕರ್ತರ ಬಂಧನ.

ಕಾಂಚೀಪುರಂನಲ್ಲೂ ಡಿಎಂಕೆಯಿಂದ ಪ್ರತಿಭಟನೆ

ಕಾಂಚೀಪುರಂನಲ್ಲೂ ಡಿಎಂಕೆಯಿಂದ ಪ್ರತಿಭಟನೆ

ಕಾಂಚೀಪುರಂನ ಜಿಲ್ಲಾ ಡಿಎಂಕೆ ಕಾರ್ಯದರ್ಶಿ ಹಾಗೂ ಅಳಂದೂರು ಶಾಸಕ ಟಿಎಂ ಅನ್ಬರಸನ್ ಅವರ ನೇತೃತ್ವದಲ್ಲಿ ತಾಂಬರಮ್ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಿಪಿಐ ಕಾರ್ಯಕರ್ತರಿಂದಲೂ ಪ್ರತಿಭಟನೆ

ಸಿಪಿಐ ರಾಜ್ಯ ಕಾರ್ಯದರ್ಶಿ ಮುತ್ತುರಸನ್ ಅವರು ತಿರುವರುವರ್ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಕಾವೇರಿ ನದಿ ಕೊಳ್ಳದ ಬಗ್ಗೆ ಕೇಂದ್ರ ತಾಂತ್ರಿಕ ಸಮಿತಿ ನೀಡುವ ವರದಿ ಹಾಗೂ ಕಾವೇರಿ ನ್ಯಾಯಾಧೀಕರಣದ ತೀರ್ಪಿಗೂ ಮುನ್ನ ಒತ್ತಡ ಹೇರಲು ಈ ರೀತಿ ಪ್ರತಿಭಟನೆ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cauvery dispute: Various farmers' organisations, on Monday, began their 48-hour rail roko in Tiruchi and delta districts, demanding the constitution of Cauvery Management Board. Leader of Opposition and DMK treasurer M.K. Stalin and six MLAs courted arrest
Please Wait while comments are loading...