ಚೆನ್ನೈ: ತಾಯಿ ಶವದ ಮುಂದೆ 20 ಗಂಟೆ ಕೂತಿದ್ದ ಮಗಳು

ಚೆನ್ನೈ, ಡಿಸೆಂಬರ್, ೦೩: ತಮಿಳುನಾಡಿನ ಮಳೆ ದುರಂತದ ಬಗ್ಗೆ ಮಾತನಾಡಲು ಮನ ನೋಯುತ್ತದೆ. ಅಲ್ಲಿ ಸತ್ತವರೆಷ್ಟೋ, ಊಟಕ್ಕಾಗಿ ಹಾತೊರೆಯುವರೆಷ್ಟೋ ಈ ಎಲ್ಲಾವನ್ನು ನೋಡುತ್ತಾ, ಹೇಳುತ್ತಿದ್ದರೆ ದನಿ ಗದ್ಗದಿತವಾಗುತ್ತದೆ. ಆದರೆ ಈ ಸುದ್ದಿ ಕೇಳಿದರೆ ನೀವು ತುಂಬಾ ಸೂಕ್ಷ್ಮ ಸ್ವಭಾವದವರಾದರೆ ಕಣ್ಣ ಹನಿ ಕೆನ್ನೆ ಮೇಲೆ ಬಿದ್ದರೂ ಬೀಳಬಹುದು.

ಹೌದು. ತಮಿಳುನಾಡಿನಲ್ಲಿ ಮಳೆಯಿಂದ ಉಂಟಾದ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ ತನ್ನ ತಾಯಿ ಶವವನ್ನು ಸಾಗಿಸಲು ಸಾಧ್ಯವಾಗದ ಮಗಳೊಬ್ಬಳು, ಬೇರೆಯವರ ಸಹಾಯ ಹಸ್ತಕ್ಕಾಗಿ ಕಾಯುತ್ತಾ ಸುಮಾರು 20 ಗಂಟೆಗಳ ಕಾಲ ಶವದ ಮುಂದೆ ಕುಳಿತು ಕಣ್ಣೀರಿಟ್ಟಿದ್ದಾಳೆ.[ತಮಿಳುನಾಡಲ್ಲಿ ಕುಂಭದ್ರೋಣ ಮಳೆ, ಜನಜೀವನ ಚಿತ್ರಾನ್ನ]

A daughter sitting with the body of her mother for 20 hours in Chennai

ಈ ವಿಚಾರ ತಿಳಿದ ಆಕೆಯ ಸ್ನೇಹಿತೆಯೊಬ್ಬಳು ಸುದ್ದಿ ವಾಹಿನಿಯ ಮುಖಾಂತರ ವಿಚಾರ ತಿಳಿಸಿದ್ದಾಳೆ. 'ನನ್ನ ಸ್ನೇಹಿತೆಯ ತಾಯಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ನೆರೆಯಲ್ಲಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೇ ಬುಧವಾರ ಮೃತಪಟ್ಟಿದ್ದಾರೆ. ಆಕೆಯ ಮನೆ ಅಶೋಕ ನಗರದಲ್ಲಿದೆ. ತಾಯಿಯ ಶವವನ್ನು ಸಂಸ್ಕಾರ ಮಾಡಲು ಆಕೆಗೆ ಸಹಾಯ ಮಾಡಿ, ಅವಳು ಅಸಹಾಯಕಳಾಗಿದ್ದಾಳೆ. ದಯವಿಟ್ಟು ಆಕೆಗೆ ನಿಮ್ಮ ಸಹಾಯ ಬೇಕಿದೆ' ಎಂದು ಮನವಿ ಮಾಡಿಕೊಂಡಿದ್ದಾಳೆ.[ಭರ್ತಿ ಮಳೆಯಲ್ಲೂ ಹಾಲು ಹಾಕಲು ಬಂದ ಮಹಿಳೆಗೆ ಸಲಾಂ!]

ಸ್ನೇಹಿತೆಯ ಅಳಲನ್ನು ಆಲಿಸಿದ ಹತ್ತಿರದ ಆಸ್ಪತ್ರೆ ಸಿಬ್ಬಂದಿ ತಕ್ಷಣ ಆಸ್ಪತ್ರೆ ವಾಹನ ತೆಗೆದುಕೊಂಡು ಆಕೆ ಇದ್ದ ಸ್ಥಳಕ್ಕೆ ಧಾವಿಸಿದ್ದಾರೆ. ಆ ನಡುವೆ ಮಗಳು ತನ್ನ ತಾಯಿ ದೇಹವನ್ನು ಸುರಕ್ಷವಾಗಿಸಲು ಇದ್ದ ಅಪಾರ್ಟ್ ಮೆಂಟ್ ನಿಂದ ಶವದ ಜೊತೆ ತೆರಳಲು ಪ್ರಯತ್ನ ಪಟ್ಟಿದ್ದಾರೆ.

ತಾಯಿಯ ದೇಹ ನೀರಿನಲ್ಲಿ ಕೊಚ್ಚಿಹೋಗಲು ಬಿಡಬಾರದೆಂದು ಶವ ಸಾಗಿಸಲು ಪ್ರಯತ್ನಿಸಿ ಸಾಧ್ಯವಾಗದೆ ಚೆಲ್ಲಿ ಕೂತಿದ್ದಾರೆ. ಬಳಿಕ ಬಂದ ಆಸ್ಪತ್ರೆಯ ವಾಹನದ ಮೂಲಕ ಅಮ್ಮನ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+