ಜಯಾ ಚಿಕಿತ್ಸೆಗೆ 5.5 ಕೋಟಿ ಖರ್ಚು ಮತ್ತು ಇತರ 9 ಸಂಗತಿ

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 7: ಜಯಲಲಿತಾ ಮೃತಪಟ್ಟು ಎರಡು ತಿಂಗಳ ನಂತರ ಆಕೆಗೆ ನೀಡಿದ ಚಿಕಿತ್ಸೆ, ಸಾವು ಮತ್ತಿತರ ಮಾಹಿತಿಗಳನ್ನು ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆ ವೈದ್ಯರು ತೆರೆದಿಟ್ಟಿದ್ದಾರೆ. ಕಳೆದ ಡಿಸೆಂಬರ್ 5ರಂದು ಆಕೆ ಮೃತಪಟ್ಟರು. ಜಯಲಲಿತಾ ಅವರ ಚಿಕಿತ್ಸೆಗೆ ಮುಮ್ಚೂಣಿಯಲ್ಲಿದ್ದ ವೈದ್ಯ ರಿಚರ್ಡ್ ಬೇಲ್ ಕೆಲ ಮಾಹಿತಿ ನೀಡಿದ್ದಾರೆ.

ಜಯಲಲಿತಾ ಸಾವಿನ ಸುತ್ತವೇ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಅಪೋಲೋ ಆಸ್ಪತ್ರೆಯಿಂದ ಸರಿಯಾದ ಮಾಹಿತಿಯನ್ನು ನೀಡಿಲ್ಲ ಎಂಬ ಕಾರಣಕ್ಕೆ ನಾನಾ ವದಂತಿಗಳು ಹರಿದಾಡಿದ್ದವು. ಜಯಲಲಿತಾ ಅವರ ಆಪ್ತೆಯಾದ ಶಶಿಕಲಾ ಇದೀ ಪಕ್ಷದ ಚುಕ್ಕಾಣಿ ಹಿಡಿದು, ಇನ್ನೇನು ಮುಖ್ಯಮಂತ್ರಿ ಗಾದಿ ಏರಲಿದ್ದಾರೆ.[ಜಯಲಲಿತಾ ಸತ್ತಿದ್ದು ಬಹುಅಂಗ ವೈಫಲ್ಯದಿಂದ : ಡಾ. ಬೇಲ್]

ಲಂಡನ್ ಮೂಲದ ವೈದ್ಯ ರಿಚರ್ಡ್ ಬೇಲ್ ಬಹಿರಂಗಪಡಿಸಿದ ಹತ್ತು ಪ್ರಮುಖ ಮಾಹಿತಿಗಳನ್ನು ಇಲ್ಲಿ ತಿಳಿಸಲಾಗಿದೆ. ಜಯಲಲಿತಾ ಆರೋಗಗ್ಯದ ಬಗ್ಗೆ ಅಭಿಮಾನಿಗಳೂ ಸೇರಿದಂತೆ ಜನ ಸಾಮಾನ್ಯರಿಗಿದ್ದ ಹಲವು ಅನುಮಾನಗಳಿಗೆ ಇಲ್ಲಿರುವ ಸಂಗತಿಗಳು ಉತ್ತರವಾಗುತ್ತವೆ. ಎಪ್ಪತ್ತೈದು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು, ಹೊರ ಜಗತ್ತಿಗೆ ಕಾಣಿಸಿಕೊಳ್ಳದ ಜಯಲಲಿತಾ ಅವರ ಅನಾರೋಗ್ಯದ ಬಗೆಗಿನ ಮಾಹಿತಿ ಇದು.

5.5 ಕೋಟಿ ರುಪಾಯಿ ಆಸ್ಪತ್ರೆ ಬಿಲ್

5.5 ಕೋಟಿ ರುಪಾಯಿ ಆಸ್ಪತ್ರೆ ಬಿಲ್

ಎಪ್ಪತ್ತೈದು ದಿನಗಳ ಕಾಲ ಜಯಲಲಿತಾ ಅವರಿಗೆ ನೀಡಿದ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಯ ಒಟ್ಟು ಬಿಲ್ ಮೊತ್ತ 5.5 ಕೋಟಿ ರುಪಾಯಿ.

ವೈದ್ಯ ಬೇಲ್ ತಮ್ಮ ಮಕ್ಕಳ ಬಗ್ಗೆ ಮಾತನಾಡಿದ್ದರು

ವೈದ್ಯ ಬೇಲ್ ತಮ್ಮ ಮಕ್ಕಳ ಬಗ್ಗೆ ಮಾತನಾಡಿದ್ದರು

ಜಯಲಲಿತಾ ಅವರು ಹಲವು ದಿನಗಳ ಕಾಲ ಮಾತನಾಡುತ್ತಿದ್ದರು. ಆಕೆಗೆ ಡಿಸೆಂಬರ್ 4ರ ಭಾನುವಾರ ಸಂಜೆ ಹೃದಯ ಸ್ಥಂಭನ ಅಗುವ ತನಕ ಮಾತನಾಡಿದ್ದರು. ಇನ್ನು ರಿಚರ್ಡ್ ಬೇಲ್ ಹೇಳುವ ಪ್ರಕಾರ, ಜಯಲಲಿತಾ ಅವರಿಗೆ ಟಿವಿಯಲ್ಲಿ ಇಷ್ಟವಾದ ಕಾರ್ಯಕ್ರಮ, ಇಷ್ಟವಾದ ಆಹಾರ, ವೈದ್ಯರ ಮಕ್ಕಳ ಬಗ್ಗೆ ಮಾತನಾಡಿದ್ದರಂತೆ

ಹೌದು, ನಾನೇ ಮುಖ್ಯಮಂತ್ರಿ

ಹೌದು, ನಾನೇ ಮುಖ್ಯಮಂತ್ರಿ

ಜಯಲಲಿತಾಗೆ ಸಂಪೂರ್ಣ ಪ್ರಜ್ಞೆ ಇತ್ತು. ಸ್ಪಂದನೆ ಇತ್ತು ಎಂದು ಬೇಲ್ ಹೇಳಿದ್ದಾರೆ. ಆಕೆಯನ್ನು ಮುಖ್ಯಮಂತ್ರಿ ಎಂದು ಕರೆದಾಗ, ಹೌದು ನಾನೇ ಮುಖ್ಯಮಂತ್ರಿ ಎಂದು ಪ್ರತಿಕ್ರಿಯಿಸಿದ್ದರಂತೆ

ಉಸಿರಾಟದ ಸಮಸ್ಯೆ

ಉಸಿರಾಟದ ಸಮಸ್ಯೆ

ಸೆಪ್ಟೆಂಬರ್ 22ರಂದು ಜಯಲಲಿತಾರನ್ನು ಆಸ್ಪತ್ರೆಗೆ ಕರೆತಂದಾಗ ಉಸಿರಾಟದ ಸಮಸ್ಯೆಯಿತ್ತು. "ಸೋಂಕಿನಿಂದ ಅಂಗಾಂಗಳಿಗೆ ತೊಂದರೆಯಾಗಿ ಉಸಿರಾಡಲು ಕಷ್ಟವಾಗುತ್ತಿತ್ತು". ಆರಂಭದ ಸೋಂಕಿನಿಂದ ಆಕೆ ಚೇತರಿಸಿಕೊಂಡಿದ್ದರು. ಜಯಾಗೆ ಎಚ್ಚರಿಕೆ ಇತ್ತು, ಕೇಳಿದ್ದಕ್ಕೆ ಸ್ಪಂದನೆ ಕೂಡ ಇತ್ತು ಎಂದು ವೈದ್ಯರು ಹೇಳಿದ್ದಾರೆ.

ಇಪ್ಪತ್ತು ನಿಮಿಷ ಪ್ರಯತ್ನ

ಇಪ್ಪತ್ತು ನಿಮಿಷ ಪ್ರಯತ್ನ

ಜಯಲಲಿತಾ ಅವರಿಗೆ ಹೃದಯ ಸ್ಥಂಭನವಾದಾಗ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಆಕೆಯ ಚೇತರಿಕೆಗೆ ಪ್ರಯತ್ನ ಪಟ್ಟಿದ್ದಾರೆ. ಆದರೆ ಅವರಿಗೆ ಆದ ಸಮಸ್ಯೆ ತೀರಾ ಅನಿರೀಕ್ಷಿತ.

ಗಂಭೀರ ಸೋಂಕು

ಗಂಭೀರ ಸೋಂಕು

ಗಂಭೀರ ಸೋಂಕು ಹಾಗೂ ಅಂಗಾಂಗಗಳ ಸಮಸ್ಯೆ ಜಯಲಲಿತಾ ಅವರ ಸಾವಿಗೆ ಕಾರಣವಾಯಿತು ಎಂದು ಬೀಲ್ ಹೇಳಿದ್ದಾರೆ.

ಲಂಡನ್ ಗೆ ಬರುವುದಿಲ್ಲ ಎಂದಿದ್ದರು

ಲಂಡನ್ ಗೆ ಬರುವುದಿಲ್ಲ ಎಂದಿದ್ದರು

ಜಯಲಲಿತಾ ಅವರನ್ನು ಲಂಡನ್ ಗೆ ಕರೆದೊಯ್ದು ಚಿಕಿತ್ಸೆ ನೀಡಬೇಕು ಎಂದಿದ್ದ ಬೇಲ್ ಸಲಹೆಗೆ ಆಕೆ ಒಪ್ಪಿರಲಿಲ್ಲವಂತೆ

ಬೆರಳಿನ ಮೂಲಕ ಸಂಜ್ಞೆ ತೋರಿದ್ದ ಜಯಲಲಿತಾ

ಬೆರಳಿನ ಮೂಲಕ ಸಂಜ್ಞೆ ತೋರಿದ್ದ ಜಯಲಲಿತಾ

ಉಸ್ತುವಾರಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಎರಡನೇ ಬಾರಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಗಾಜಿನ ಪರದೆ ಮೂಲಕ ನೋಡಿದ್ದರಂತೆ. ಆಗ ಜಯಲಲಿತಾ ತನ್ನ ಹೆಬ್ಬೆರಳು ತೋರಿಸಿ, ಸಂಜ್ಞೆ ಮಾಡಿದ್ದರಂತೆ

ಸಹಿಯ ಬದಲು ಹೆಬ್ಬೆಟ್ಟಿನ ಗುರುತು

ಸಹಿಯ ಬದಲು ಹೆಬ್ಬೆಟ್ಟಿನ ಗುರುತು

ತಮಿಳುನಾಡಿನ ಚುನಾವಣೆ ದಾಖಲೆಗೆ ಸಹಿ ಮಾಡುವಾಗ ಜಯಲಲಿತಾ ಅವರಿಗೆ ಪ್ರಜ್ಞೆ ಇತ್ತು ಎಂಬುದನ್ನು ವೈದ್ಯರೊಬ್ಬರು ಖಾತ್ರಿ ಪಡಿಸಿದ್ದಾರೆ. ಆ ದಾಖಲೆಯಲ್ಲಿ ಜಯಾ ಸಹಿಯ ಬದಲು ಹೆಬ್ಬೆಟ್ಟಿನ ಗುರುತು ಹಾಕಿದ್ದರಿಂದ ಹಲವು ಪ್ರಶ್ನೆಗಳು ಉದ್ಭವಿಸಿದ್ದವು.

ವಿಷ ಪ್ರಾಶನ ಅಲ್ಲಗಳೆದ ವೈದ್ಯರು

ವಿಷ ಪ್ರಾಶನ ಅಲ್ಲಗಳೆದ ವೈದ್ಯರು

ಜಯಲಲಿತಾ ಅವರಿಗೆ ವಿಷ ಪ್ರಾಶನವಾಗಿತ್ತು ಎಂಬುದನ್ನು ವೈದ್ಯರು ಸಂಪೂರ್ಣ ಅಲ್ಲಗಳೆದಿದ್ದಾರೆ. ಆಕೆ ಸಾವಿನ ವಿಚಾರವಾಗಿ ಯಾವುದೇ ರಹಸ್ಯವಿಲ್ಲ ಎಂದಿದ್ದಾರೆ. ಎಐಎಡಿಎಂಕೆ ಉಚ್ಚಾಟಿತ ಸಂಸದೆ ಶಶಿಕಲಾ ಪುಷ್ಪಾ ಅವರು ಜಯಲಲಿತಾಗೆ ವಿಷವುಣಿಸಲಾಗಿದೆ ಎಂದು ಚೆನ್ನೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two months after J Jayalalithaa died in a Chennai hospital, doctors who treated her have shared details about the Tamil Nadu Chief Minister's treatment in hospital and her death.
Please Wait while comments are loading...