PUBG ಆಟಕ್ಕೆ ಮತ್ತೊಂದು ಬಲಿ: 16 ವರ್ಷದ ಹುಡುಗ ಸಾವು

ಚೆನ್ನೈ, ಮೇ 20: ಪಬ್‌ಜಿ ಆಟದಿಂದ ಚೆನ್ನೈನಲ್ಲಿ 16 ವರ್ಷದ ಹುಡುಗ ಸಾವನಪ್ಪಿದ್ದಾನೆ. ತಮಿಳುನಾಡಿನ ಈರೋಡ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಈರೋಡ್ ಪಟ್ಟಣದ ಹುಡುಗನೊಬ್ಬ ಯಾವಾಗಲೂ ಪಬ್‌ಜಿ ಆಟ ಆಡುತ್ತಿದ್ದ. ನಿರಂತರವಾಗಿ ಆರು ಗಂಟೆಗಳ ಕಾಲ ಆಟ ಆಡುತ್ತಿದ್ದ ಈ ಬಾಲಕ ಈಗ ಹೃದಯ ಸ್ತಂಭನದಿಂದ ಮೃತನಾಗಿದ್ದಾರೆ.

ಪ್ರತಿದಿನಂತೆ ಆ ದಿನ ಕೂಡ ಊಟ ಮುಗಿಸಿದ ಬಾಲಕ ಮೊಬೈಲ್ ಹಿಡಿದು PUBG ಆಡಲು ಶುರು ಮಾಡಿದ. ಒಂದು ಸಲ ಆಟ ಶುರು ಮಾಡಿದರೆ ನಿರಂತರವಾಗಿ ಆರು ಗಂಟೆಗಳ ಕಾಲ ಆಟ ಆಡುತ್ತಿದ್ದ. ಆದರೆ, ಆ ದಿನ ಆಟ ಆಡುತ್ತಲೇ ಕೆಳಗೆ ಕುಸಿದು ಬಿದ್ದಿದ್ದಾನೆ.

16 Years Old Chennai Boy Dies While Playing PUBG Game

ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಬಾಲಕವನ್ನು ಉಳಿಸಿಕೊಳ್ಳಲು ಕುಟುಂಬದವರಿಗೆ ಸಾಧ್ಯ ಆಗಲಿಲ್ಲ. ಹೃದಯ ಸ್ತಂಭನದಿಂದ ಹುಡುಗ ಮೃತಪಟ್ಟಿದ್ದಾನೆ ಎಂದು ತಿಳಿಸಲಾಗಿದೆ.

ತಮಿಳುನಾಡಿನ ಈ ಬಾಲಕ ಸತೀಶ್ ಕುಮಾರ್ ಎಂದು ತಿಳಿದುಬಂದಿದೆ. 16 ವರ್ಷದ ಈ ಹುಡುಗ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ. ಇದೀಗ PUBG ಆಟ ಈತನನ್ನು ಬಲಿ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+