ತಂಗಿಯ ಕೈಕಾಲು ಕಟ್ಟಿ ನಿರಂತರ ಅತ್ಯಾಚಾರ: 15 ವರ್ಷದ ಬಾಲಕ ಅರೆಸ್ಟ್
ಚೆನ್ನೈ, ಮಾರ್ಚ್ 2: ಸ್ವಂತ ಸಹೋದರಿ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಕಾರಣಕ್ಕಾಗಿ 15 ವರ್ಷದ ಬಾಲಕನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ವಿಲ್ಲಿವಕ್ಕಂನಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕನಾಗಿರುವ ಕಾರಣ ಪೋಸ್ಕೋ ಕಾಯ್ದೆಯಡಿ ಅರೆಸ್ಟ್ ಮಾಡಿ ವಶಕ್ಕೆ ಪಡೆಯಲಾಗಿದೆ.
ತಂದೆ-ತಾಯಿಯ ಆಂತರಿಕ ಜಗಳದ ಬಳಿಕ ಅಣ್ಣ-ತಂಗಿ ಇಬ್ಬರು ತಾಯಿಯ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದರು. ಆರೋಪಿ ಬಾಲಕನಿಗೆ 15 ವರ್ಷ ವಯಸ್ಸಾಗಿದ್ದು, ಆತನಿಗಿಂತ ಒಂದು ವರ್ಷ ವರ್ಷ ತಂಗಿ ಚಿಕ್ಕವಳು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಬಾಲಕ ಮತ್ತು ಬಾಲಕಿಯ ತಂದೆ-ತಾಯಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಇಬ್ಬರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುಂದೆ ಓದಿ...

ಸ್ನೇಹಿತೆ ಮೂಲಕ ವಿಷಯ ಬಹಿರಂಗ
ಬಾಲಕನ ತಾಯಿ ಇನ್ನೊಂದು ಮದುವೆಯಾಗಿದ್ದು, ಎರಡನೇ ಪತಿ ಹಾಗೂ ಮಕ್ಕಳು ಎಲ್ಲರೂ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ದರು. ಅತ್ಯಾಚಾರಕ್ಕೆ ಒಳಗಾಗಿದ್ದ ಹುಡುಗಿ ಶಾಲೆಯಲ್ಲಿ ತನ್ನ ಸ್ನೇಹಿತೆ ಬಳಿ ನಡೆದ ಘಟನೆಯನ್ನು ಹೇಳಿಕೊಂಡಿದ್ದಾರೆ. ಬಳಿಕವಷ್ಟೇ ಈ ಘಟನೆ ಬೆಳಕಿಗೆ ಬಂದಿದೆ.

ಅನೇಕ ಬಾರಿ ಅತ್ಯಾಚಾರವೆಸಗಿದ್ದ
ಕಳೆದ ಡಿಸೆಂಬರ್ ತಿಂಗಳಿನಿಂದ ಅನೇಕ ಬಾರಿ ಸಹೋದರಿ ಮೇಲೆ ಅತ್ಯಾಚಾರವೆಸಗಿದ್ದ ಎಂದು ಹೇಳಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹುಡುಗಿಯ ಕೈಕಾಲು ಕಟ್ಟಿಹಾಕಿ ಬಲತ್ಕಾರ ಮಾಡುತ್ತಿದ್ದ. ಈ ವಿಷಯವನ್ನು ತಾಯಿಗೆ ಹೇಳಬಾರದು ಎಂದು ಭಯ ಪಡಿಸಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.

ವಿಡಿಯೋ ಚಿತ್ರೀಕರಿಸಿರಬಹುದಾ?
ಹುಡುಗನ ಬಳಿ ಮೊಬೈಲ್ ಇದ್ದ ಕಾರಣ ಘಟನೆ ಬಗ್ಗೆ ಏನಾದರೂ ವಿಡಿಯೋ ಚಿತ್ರೀಕರಿಸಿರಬಹುದಾ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಕೌನ್ಸಲಿಂಗ್ ಗೆ ಒಳಪಡಿಸಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸರು ಪ್ರಯತ್ನಿಸಿದ್ದಾರೆ.

ಹೆಚ್ಚಿನ ತನಿಖೆ ಅವಶ್ಯಕ
ಬಾಲಕ ಮತ್ತು ಬಾಲಕಿ ಇಬ್ಬರು ಅಪ್ರಾಪ್ತ ವಯಸ್ಸಿನ ಸನಿಹದಲ್ಲಿದ್ದು, ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಅವಶ್ಯಕತೆ ಇದೆ ಎಂದು ಪೊಲೀಸರು ನಿರ್ಧರಿಸಿದ್ದಾರೆ. ಹೀಗಾಗಿ, ಆರೋಪಿ ಬಾಲಕನ ಮನಸ್ಥಿತಿ ಕುರಿತು ಪೋಕಸ್ ಮಾಡಿದ್ದು, ಚಲನವಲನ ಗಮನಿಸುತ್ತಿದ್ದಾರೆ.












Click it and Unblock the Notifications