ಆಘಾತಕಾರಿ ಸುದ್ದಿ: ಪೋಷಕರೇ ಎಚ್ಚರವಾಗಿರಿ ಮಕ್ಕಳಲ್ಲೂ ಹೆಚ್ಚಿದ ಕೊರೊನಾ!

ಚೆನ್ನೈ, ಏಪ್ರಿಲ್.29: ವಿಶ್ವವನ್ನೇ ವ್ಯಾಪಿಸಿರುವ ಕೊರೊನಾ ವೈರಸ್ ಸೋಂಕಿಗೆ ಆರಂಭದಲ್ಲಿ ಹಿರಿಯ ವಯಸ್ಸಿನವರು ಬಲಿಯಾಗಿದ್ದರು. ಕ್ರಮೇಣ ಸೋಂಕಿತರ ಸಂಖ್ಯೆಯಲ್ಲಿ ಅತಿಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದು ಕೂಡಾ ವೃದ್ಧರೇ. ಇದರ ಮಧ್ಯೆ ಪೋಷಕರೇ ಗಾಬರಿಯಾಗುವಂತೆ ಅಂಶವೊಂದು ಬಯಲಾಗಿದೆ.

ತಮಿಳುನಾಡು ಆರೋಗ್ಯ ಇಲಾಖೆಯು ನೀಡಿರುವ ಅಂಕಿ-ಅಂಶಗಳ ಪ್ರಕಾರ 121ಕ್ಕೂ ಅಧಿಕ ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಆಘಾತಕಾರಿ ಅಂಶವೆಂದರೆ ಈ ಮಕ್ಕಳೆಲ್ಲ 12 ವರ್ಷದೊಳಗಿನವರು ಎಂದು ಗೊತ್ತಾಗಿದೆ.

ಮಂಗಳವಾರ ತಮಿಳುನಾಡಿನ ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಇರುವ ಕೊರೊನಾ ವೈರಸ್ ಸೋಂಕಿತರು ಮತ್ತು ಪ್ರಾಣ ಬಿಟ್ಟವರ ಕುರಿತು ಮೀಡಿಯಾ ಬುಲೆಟಿನ್ ನ್ನು ಬಿಡುಗಡೆಗೊಳಿಸಿತು. ಈ ವೇಳೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,058ಕ್ಕೆ ಏರಿಕೆಯಾಗಿರುವುದು ತಿಳಿದು ಬಂದಿದೆ.

121 Childrens Below 12-Years Get Corona Virus Positive In Tamil nadu

ಚೆನ್ನೈನಲ್ಲೇ 103 ಹೊಸ ಕೊರೊನಾ ಸೋಂಕಿತ ಪ್ರಕರಣ:

ತಮಿಳುನಾಡು ರಾಜಧಾನಿ ಚೆನ್ನೈ ನಗರವೊಂದರಲ್ಲೇ ಕಳೆದ 24 ಗಂಟೆಗಳಲ್ಲಿ 103 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ನಗರದಲ್ಲಿ ಸೋಂಕಿತರ ಸಂಖ್ಯೆಯು 673ಕ್ಕೆ ಏರಿಕೆಯಾಗಿದೆ. ಇನ್ನು, ಏಪ್ರಿಲ್.28ರಂ ಅಂಕಿ-ಅಂಶಗಳ ಪ್ರಕಾರ, 1,128 ಕೊರೊನಾ ವೈರಸ್ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. 27 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಚ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+