ಮೋದಿ, ಸಿಂಗ್‌ರನ್ನು ಅಣಕಿಸಿದರು, ಈಗ ಇಡೀ ದೇಶ ಅವರನ್ನು ಅಣಕಿಸುತ್ತಿದೆ: ರಾಹುಲ್ ಗಾಂಧಿ

ಫರೀದ್‌ಕೋಟ್, ಮೇ 15: ಈ ದೇಶವನ್ನು ತಮ್ಮಿಂದ ಮಾತ್ರವೇ ನಡೆಸಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಭಾವಿಸಿದ್ದಾರೆ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದರು.

ಪಂಜಾಬ್‌ನ ಬರ್ಗಾರಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಮೋದಿ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಈ ಮೊದಲು ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅಣಕಿಸುತ್ತಿದ್ದರು. ಆದರೆ, ಇಂದು ದೇಶವೇ ಅವರನ್ನು ಅಣಕಿಸುತ್ತಿದೆ ಎಂದು ಲೇವಡಿ ಮಾಡಿದರು.

'ಮನಮೋಹನ್ ಸಿಂಗ್ ಅವರ ಕುರಿತು ಮೋದಿ ಅವರು ಕುಚೋದ್ಯ ಮಾಡುತ್ತಿದ್ದರು. ಆದರೆ, ಐದು ವರ್ಷಗಳ ಬಳಿಕ ಮೋದಿ ಅವರು ಮನಮೋಹನ್ ಸಿಂಗ್ ಅವರ ಕುರಿತು ತಮಾಷೆ ಮಾಡುತ್ತಿಲ್ಲ. ಇಂದು ದೇಶವೇ ಮೋದಿ ಅವರನ್ನು ಲೇವಡಿ ಮಾಡುತ್ತಿದೆ' ಎಂದರು.

Lok Sabha elections 2019: narendra modi mocked manmohan singh nation mocking him rahul gandhi

2015ರಲ್ಲಿ ಸಿಖ್ಖರ ಧಾರ್ಮಿಕ ಪವಿತ್ರ ಗ್ರಂಥ 'ಗ್ರಂಥ ಸಾಹಿಬ್‌'ಅನ್ನು ಅವಮಾನಿಸಿದ ಘಟನೆಯನ್ನು ಅವರು ನೆನಪಿಸಿಕೊಂಡರು.

ನಿಮ್ಮ ಧರ್ಮಕ್ಕೆ ಅಗೌರವ ತೋರಿಸಲಾಯಿತು. ಅದರಲ್ಲಿ ತಪ್ಪು ಎಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ನಾನು ನಿಮಗೆ ಖಾತರಿ ನೀಡುತ್ತೇನೆ ಎಂದರು.

'ಪ್ರಧಾನಿ ತಾವೊಬ್ಬರೇ ದೇಶವನ್ನು ನಡೆಸಬಲ್ಲ ವ್ಯಕ್ತಿ ಎಂದುಕೊಂಡಿದ್ದಾರೆ. ಆದರೆ, ವಾಸ್ತವವಾಗಿ ಜನರು ದೇಶವನ್ನು ನಡೆಸುತ್ತಿದ್ದಾರೆ' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+