ಎಂಥ ಸವಾಲನ್ನು ಸ್ವೀಕರಿಸಲು ಭಾರತ ಸಿದ್ಧವಾಗಿದೆ: ಮೋದಿ

ಚಂಡೀಗಢ, ಸೆಪ್ಟೆಂಬರ್ 8: ಭಾರತ ಈಗ ಯಾವುದೇ ಸವಾಲುಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದೆ. ಅದು ದಶಕಗಳಷ್ಟು ಹಳೆಯದಾಗಿರಬಹುದು ಅಥವಾ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿರಬಹುದು. ನೇರವಾಗಿ ಸವಾಲು ಎದುರುಗೊಳ್ಳುವುದು ಹೇಗೆ ಎಂದು ನಮಗೆ ಗೊತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

Recommended Video

      ಬೆಂಗಳೂರಿಗೆ ಮೋದಿ , ಬಿಬಿಎಂಪಿ ಏನ್ ಮಾಡ್ತಿದೆ ನೋಡಿ | Oneindia Kannada

      ಹರ್ಯಾಣದ ರೋಹ್ಟಕ್ ನಲ್ಲಿ ಬಿಜೆಪಿಯ 'ವಿಜಯ್ ಸಂಕಲ್ಪ್' ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಿಜೆಪಿಯ ಕಳೆದ ನೂರು ದಿನಗಳ ಆಡಳಿತವು ಅಭಿವೃದ್ಧಿ, ನಂಬಿಕೆ ಹಾಗೂ ದೊಡ್ಡ್ ಬದಲಾವಣೆಯ ದಿನಗಳಾಗಿದ್ದವು. ಭಯೋತ್ಪಾದನೆ ವಿರುದ್ಧ ಹೋರಾಡಲು ಹಲವು ಕಾನೂನು ತರಲಾಗಿದೆ. ಮುಸ್ಲಿಮ್ ಸೋದರಿಯರ ಹಕ್ಕುಗಳ ರಕ್ಷಣೆಗಾಗಿ ಕಾನೂನು ತರಲಾಗಿದೆ. ಇವೆಲ್ಲ ಜನರ ನಂಬಿಕೆ ಹಾಗೂ ಬೆಂಬಲದಿಂದ ಸಾಧ್ಯವಾಗಿದೆ ಎಂದರು.

      ಆರ್ಥಿಕತೆಯನ್ನು ಬಲಗೊಳಿಸಲು ಮಾರ್ಗಯೋಜನೆ ಸಿದ್ಧವಾಗಿದೆ. ಬ್ಯಾಂಕಿಂಗ್ ಕ್ಷೇತ್ರದ ಬಲವರ್ಧನೆಗೆ ದೇಶದಲ್ಲಿ ಐತಿಹಾಸಿಕ ತೀರ್ಮಾನ ಮಾಡಲಾಗಿದೆ. ಇದು ಕೇವಲ ಆರಂಭ, ಫಲಿತಾಂಶವು ಭವಿಷ್ಯದಲ್ಲಿ ದೊರೆಯಲಿದೆ ಎಂದು ಹೇಳಿದ ಮೋದಿ, ಹರಿಯಾಣದ ಮುಖ್ಯಮಂತ್ರಿ ಮನೋಹರ್ ಖಟ್ಟರ್ ನೇತೃತ್ವದಲ್ಲಿ ಬಿಜೆಪಿಯು ಮತ್ತೊಮ್ಮೆ ಆಯ್ಕೆಯಾಗಿ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

      India Capable To Face Any Challenge, Says PM Narendra Modi

      ಹರಿಯಾಣದಲ್ಲಿ ಬಿಜೆಪಿಯು ತೊಂಬತ್ತು ವಿಧಾನಸಭಾ ಕ್ಷೇತ್ರದಲ್ಲಿ ಎಪ್ಪತ್ತೈದರಲ್ಲಿ ಗೆಲ್ಲುವ ಗುರಿ ಹೊಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+