ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕಾರ್ತಿಕೇಯ ಶರ್ಮಾ ಗೆಲುವು ಪ್ರಶ್ನಿಸಿ ಹೈಕೋರ್ಟ್‌ಗೆ ಅಜಯ್ ಮಾಕನ್ ಅರ್ಜಿ

|
Google Oneindia Kannada News

ಹರಿಯಾಣ, ಜುಲೈ 18: ಇತ್ತೀಚೆಗೆ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಹರಿಯಾಣದ ಕಾರ್ತಿಕೇಯ ಶರ್ಮಾ ಅವರ ಗೆಲವು ಪ್ರಶ್ನಿಸಿ ಹೈಕೋರ್ಟ್‌ಗೆ ಕಾಂಗ್ರೆಸ್ ಅರ್ಜಿ ಸಲ್ಲಿಸಿದೆ.

ಜೂನ್ 10ರಂದು ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಹರಿಯಾಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಾರ್ತಿಕೇಯ ಶರ್ಮಾ ಅವರು ಸ್ಪರ್ಧಿಸಿ ವಿಜಯ ಸಾಧಿಸಿದ್ದರು. ಇದೀಗ ಅವರ ಚುನಾವಣಾ ಗೆಲುವಿನ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಅವರು ಹರಿಯಾಣದ ಹೈಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

Ajay Maken filed petition in High Court questioning victory of Karthikeya Sharma breaking news

ಐಟಿವಿ ನೆಟ್‌ವರ್ಕ್ ಸಂಸ್ಥಾಪಕ ಕಾರ್ತಿಕೇಯ ಶರ್ಮಾ ಬಿಜೆಪಿ ಬೆಂಬಲದೊಂದಿಗೆ ಈ ಬಾರಿ ರಾಜ್ಯಸಭಾ ಚುಣಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ಅವರ ಎದುರಾಗಿ ನಿಂತಿದ್ದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್‌ಗೆ ತೀವ್ರ ಹಿನ್ನಡೆಯಾಗಿತ್ತು. ಈ ಕಾರಣದಿಂದ ಅವರು ಶರ್ಮಾ ಗೆಲುವಿನಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಬೆಂಬಲಿತ ಸ್ವತಂತ್ರ್ಯ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಅವರು ಪಡೆದ 20.6ಮತಗಳ ವಿರುದ್ಧ ಕಾಂಗ್ರೆಸ್‌ನ ಅಜಯ್ ಮಾಕನ್ 20ಮತಗಳ ಅಂತದಲ್ಲಿ ಸೋತಿದ್ದರು. ಶರ್ಮಾ ಅವರಿಗೆ ಹಾಕಿದ ಶಾಸಕರೊಬ್ಬರ ತಪ್ಪಾಗಿ ಗುರಿತಿಸಿದ್ದ ಮತವನ್ನು ಚುನವಣಾಧಿಕಾರಿ ರದ್ದುಗೊಳಿಸಿಲ್ಲ ಎಂದು ಮಾಕನ್ ಆರೋಪಿಸಿದ್ದಾರೆ.
ಕಿರಣ್ ಚೌಧರಿ ಎಂಬುವವರು ಮತ ಚಾಲಯಿಸಿ ಬಂದಾಗಿ ಆ ತಪ್ಪಾದ ಮತ ತಮ್ಮಿಂದ ಟಿಕ್ ಆಗಿದೆ ಎಂದು ಕಿರಣ್ ಚೌದರಿ ತಿಳಿಸಿದ್ದರು. ಅವರು ಉದ್ದೇಶಪೂರ್ವಕವಾಗಿ ಟಿಕ್ ಮಾಡದಿರಬಹುದು. ಈ ಬಗ್ಗೆ ಅವರನ್ನೇ ಕೆಳಿ ಸರಿಪಡಿಸಬೇಕಿತ್ತು. ಇದು ಸೇರಿದಂತೆ ಒಂದೆರಡು ಕಾರಣಗಳಿಂದ ಸ್ವತಂತ್ರ್ಯ ಅಭ್ಯರ್ಥಿ ಶರ್ಮಾ ವಿರುದ್ಧ ಮಾಕನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ತಿಳಿದು ಬಂದಿದೆ.

English summary
Congress general secretary Ajay Maken has filed petition in the High Court challenging the victory of Kartikeya Sharma. BJP supported independence candidate who won the Rajya Sabha elections in Haryana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X