ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಫಲಾಪೇಕ್ಷೆಯಿಲ್ಲದೆ ನೂರಾರು ಹೆರಿಗೆ ಮಾಡಿಸಿದ್ದ ಅಜ್ಜಿಗೆ ಗ್ರಾಮಸ್ಥರಿಂದ ಸನ್ಮಾನ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಮೇ 25: ಈ ವೃದ್ಧೆಯ ವಯಸ್ಸು ಬರೋಬ್ಬರಿ 102 ವರ್ಷ, ಮೂರು ಮಕ್ಕಳ ಈ ತಾಯಿಗೆ 10 ಮಂದಿ ಮೊಮ್ಮಕ್ಕಳು, 12 ಮರಿಮೊಮ್ಮಕ್ಕಳು, ಈಕೆಯ ನೆರವಿನಿಂದ ಆಸ್ಪತ್ರೆ ಸೌಲಭ್ಯವಿಲ್ಲದ ಕಾಲದಲ್ಲಿ ಭೂಮಿಗೆ ಬಂದ ಮಕ್ಕಳ ಸಂಖ್ಯೆ ನೂರಾರು.

ಚಾಮರಾಜನಗರ ತಾಲೂಕಿನ‌ ಮುತ್ತಿಗೆ ಎಂಬ ಗ್ರಾಮದ ಹೊಂಬಾಳೆ ಪುಟ್ಟಮ್ಮ ಎಂಬವರಿಗೆ 102 ವರ್ಷಗಳಾಗಿದದ್ದು ಕಳೆದ 5-6 ವರ್ಷಗಳಿಂದ ಮಗಳೊಟ್ಟಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಎಷ್ಟೇ ವಯಸ್ಸಾದರೇನೂ, ಹುಟ್ಟಿದ ಊರಿನ ಮರೆಯಲಾಗದೆ ತನ್ನೂರು‌ ನೋಡಲು ಪುಟ್ಟಮ್ಮ ಬಂದಿದ್ದಾರೆ.

ದಶಕಗಳ ಹಿಂದೆ ಆಸ್ಪತ್ರೆಗಳಿಲ್ಲದ ಸಂದರ್ಭದಲ್ಲಿ ನೂರಾರು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದ ಪುಟ್ಟಮ್ಮನ ಪುನಾರಾಗಮನದಿಂದ ಸಂತೋಷ ಪಟ್ಟ ಗ್ರಾಮಸ್ಥರು ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮೂರು ದಶಕಗಳಲ್ಲಿ ಸುತ್ತಳ್ಳಿಗೆ ಈಕೆಯೆ ವೈದ್ಯೆ

ಮೂರು ದಶಕಗಳಲ್ಲಿ ಸುತ್ತಳ್ಳಿಗೆ ಈಕೆಯೆ ವೈದ್ಯೆ

ಪುಟ್ಟಮ್ಮಗೆ ಓದು ಬರಹ ಬರುವುದಿಲ್ಲ ಆದರೆ ಈಕೆಗೆ ಲೋಕಾನುಭವ, ನಾಟಿ ವೈದ್ಯ ಪದ್ಧತಿ ಪದವಿಗೇ ಮೀರಿದ ತಿಳುವಳಿಕೆಯಿತ್ತು. 1960-90ರ ವರೆಗೆ ಸಾರಿಗೆ ವ್ಯವಸ್ಥೆ, ಆಸ್ಪತ್ರೆ ಸೌಕರ್ಯ ಇಲ್ಲದಿದ್ದ ಸಮಯದ ಗ್ರಾಮದಲ್ಲಿ ಯಾರಿಗೇ ಹೆರಿಗೆ ನೋವು ಬಂದರೂ ಜಾತಿ ಬೇದವಿಲ್ಲದೆ ಪುಟ್ಟಮ್ಮನೇ ವೈದ್ಯರಾಗಿ ಹೆರಿಗೆ ಮಾಡಿಸುತ್ತಿದ್ದರು.

ಮಕ್ಕಳ ಖಾಯಿಲೆಗೆ ನಾಟಿ ಔಷಧ

ಮಕ್ಕಳ ಖಾಯಿಲೆಗೆ ನಾಟಿ ಔಷಧ

ಇನ್ನು, ಮಕ್ಕಳಿಗೆ ರೋಗ ಬಂದ್ರೆ ನಾರು, ಬಳ್ಳಿಗಳಿಂದ ನಾಟಿ ಔಷಧ ಮಾಡಿ ಗುಣಪಡಿಸುವ ಮೂಲಕ ನಾಟಿ ವೈದ್ಯೆಯಾಗಿ ಪ್ರಸಿದ್ದಿ ಪಡೆದಿದ್ದರು.. ಇವರ ಕೈಗುಣ ಇಂದಿನ ವೈದ್ಯರನ್ನೂ ಮೀರಿಸುವಂತಿತ್ತು ಎನ್ನತ್ತಾರೆ ಗ್ರಾಮಸ್ಥರು.

ಹೊಂಬಾಳೆ ಪುಟ್ಟಮ್ಮ ಹೆರಿಗೆ ಕಸುಬನ್ನು ಮಾತ್ರವಲ್ಲದೆ ಗ್ರಾಮದಲ್ಲಿ ಆ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಮಾಲೆ, ಸಿಡುಬು, ವಾಂತಿ, ಬೇದಿ, ಜ್ವರ ಇನ್ನಿತರ ಕಾಯಿಲೆಗಳಿಗೆ ಕೈ ಔಷಧಿ ನೀಡಿ ಗುಣ ಪಡಿಸುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

500ಕ್ಕೂ ಹೆಚ್ಚು ಹೆರಿಗೆ

500ಕ್ಕೂ ಹೆಚ್ಚು ಹೆರಿಗೆ

ತನ್ನ ಕಾಲದಲ್ಲಿ ಅಂದಾಜು 500 ಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಪುಟ್ಟಮ್ಮ ತನ್ನ ಕೈಯಲ್ಲಿ ಹುಟ್ಟಿದ ಮಕ್ಕಳನ್ನು ಈಗಲೂ ಇಂತಹವರ ಮಕ್ಕಳೇ ಎಂದು ಗುರುತು ಹಿಡಿಯುವ ಅಗಾಧವಾದ ನೆನಪಿನ ಶಕ್ತಿ ಇನ್ನೂ ಇದೆ. ಈಕೆ ಈಗಲೂ ಆರೋಗ್ಯವಾಗಿದ್ದು ಹಳ್ಳಿಬಿಟ್ಟು ಮಕ್ಕಳೊಟ್ಟಿಗೆ ಬೆಂಗಳೂರಲ್ಲಿ ವಾಸವಿದ್ದಾರೆ. 102 ವರ್ಷವಾದರೂ ತಾನು ಹುಟ್ಟಿದ, ಬೆಳೆದ ಊರನ್ನು ನೋಡಬೇಕೆಂದು ಬಂದ್ದಿದ್ದರು. ಹಾಗಾಗಿ ಅವರನ್ನು ನೋಡಿದ ಗ್ರಾಮಸ್ಥರು ಪುಟ್ಟಮ್ಮನಿಗೆ ಗ್ರಾಮಸ್ಥರು ಹೃದಯಸ್ಪರ್ಶಿಯಾಗಿ ಸನ್ಮಾನಿಸಿದ್ದಾರೆ.

2ನೇ ತಾಯಿಯೆಂದು ಬಣ್ಣಿಸಿದ ಮುಖಂಡರು

2ನೇ ತಾಯಿಯೆಂದು ಬಣ್ಣಿಸಿದ ಮುಖಂಡರು

ಆಸ್ಪತ್ರೆಗಳ ಸೌಲಭ್ಯ ಇಲ್ಲದ ಕಾಲದಲ್ಲಿ ಪುಟ್ಟಮ್ಮ 500ರಿಂದ 600 ಹೆರಿಗೆ ಮಾಡಿಸಿದ್ದಾರೆ. ನಾಟಿ ವೈದ್ಯರಾಗಿಯೂ ಔಷಧಿ ನೀಡುತ್ತಿದ್ದರು. ಹಿಂದೆ 13-15 ವರ್ಷಕ್ಕೆ ಮದುವೆ ಮಾಡುತ್ತಿದ್ದರು. ಆ ಕಾಲದಲ್ಲೇ ಅವರೂ ತಾಯಿ ಮಗುವಿಗೆ ಯಾವುದೇ ರೀತಿ ತೊಂದರೆಯಾಗದಂತೆ ಹೆರಿಗೆ ಮಾಡಿಸುತ್ತಿದ್ದರು. ಇವರು ನಮಗೆ ಹೆತ್ತ ತಾಯಿಗೆ ಸಮಾನರು, ಇವರು ಇನ್ನಷ್ಟು ವರ್ಷ ಆರೋಗ್ಯದಿಂದ ಬಾಳಲಿ ಎಂದು ಹಾರೈಸಿ, ಊರಿನವರು ಸನ್ಮಾನ ಮಾಡಿ ಅವರನ್ನು ಕಳಹಿಸಿಕೊಡುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಬರೀ ರಾಜಕಾರಣಿಗಳು, ಫಿಲಂ ಸ್ಟಾರ್‌ಗಳಿಗೆ ಸನ್ಮಾನ ಮಾಡುವ ಈ ಕಾಲದಲ್ಲಿ ತನ್ನೂರಿನ ನಾಟಿ ವೈದ್ಯೆ ಹೊಂಬಾಳೆ ಪುಟ್ಟಕ್ಕ ಊರಿಗೆ ಬರ್ತಾರೆ ಎಂದ ಕೂಡಲೇ ಗ್ರಾಮದ ಎಲ್ಲರೂ ಒಟ್ಟುಗೂಡಿ ಆಕೆಗೆ ಸನ್ಮಾನ ಮಾಡುವ ಮೂಲಕ ಇಲ್ಲಿನ ಜನರು ಗಮನ ಸೆಳೆದಿದ್ದಾರೆ. ಒಟ್ಟಾರೆಯಾಗಿ ಈಗಿನ ಕಾಲದಲ್ಲಿ ಹೆರಿಗಾಗಿ ಸಾವಿರಾರು ರೂಪಾಯಿ ಖರ್ಚುಮಾಡಬೇಕಾದ ಬಡವರು ಅಂದು ನಯಾಪೈಸೆ ಪಡೆಯದೇ ಸಾವಿರಾರು ಹೆಣ್ಮಕ್ಕಳಿಗೆ ಉಚಿತವಾಗಿ ಹೆರಿಗೆ ಮಾಡಿಸಿ ನಾಟಿ ವೈದ್ಯೆ ಎನಿಸಿಕೊಂಡ ಹೊಂಬಾಳೆ ಪುಟ್ಟಮ್ಮನಿಗೆ ಸರ್ಕಾರ ಗುರುತಿಸಿ ಪುರಸ್ಕರಿಸಬೇಕಿದೆ.

English summary
Chamarajanagar Taluk, Muttige Village people facilitated 102 years old woman, who have done hundreds of parturition without taking money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X