ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಲ್ಲಿ ಒಂದೇ ದಿನ ಎರಡು ಹುಲಿ, ಹೆಣ್ಣಾನೆ ಕಳೇಬರ ಪತ್ತೆ

By Yashaswini
|
Google Oneindia Kannada News

ಚಾಮರಾಜನಗರ, ಜನವರಿ 25 : ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಹಾಗೂ ಹೆಣ್ಣಾನೆ ಅನುಮಾನಾಸ್ಪದವಾಗಿ ಮೃತಪಟ್ಟಿವೆ.

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಜಿ.ಎಸ್.ಬೆಟ್ಟ ವಲಯದ ಹಂಗಳ ಶಾಖೆ, ಸೋಮನಾಥಪುರ ಗಸ್ತಿನ ಹಿರಿಕೆರೆ ಅರಣ್ಯ ಪ್ರದೇಶದಲ್ಲಿ ಕಳೇಬರ ಪತ್ತೆಯಾಗಿವೆ. ಅಂದಾಜು 3 ವರ್ಷದ ಗಂಡು ಹುಲಿ, 2 ವರ್ಷದ ಹೆಣ್ಣು ಹುಲಿ ಮೃತಪಟ್ಟಿವೆ. ಗುರುವಾರ ಇವುಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಹುಲಿ ದರ್ಶನ ಮಾಡಬೇಕಿದ್ದರೆ ಬಂಡೀಪುರಕ್ಕೆ ಬಂಡಿ ಹತ್ತಿಹುಲಿ ದರ್ಶನ ಮಾಡಬೇಕಿದ್ದರೆ ಬಂಡೀಪುರಕ್ಕೆ ಬಂಡಿ ಹತ್ತಿ

ಹುಲಿಗಳ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ವೇಳೆ ಹುಲಿಯ ಅಂಗಗಳನ್ನು ಸಂಗ್ರಹಿಸಿದ್ದು, ಹೆಚ್ಚಿನ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹುಲಿಗಳ ಮೃತ ದೇಹದ ಮರಣೋತ್ತರ ಶವ ಪರೀಕ್ಷೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯಾಧಿಕಾರಿ ನಡೆಸಿದರು.

Two tiger, elephant dead body found in Bandipur

ಆನೆ ಮೃತ ದೇಹ ಪತ್ತೆ

ಹುಲಿಗಳ ಕಳೇಬರ ಪತ್ತೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಹೆಣ್ಣಾನೆ ಕಳೇಬರ ಸಹ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 23 ವರ್ಷದ ಹೆಣ್ಣಾನೆಯು ಮೂರ್ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಹುಲಿಗಳು ಮೃತಪಟ್ಟು ನಾಲ್ಕೈದು ದಿನ ಕಳೆದಿರುವ ಕಳೇಬರದ ಒಂದು ಭಾಗ ಕೊಳೆತು ಹೋಗಿದೆ.

English summary
Two tiger and elephant dead body found in Bandipur, Chamarajanagar district on Thursday. Body parts of tigers sent to Bengaluru lab to find reasons for death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X