ಹನೂರು: ಚುನಾವಣಾ ತರಬೇತಿ ವೇಳೆ ಹೃದಯಾಘಾತವಾಗಿ ಖಜಾನೆ ಇಲಾಖೆ ನೌಕರ ಸಾವು
ಹನೂರು, ಏಪ್ರಿಲ್, 17: ವಿಧಾನಸಭಾ ಚುನಾವಣೆ ನಿಮಿತ್ತ ತರಬೇತಿಗೆ ಆಗಮಿಸಿದ್ದ ಜಗದೀಶ್ (40) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹನೂರಿನನಲ್ಲಿ ನಡೆದಿದೆ.
ಪಟ್ಟಣದ ವಿವೇಕನಂದಾ ಶಾಲೆಯಲ್ಲಿ ಮಂಗಳವಾರ ಎಆರ್‌ಓ ಹಾಗೂ ಪಿಆರ್‌ಓಗಳಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ತರಬೇತಿ ಆರಂಭ ಆಗುತ್ತಿದ್ದಂತೆ ಖಜಾನೆ ಇಲಾಖೆ ನೌಕರ ಜಗದೀಶ್ ಎದೆನೋವಿನಿಂದ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಹೋಲಿಕ್ರಾಸ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಬೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು ಎನ್ನುವ ಮಾಹಿತಿ ಲಭ್ಯವಾಗಿದೆ.

ಅಪ್ಪ "ಕೈ" ಅಭ್ಯರ್ಥಿಯಾಗಿ, ಮಗ ಪಕ್ಷೇತ್ರರನಾಗಿ ನಾಮಪತ್ರ ಸಲ್ಲಿಕೆ
ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ನರೇಂದ್ರ ಅವರು ಇತ್ತೀಚೆಗಷ್ಟೇ ನಾಮಪತ್ರ ಸಲ್ಲಿಸಲಿದ್ದರು. ಇದೀಗ ಅವರ ಮಗ ನವನೀತ್ ಗೌಡ ಸೋಮವಾರ ಪಕ್ಷೇತರನಾಗಿ ನಾಮಪತ್ರ ಸಲ್ಲಿಸುವ ಮೂಲಕ ಎದುರಾಳಿಗಳ ತಲೆಗೆ ಹುಳು ಬಿಟ್ಟಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಅಪ್ಪ ಮೂರು ಬಾರಿ ಎಂಎಲ್ಎ ಆಗಿದ್ದು, ಇದೀಗ ನಾಲ್ಕನೇ ಬಾರಿಗೆ ಕಣಕ್ಕಿಳಿಯುತ್ತಿದ್ದಾರೆ. ಮತ್ತೊಂದೆಡೆ ಮಗ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ನರೇಂದ್ರ ಪರ ಮಗ ನವನೀತ್ ಬೆಟ್ಟಗುಡ್ಡ ಹತ್ತಿಳಿದು ಪ್ರಚಾರ ನಡೆಸಿದ್ದು, ತಮ್ಮ ಕುಟುಂಬದ ಮತ ಬ್ಯಾಂಕ್ ಬೇರೆಯವರ ಪಾಲಾಗದಂತೆ ಎಚ್ಚರ ವಹಿಸಿದ್ದಾರೆ.
ಈ ನಡುವೆ ಆರ್.ನರೇಂದ್ರ ಅವರ ಮಗ ನವನೀತ್ ಗೌಡ ಕೂಡ ಪಕ್ಷೇತರನಾಗಿ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಮಗನಿಗೆ ನಾಮಪತ್ರ ಸಲ್ಲಿಕೆ ಮಾಡುವ ಚುನಾವಣೆಯ ಪಾಠವನ್ನು ಎಂಎಲ್ಎ ನರೇಂದ್ರ ಧಾರೆ ಎರೆದಂತೆ ಆಗಿದೆ. ಅಲ್ಲದೆ ಬೇರೆ ಏನು ರಣನೀತಿ ಇದೆಯೋ ಅನ್ನುವುದು ಸದ್ಯಕ್ಕಂತೂ ತಿಳಿಯದಾಗಿದೆ.












Click it and Unblock the Notifications