ಮನೆಗೆ ಸೇರುವ ಬದಲು ಮಸಣ ಸೇರಿದ ಎಚ್ ಡಿ ಕೋಟೆಯ ನತದೃಷ್ಟ ರೈತ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಮೇ 18: ಚಾಮರಾಜನಗರ ಜಿಲ್ಲೆ ಎಚ್.ಡಿ.ಕೋಟೆ: ರೈತನೊಬ್ಬ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಯತ್ತ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಮಾನಂದವಾಡಿ ರಸ್ತೆಯ ಹೊಸಹೊಳಲು ಗ್ರಾಮದ ಸಮೀಪ ನಡೆದಿದೆ.

ಹೊಸಮಾಳ ಗ್ರಾಮದ ನಿವಾಸಿ ಎಚ್.ಎ.ನಿಂಗರಾಜು (40) ಮೃತಪಟ್ಟ ದುರ್ದೈವಿ. ಇವರು ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಬೈಕ್ ನಲ್ಲಿ ಮನೆ ಕಡೆ ಹೊರಟಿದ್ದರು. ಮಾನಂದವಾಡಿ ರಸ್ತೆಯ ಹೊಸಹೊಳಲು ಗ್ರಾಮದ ಬಳಿ ಸಂಜೆ 4.15ರ ಸಮಯದಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿದ್ದ ನಿಂಗರಾಜು ಅವರು ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟ್ಪಿದ್ದಾರೆ.[ಚಾಮರಾಜನಗರ: ಮದುವೆಗೆಂದು ಹೊರಟ ಮೂವರು ಮಸಣ ಸೇರಿದರು]

Tragic accident in Chamarajanagar, a farmer dies

ಈ ಘಟನೆ ನಡೆದ ಕಾರಣ ಸಂಚಾರ ಅಸ್ತವ್ಯಸ್ತವಾಗಿತ್ತು, ನಂತರ ಸ್ಥಳಕ್ಕೆ ಬಂದ ಬೀಚನಹಳ್ಳಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು, ಘಟನೆ ಕಾರಣನಾದ ಬಸ್ ಚಾಲಕ ಪರಾರಿಯಾಗಿದ್ದು, ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.[ಚಾಮರಾಜನಗರ: ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ವಿದ್ಯಾರ್ಥಿನಿ ನೇಣಿಗೆ ಶರಣು]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a heartmelting incident a farmer from H D Kote, Chamarajanagar district, who was leaving his farm to home dies by an accident.
Please Wait while comments are loading...