ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಜೆಯ ಮಜೆ ಕಳೆಯಲು ಬಂಡೀಪುರಕ್ಕೆ ಪ್ರವಾಸಿಗರ ಲಗ್ಗೆ

|
Google Oneindia Kannada News

ಮೈಸೂರು, ಮೇ 4 : ಬೇಸಿಗೆ ರಜೆಯ ಕಾರಣ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಪ್ರತಿದಿನ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಬಂಡೀಪುರಕ್ಕೆ ಆಗಮಿಸುತ್ತಿರುವ ಪ್ರವಾಸಿಗರು ಬೆಳಗ್ಗೆ 7.30ರಿಂದ 9.30ರವರೆಗೆ ರವರೆಗೆ ಸಫಾರಿ ತೆರಳಿ ಹಸಿರು ಸೊಬಗಿನ ಜತೆ ಆನೆಗಳ ಹಿಂಡು, ಕಾಡೆಮ್ಮೆ, ಜಿಂಕೆ ಮತ್ತು ನವಿಲು ಸೇರಿದಂತೆ ವನ್ಯ ಮೃಗಗಳನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.

ಕಳೆದೆರಡು ತಿಂಗಳ ಹಿಂದೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದ್ದು ಪರಿಸರ ಪ್ರೇಮಿಗಳ ಮನಸ್ಸಿಗೆ ನೋವು ಉಂಟು ಮಾಡಿತ್ತು. ಈ ವೇಳೆ ಸಫಾರಿ ವಲಯದಲ್ಲಿ ಬೆಂಕಿ ಬಿದ್ದಿರಲಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿತ್ತು. ಜೊತೆಗೆ ಕಳೆದೆರಡು ವಾರಗಳಿಂದ ಸಾಧಾರಣ ಪ್ರಮಾಣದ ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ಉತ್ತಮವಾಗಿ ಹಸಿರಿನಿಂದ ಕೂಡಿದ ಕಾನನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಬಂಡೀಪುರ ಸಫಾರಿ ಟಿಕೆಟ್‌ಗೆ ಸಾಲು

ಬಂಡೀಪುರ ಸಫಾರಿ ಟಿಕೆಟ್‌ಗೆ ಸಾಲು

ಇದೇ ರೀತಿ ಸಂಜೆಯ ಸಫಾರಿಗೆ ತೆರಳಲು ಸಾವಿರಾರು ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಬಂಡೀಪುರ ಸ್ವಾಗತ ಕಚೇರಿ ಮುಂಭಾಗದಲ್ಲಿರುವ ಟಿಕೆಟ್ ಕೌಂಟರ್ ಮುಂದೆ ನಿಂತಿರುವ ದೃಶ್ಯ ಕಂಡು ಬರುತ್ತಿದೆ. ಸದ್ಯ ಬಂಡೀಪುರದಲ್ಲಿ ಸಾಧಾರಣವಾಗಿ ಮಳೆಯಾಗಿದ್ದು, ಅಲ್ಲಲ್ಲಿ ಹಸಿರು ಸಿರಿ ಕಂಡುಬರುತ್ತಿದ್ದು ಇದರಿಂದಾಗಿ ಇಲ್ಲಿಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ.

ಸಮೃದ್ಧವಾಗಿರುವ ಕೆರೆ, ಸ್ವಚ್ಛಂದ ವನ್ಯ ಜೀವಿಗಳು

ಸಮೃದ್ಧವಾಗಿರುವ ಕೆರೆ, ಸ್ವಚ್ಛಂದ ವನ್ಯ ಜೀವಿಗಳು

ಹಚ್ಚ ಹಸುರಿನ ಸಮೃದ್ಧಿಯಾಗಿರುವ ತುಂಬಿರುವ ಕೆರೆ - ಕಟ್ಟೆಗಳು ಸ್ವಚ್ಛಂದವಾಗಿ ವಿಹರಿಸುವ ವನ್ಯಜೀವಿಗಳು ಮತ್ತು ಪಕ್ಷಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹೊಸದಾಗಿ ಚಿಗುರಿದ ಹುಲ್ಲನ್ನು ಮೇಯಲು ಬರುವ ಹರಿಣಗಳ ಹಾಗೂ ಆನೆಗಳು ಹಿಂಡು - ಹಿಂಡಾಗಿ ರಸ್ತೆ ಬದಿಯಲ್ಲಿ ಕಂಡು ಬರುತ್ತಿದ್ದು, ಪ್ರವಾಸಿಗರಲ್ಲಿ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಸಂತಸವನ್ನುಂಟು ಮಾಡಿದೆ.

ಕೃಪೆ ತೋರಿದ ವರುಣ:ಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರ ಕೃಪೆ ತೋರಿದ ವರುಣ:ಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರ

ಹುಲ್ಲನ್ನು ಮೇಯಲು ಆಗಮಿಸುವ ಜಿಂಕೆಗಳು

ಹುಲ್ಲನ್ನು ಮೇಯಲು ಆಗಮಿಸುವ ಜಿಂಕೆಗಳು

ಬೆಳಿಗ್ಗೆ ಹಾಗೂ ಸಂಜೆಯಾಗುತ್ತಿದ್ದಂತೆಯೇ ರಸ್ತೆ ಬದಿಯಲ್ಲಿ ಬೆಳೆದಿರುವ ಹಸಿರು ಹುಲ್ಲನ್ನು ಮೇಯಲು ಆಗಮಿಸುವ ಚುಕ್ಕಿ ಜಿಂಕೆಯನ್ನು ನೋಡಲು ಪ್ರವಾಸಿಗರು ಬಂಡೀಪುರಕ್ಕೆ ಮತ್ತೆ ಮತ್ತೆ ಬರಬೇಕೆಂದಸೆನಿಸುತ್ತದೆ. ನೂರಾರು ಸಂಖ್ಯೆಯಲ್ಲಿ ರಸ್ತೆಯ ಪಕ್ಕದಲ್ಲಿ ಹಿಂಡುಹಿಂಡಾಗಿ ಆಗಮಿಸುವ ಜಿಂಕೆಗಳ ಅಂದವನ್ನು ಕಣ್ತುಂಬಿಸಿ ಹಾಗೂ ತಮ್ಮ ಮೊಬೈಲ್ ಗಳಲ್ಲಿ ಅವುಗಳ ಫೋಟೊವನ್ನು ಸೆರೆಹಿಡಿಯಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಪ್ರಸಿದ್ಧಿ

ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಪ್ರಸಿದ್ಧಿ

ಇನ್ನು ಸಮೀಪದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ದೇವಾಲಯದ ಮುಂಭಾಗ ಸರತಿ ಸಾಲಿನಲ್ಲಿ ನಿಂತು ಹಿಮವದ್ ಗೋಪಾಲಸ್ವಾಮಿ ದರ್ಶನ ಪಡೆದು ಪುನೀತರಾದ ಭಕ್ತಾದಿಗಳು ಕುಟುಂಬ ಸಮೇತರಾಗಿ ಬಂಡೀಪುರ ಮತ್ತು ಮಧುಮಲೈ ಅರಣ್ಯ ಪ್ರದೇಶಗಳಿಗೆ ತರುವ ದೃಶ್ಯ ಸಾಮಾನ್ಯವಾಗಿದೆ .

ಕಾಡಿನಲ್ಲಿ ಬೆಂಕಿ ನಂದಿಸೋದು ಬಿಟ್ಟು ಸೆಲ್ಫೀ ತೆಗೆಯೋದ್ರಲ್ಲಿ ಬಿಜಿಯಾದ್ರೆ ಹೇಗೆ ಕಾಡಿನಲ್ಲಿ ಬೆಂಕಿ ನಂದಿಸೋದು ಬಿಟ್ಟು ಸೆಲ್ಫೀ ತೆಗೆಯೋದ್ರಲ್ಲಿ ಬಿಜಿಯಾದ್ರೆ ಹೇಗೆ

ಸೂಕ್ತ ವಾಹನಗಳ ವ್ಯವಸ್ಥೆ

ಸೂಕ್ತ ವಾಹನಗಳ ವ್ಯವಸ್ಥೆ

ಇನ್ನು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಕೃಷ್ಣ ಈ ಬಗ್ಗೆ ಪ್ರತಿಕ್ರಿಯಿಸಿ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ 13 ವಲಯಗಳನ್ನು ಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರ ಅರಣ್ಯ ಮಟ್ಟ ಬಿಟ್ಟ ಗದ್ದೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬೇಸಿಗೆ ರಜೆ ಹಿನ್ನೆಲೆ ಪ್ರತಿ ದಿನ ಬೆಳಗ್ಗೆಯಿಂದಲೇ ಸಾವಿರಾರು ಪ್ರವಾಸಿಗರು ಬಂದಿದ್ದು, ಅವರಿಗೆ ನಿರಾಸೆಯಾಗದಂತೆ ಸೂಕ್ತ ವಾಹನದ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಸಫಾರಿಗೆ ತೆರಳಲು ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ಕಾಡುಗಳನ್ನು ರಕ್ಷಿಸಲು ಹೊರಗಿನವರ ಸಹಾಯ ಬೇಡ:ಅರಣ್ಯ ಇಲಾಖೆ ನಮ್ಮ ಕಾಡುಗಳನ್ನು ರಕ್ಷಿಸಲು ಹೊರಗಿನವರ ಸಹಾಯ ಬೇಡ:ಅರಣ್ಯ ಇಲಾಖೆ

English summary
Huge numbers of tourists are coming to Bandipura and Himvad gopalswamy hills for enjoy the summer holidays with family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X