Get Updates
Get notified of breaking news, exclusive insights, and must-see stories!

ಗುಂಡ್ಲುಪೇಟೆ: ಕಾದಾಟದಲ್ಲಿ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ "ಹುಲಿ"ರಾಯ ಪತ್ತೆ

ಚಾಮರಾಜನಗರ, ನವೆಂಬರ್‌, 24: ಸರಹದ್ದಿನ ಕಾದಾಟದಲ್ಲಿ ಹುಲಿಯೊಂದು ತೀವ್ರವಾಗಿ ಗಾಯಗೊಂಡು ಮೇಲಕ್ಕೆ ಏಳಲಾರದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿ ಸಮೀಪ ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯ ಜನವಸತಿ ಸಮೀಪವೇ ಗಾಯಗೊಂಡ ಹುಲಿ ತೀರಾ ನಿತ್ರಾಣದ ಸ್ಥಿತಿಯಲ್ಲಿ ಕಾಣಿಸಿಕೊಂಡಿದೆ.

Tiger found in injured condition At Gundlupete

ಹುಲಿಗೆ 4 ವರ್ಷಗಳಾಗಿರಬಹುದು ಎಂದು ಅಂದಾಜು ಮಾಡಲಾಗಿದ್ದು, ಮತ್ತೊಂದು ಗಂಡು ಹುಲಿ ಜೊತೆಗಿನ ಸರಹದ್ದಿನ ಕಾದಾಟದಲ್ಲಿ ಗಾಯಗೊಂಡಿದೆ. ಹುಲಿ ಈಗಾಗಲೇ ನಿತ್ರಾಣಗೊಂಡಿರುವುದರಿಂದ ಚುಚ್ಚುಮದ್ದು ಕೊಟ್ಟು ಸೆರೆ ಹಿಡಿಯಲಾಗಲ್ಲ. ಬೋನಿನ ಮೂಲಕ ಸೆರೆ ಹಿಡಿಯಲು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕಾವೇರಿ ಮಡಿಲಲ್ಲಿ ಮಿಂದೆದ್ದ "ಗಜ"ಗ್ಯಾಂಗ್‌

ಇನ್ನು ಇತ್ತೀಚೆಗಷ್ಟೇ ಭೋರ್ಗರೆದು ಹರಿಯುವ ಕಾವೇರಿ ನದಿಯನ್ನು ಬರೋಬ್ಬರಿ 19ಕ್ಕೂ ಅಧಿಕ ಆನೆಗಳು ದಾಟಿರುವ ವೀಡಿಯೋಯೊಂದನ್ನು ಯುವಕ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಹನೂರು ತಾಲೂಕಿನ ಗಡಿಯಲ್ಲಿರುವ ಹೊಗೆನಕಲ್ ಜಲಪಾತದಲ್ಲಿ ಈ ಘಟನೆ ನಡೆದಿತ್ತು.

3 ಮರಿಗಳು ಸೇರಿದಂತೆ 19ಕ್ಕೂ ಹೆಚ್ಚು ಆನೆಗಳು ಕಾವೇರಿ ದಂಡೆಯನ್ನು ದಾಟಿ ಅಲ್ಲೇ ಓಡಾಡಿ ದಣಿವು ತಣಿಸಿಕೊಳ್ಳುತ್ತಾ ಮೇಯುತ್ತಾ ರಿಲಾಕ್ಸ್‌ನಲ್ಲಿರುವ ವೀಡಿಯೋವನ್ನು ಗೋಪಿನಾಥಂ ಎಂಬ ಯುವಕ ಸೆರೆ ಹಿಡಿದಿದ್ದಾನೆ. ಅರಣ್ಯ ಪ್ರದೇಶದ ಭಾಗದಲ್ಲಿ ನೀರಿನ ಕೊರತೆ ಇರುವುದರಿಂದ ಒಂದು ನದಿ ಭಾಗದಲ್ಲಿ ಬಂದು ಬೀಡು ಬಿಡಲಿದ್ದು, ಸದ್ಯ 19ಕ್ಕೂ ಅಧಿಕ ಆನೆಗಳ ಗುಂಪು ಕಾವೇರಿ ದಂಡೆಯಲ್ಲಿ ವಿಹರಿಸುತ್ತಿವೆ.

ನಾಡಿನತ್ತ ಬಂದ ಕಾಡಾನೆ

ಇನ್ನು ಇತ್ತೀಚೆಗಷ್ಟೇ ನೀರಿನ ಅಭಾವ ಕೇವಲ ನಾಡಲ್ಲಿ ಮಾತ್ರವಲ್ಲದೇ ಕಾಡಲ್ಲೂ ಕಾಣಿಸಿಕೊಂಡಿದೆ ಎಂಬುದಕ್ಕೆ ರಸ್ತೆಬದಿ ನಿಂತಿದ್ದ ನೀರು ಕುಡಿದ ಈ ಆನೆಯೇ ಸಾಕ್ಷಿ.‌ ಹನೂರು ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆ ಜಮೀನಿನಲ್ಲಿ ಹಾಕಿರುವ ಫೈರುಗಳು ಒಣಗಿರುವುದು ಒಂದೆಡೆಯಾದರೆ, ಅರಣ್ಯದಲ್ಲಿ ಕೆರೆಕಟ್ಟೆಗಳು ಖಾಲಿಯಾಗಿರುವುದರಿಂದ ವನ್ಯ ಪ್ರಾಣಿಗಳು ನಾಡಿನತ್ತ ಬರಲು ಪ್ರಾರಂಭಿಸಿದೆ. ಮಲೆ ಮಹದೇಶ್ವರ ಬೆಟ್ಟದಿಂದ ಪಾಲಾರ್ ಕಡೆಗೆ ತೆರಳುವ ರಸ್ತೆಯಲ್ಲಿ ಕಾಡಿನಿಂದ ಹೊರಬಂದ ಆನೆಯೊಂದು ರಸ್ತೆಬದಿ ನಿಂತಿದ್ದ ಹಳ್ಳದ ನೀರನ್ನು ಕುಡಿದು ದಣಿವಾರಿಸಿಕೊಂಡಿತ್ತು. ಇನ್ನು ಆನೆ ನೀರು ಕುಡಿಯುವುದನ್ನು ವಾಹನ ಸವಾರರೋರ್ವ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಭಾರೀ ವೈರಲ್‌ ಆಗಿತ್ತು.

ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತವೆ ಅಚ್ಚರಿಗಳು

ಚಾಮರಾಜನಗರ ಜಿಲ್ಲೆಯಲ್ಲಿರುವ ಅರಣ್ಯಗಳು ವಿಭಿನ್ನವಾಗಿದ್ದು, ಇಲ್ಲಿ ಆಗೊಮ್ಮೆ ಈಗೊಮ್ಮೆ ನಮಗೆ ಅಚ್ಚರಿಗಳು ಲಭ್ಯವಾಗುತ್ತಲೇ ಇರುತ್ತವೆ. ಇಲ್ಲಿ ಹಲವು ಬಗೆಯ ಜೀವರಾಶಿಗಳಿದ್ದು, ಅವು ಎಲ್ಲ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಾರದಿದ್ದರೂ ಅವುಗಳನ್ನು ಹುಡುಕಿ ಹೋಗುವವರಿಗೆ ಮಾತ್ರ ವಿಸ್ಮಯ ಕಾದಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಅಡ್ಡಾಡಿದರೆ ನಮಗೆ ಇಲ್ಲಿನ ಅರಣ್ಯ ಮತ್ತು ಅದರೊಳಗಿನ ವನ್ಯ ಜೀವಿ ಸಂಪತ್ತಿನ ಅರಿವಾಗುತ್ತದೆ. ಈ ಅರಣ್ಯದೊಳಗೆ ಒಂದು ಸುತ್ತು ಬಂದರೆ ಇಲ್ಲಿರುವ ಅಪರೂಪದ ಜೀವಗಳು ನಮ್ಮ ಗಮನಸೆಳೆಯುತ್ತವೆ. ಬಂಡೀಪುರ, ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟಗಳು ಹಸಿರು ಅರಣ್ಯದ ಬೆಟ್ಟಗುಡ್ಡಗಳ ಸಿರಿಸಂಪತ್ತಿನೊಂದಿಗೆ ನಮ್ಮನ್ನು ಸೆಳೆಯುತ್ತವೆ.

ಇನ್ನು ಈ ವನ್ಯಪ್ರದೇಶದಲ್ಲಿ ಕರಡಿ, ಹುಲಿ, ಚಿರತೆ, ಕಾಡುಕೋಣಗಳು, ಅಪರೂಪದ ಚಿಟ್ಟೆ, ಜಿಂಕೆ, ಸಾರಂಗಿಗಳು ಸೇರಿದಂತೆ ಹಲವು ಜೀವ ಸಂಕುಲಗಳು ಇಲ್ಲಿದ್ದು, ಇವುಗಳಿಗೆಲ್ಲ ಆಸರೆ ನೀಡಿರುವುದು ಇಲ್ಲಿನ ಅರಣ್ಯ ಪ್ರದೇಶಗಳಾಗಿವೆ. ಅದರಲ್ಲೂ ಬಂಡೀಪುರ, ಬಿಳಿಗಿರಿರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಗಳು ನಿಸರ್ಗ ಪ್ರೇಮಿಗಳಿಗೆ ಮತ್ತು ವನ್ಯಜೀವಿಗಳ ಕುರಿತಂತೆ ಅಧ್ಯಯನ ಮಾಡುವವರಿಗೆ ಸೂಕ್ತಪ್ರದೇಶವಾಗಿದೆ. ಅಧ್ಯಯನ ಮಾಡುವಾಗಲೆಲ್ಲ ಅಪರೂಪದ ಜೀವರಾಶಿಗಳು ಪತ್ತೆಯಾಗಿರುವುದು ಇಲ್ಲಿನ ವಿಶೇಷತೆಯಾಗಿದೆ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+