Get Updates
Get notified of breaking news, exclusive insights, and must-see stories!

ಯಾರ ಲೇಖನಕ್ಕೆ ಹೆಚ್ಚಾಗಿ ಬೆದರಿಕೆ ಕರೆಗಳು ಬರುತ್ತವೆಯೋ ಆತನೇ ನಿಜವಾದ ಲೇಖಕ: ಬಿಜೆಪಿಗೆ ತಿವಿದ ಕುಂ.ವೀರಭದ್ರಪ್ಪ

ಚಾಮರಾಜನಗರ, ಜೂನ್‌, 08: ಸರ್ಕಾರಗಳು ಬಂದಾಗ ಶಾಲಾ ಪಠ್ಯಗಳು ಬದಲಾಗುತ್ತದೆ. ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯವನ್ನು ಕಾಂಗ್ರೆಸ್ ಸರ್ಕಾರ ತೆಗೆಯಬೇಕು ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಚಾಮರಾಜನಗರದಲ್ಲಿ ಹೇಳಿದ್ದಾರೆ. ಹಾಗೆಯೇ ಯಾರ ಲೇಖನಕ್ಕೆ ಹೆಚ್ಚಾಗಿ ಬೆದರಿಕೆ ಕರೆಗಳು ಬರುತ್ತವೆಯೋ ಆತನೇ ನಿಜವಾದ ಲೇಖಕ ಎಂದು ಹೇಳುವ ಮೂಲಕ ಬಿಜೆಪಿಗೆ ತಿವಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯ 500 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಿದೆ. ಅವರು ರೂಪಿಸಿದ್ದ ಪಠ್ಯದಲ್ಲಿ ಮಕ್ಕಳ ಭವಿಷ್ಯ ಇರಲಿಲ್ಲ. ವೈಚಾರಿಕತೆ ಇರಲಿಲ್ಲ. ಪಠ್ಯ ರಚನೆ ಸಮಿತಿಗೆ ಅಪಕ್ವ ರೋಹಿತ್ ಚಕ್ರತೀರ್ಥ ಅಧ್ಯಕ್ಷನನ್ನಾಗಿ ಮಾಡಿದ್ದು ನಾಗೇಶ್ ಮಾಡಿದ ಮೊದಲ ತಪ್ಪು ಎಂದು ಕಿಡಿಕಾರಿದರು.

Textbook made by BJP should be removed: Kum. Veerabhadrappa

ಇದೀಗ ಹೊಸ ಸರ್ಕಾರ ಬಂದಿದ್ದು, ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನೇ ಜಾರಿ ಮಾಡಬೇಕು. ಸಾವರ್ಕರ್, ಹೆಡ್ಗೆವಾರ್ ಎಂಬ ಹುಸಿ ದೇಶಭಕ್ತರ ಪಠ್ಯವನ್ನು ತೆಗೆಯಬೇಕು. ಯಾವ ಪಠ್ಯವನ್ನು ಬೋಧೀಸಬೇಕು ಎಂದು ಸರ್ಕಾರ ಕೂಡಲೇ ಸುತ್ತೋಲೆ ಹೊರಡಿಸಿಬೇಕು ಎಂದು ಆಗ್ರಹಿಸಿದರು.

ಭಾರತೀಯತೆ, ಸಂಸ್ಕೃತಿ ಪಠ್ಯಕ್ರಮ ಎಂದು ಸುನೀಲ್ ಕುಮಾರ್‌ ಹೇಳಿರುವುದು ಅಪಕ್ವ ಹೇಳಿಕೆ. ಭಾರತೀಯತೆ ಎಂದರೆ ಎಲ್ಲರನ್ನೂ ಒಳಗೊಳ್ಳುವ ಸಮಗ್ರತೆ. ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ, ಪಾರ್ಸಿ ಎಲ್ಲರನ್ನೂ ಒಳಗೊಳ್ಳಬೇಕು. ಆರ್‌ಎಸ್‌ಎಸ್‌ನದ್ದು ಭಾರತೀಯತೆ ಅಲ್ಲ ಎಂದು ತಿರುಗೇಟು ಕೊಟ್ಟರು.

ಜಾತಿ ಗಣತಿ ವರದಿ ಬಹಿರಂಗವಾಗಬೇಕು

ಈ ಹಿಂದೆ ನಡೆಸಿದ್ದ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಗಣತಿ ವರದಿ ಬಹಿರಂಗವಾಗಬೇಕು. ಬ್ರಾಹ್ಮಣ ಸೇರಿದಂತೆ ಎಲ್ಲಾ ವರ್ಗಗಳಲ್ಲಿ ಯಾರು ಹಿಂದುಳಿದಿರುವರೋ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ, ಅನುದಾನ ಕೊಡಬೇಕು ಎಂದು ಆಗ್ರಹಿಸಿದರು.

ಬೆದರಿಕೆ ಪತ್ರ ಬರುವುದು ಇನ್ನೂ ನಿಂತಿಲ್ಲ

ಕಳೆದ 15 ದಿನಗಳ ಹಿಂದೆಯೂ ನನಗೆ ಬೆದರಿಕೆ ಪತ್ರ ಬಂದಿದೆ. ಯಾವ ಲೇಖಕನಿಗೆ ಹೆಚ್ಚು ಬೆದರಿಕೆ ಪತ್ರ ಬರುವೋದೋ ಆತನೇ ನಿಜವಾದ ಲೇಖಕ. ಲೇಖಕನಿಗೆ ಬೆದರಿಕೆ ಪತ್ರಗಳು ಪ್ರೇಮಪತ್ರಗಳು ಇದ್ದಂತೆ ಎಂದು ಕೊಂಡಿದ್ದೇನೆ. ಮೋದಿಯನ್ನು ಅವಹೇಳನ ಮಾಡುತ್ತೀರಿ, ಮುಸ್ಲಿಂರನ್ನು ಒಲೈಸುತ್ತೀರಿ ಎಂದು ಬೆದರಿಕೆ ಪತ್ರಗಳು ಬರುತ್ತಿದ್ದು, ಒಟ್ಟು ನನಗೆ 16 ಪತ್ರಗಳು ಬಂದಿದೆ ಎಂದರು.

ಬಡವರಿಗೆ ಕೊಟ್ರೆ ಇವರಪ್ಪನ ಗಂಟು ಹೋಗೋದೇನು?

ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಸಂಬಂಧ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಬಡವರ ಪರವಾದ ಯೋಜನೆಗಳು. ಬಡವರಿಗೆ 10 ಕೆ.ಜಿ. ಅಕ್ಕಿ ಕೊಟ್ಟರೇ ಇವರಪ್ಪನ ಗಂಟು ಹೋಗೋದೆನೋ.? ಬಿಜೆಪಿ ಅವರು ಲೋಕಸಭೆಯಲ್ಲಿ ಗೆಲ್ಲಬೇಕಾದರೇ ಗ್ಯಾರಂಟಿ ಯೋಜನೆ ಬೆಂಬಲಿಸಬೇಕು ಎಂದರು.

ಕುಂ.ವೀರಭದ್ರಪ್ಪ ಆಕ್ರೋಶ

ಹಾಗೆಯೇ ವಿಧವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಉದ್ಘಾಟನೆಗೆ ಕರೆಯಲಿಲ್ಲ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಚಾಮರಾಜನಗರದಲ್ಲಿ ಹೇಳಿಕೆ ಕೊಟ್ಟಿದ್ದಾರೆ.

ಚಾಮರಾಜನಗರದ ಡಾ.ರಾಜ್‌ಕುಮಾರ್‌ ರಂಗಮಂದಿರದಲ್ಲಿ ಸಾಹಿತಿ ಕೆ.ಶ್ರೀದರ್ ಅವರ ಅವಳಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸಂಸತ್ ಉದ್ಘಾಟನೆ ದೇಶದ ಶಕ್ತಿ ಕೇಂದ್ರ, ಅದನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕಿತ್ತು. ಆದರೆ, ರಾಷ್ಟ್ರಪತಿ ಹಿಂದುಳಿದ ಜಾತಿಯವರಾದ್ದರಿಂದ, ಮತ್ತು ವಿಧವೆಯಾದ್ದರಿಂದ ಶುಭ ಕಾರ್ಯಕ್ಕೆ ಅಮಂಗಲವೆಂದು ಅವರನ್ನು ಕಾರ್ಯಕ್ರಮದಿಂದ ಪ್ರಧಾನಿ ಹೊರಗಿಟ್ಟರು. ಇದನ್ನು ಯಾರೂ ಪ್ರಶ್ನೆಯನ್ನೇ ಮಾಡಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಕನ್ನಡ ಸಾಹಿತ್ಯ ಪ್ರಶ್ನಿಸುವ ಗುಣ ಹೊಂದಿದೆ. ನಮ್ಮಲ್ಲಿ ಎರಡು ರೀತಿಯ ಲೇಖಕರಿದ್ದಾರೆ. ಒಬ್ಬರು ಉಪದ್ರವಿ ಲೇಖಕರು, ಮತ್ತೊಬ್ಬರು ನಿರುಪದ್ರವಿ ಲೇಖಕರು. ಸರ್ಕಾರವನ್ನು ಟೀಕಿಸುವರು, ಸರ್ಕಾರದ ತಪ್ಪನ್ನು ಪ್ರಶ್ನೆ ಮಾಡುವವರು ಉಪದ್ರವಿ ಸಾಹಿತಿಗಳು. ನಮಗೆ ಈಗ ಉಪದ್ರವಿ ಸಾಹಿತಿಗಳ ಅಗತ್ಯವಿದೆ. ಕೆಲವರು ಇರುತ್ತಾರೆ 500 ಕೊಟ್ಟರೆ ಇತ್ತ ಕಡೆ, ಜಾಸ್ತಿ ಕೊಟ್ಟರೇ ಅತ್ತ ಕಡೆ ಎಂಬುತವರು ಎಂದು ಅಸಮಾಧನ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಳಸಮುದಾಯದ ಲೇಖಕರು ಹೆಚ್ಚು ಬರಬೇಕು. ಅಂದ-ಚೆಂದದ ಭಾಷೆಯಲ್ಲಿ ಬರೆಯುವವರಿಗಿಂತ ದೇಸಿ ಸಾಹಿತಿಗಳು ಬರಬೇಕ. ಒಂದು ಗಾದೆ ಮಾತಿದೆ 8 ಹೋಳಿಗೆ ತಿನ್ನುವ ಬದಲು 1 ಎಲುಬು ಕಡಿ ಅಂತಾ. ಆ ರೀತಿ ಎಲುಬು ಎಂದರೆ ತಳ ಸಮುದಾಯಯವರ ಕೃತಿ, ಹೋಳಿಗೆ ಎಂದರೆ ಪರಿಶುದ್ಧ ಭಾಷೆಯಲ್ಲಿ ಬರೆಯುವವರು ಎಂದರು.

ಬಿಜೆಪಿ ವಿರುದ್ಧ ಆಕ್ರೋಶ

ಮೊನ್ನೆ ಚುನಾವಣೆಯಲ್ಲಿ ಯಾರನ್ನೂ ಸೋಲಿಸಬೇಕೆಂದುಕೊಂಡಿದ್ದೆವೋ ಅವರು ಸೋತಿದ್ದಾರೆ. ಯಾರು ಗೆಲ್ಲಬೇಕಿತ್ತೋ ಅವರಿಗೆ 130ಕ್ಕೂ ಅಧಿಕ ಸ್ಥಾನ ಕೊಟ್ಟು ಜನರು ಗೆಲ್ಲಿಸಿದ್ದಾರೆ. ದೆಹಲಿಯಿಂದ ಬಂದರು, ನಟ-ನಟಿಯರನ್ನು ಕರೆತಂದರೂ ಜನರು ಯಾವುದೇ ಮೋಡಿಗೆ ಒಳಗಾಗಲಿಲ್ಲ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

ಹಣ ಪಡೆದ ಜನರು ಮೋಸ ಮಾಡಿದರು ಎಂದು ಕೆಲವರು ಹೇಳುತ್ತಿದ್ದರು. ಅವರು ಅಧಿಕಾರ ಹಿಡಿದದ್ದೇ ಮೋಸದಿಂದ. ಆದ್ದರಿಂದ ಜನರು ಅವರಿಗೆ ಮೋಸ ಮಾಡಲಿಲ್ಲ. ಸಾಮಾಜಿಕ ಮೌಲ್ಯ ತೋರಿದರೂ ಗೆಲ್ಲಿಸುವ ಜನರಿಗೆ ಸೋಲಿಸುವುದೂ ಗೊತ್ತು ಎಂಬುದನ್ನು ಈ ಬಾರಿ ತೋರಿಸಿಕೊಟ್ಟರು ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+