ಮತ್ತೆ ಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ ಸಿದ್ದರಾಮಯ್ಯ

Recommended Video

      ಬಿಎಸ್ ವೈ ನೋಡಿದ್ರೆ ಸಿದ್ದುಗೆ ಅಯ್ಯೋ ಪಾಪ ಅನಿಸುತ್ತಂತೆ | Oneindia kannada

      ಚಾಮರಾಜನಗರ, ಫೆಬ್ರವರಿ 6: 'ನಾನು ಮತ್ತೆ ಮುಖ್ಯಮಂತ್ರಿ ಆದರೆ ಉಪ್ಪಾರ ಜನಾಂಗವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುತ್ತೇನೆ' ಎಂದು ಮಾಜ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

      ಚಾಮರಾಜನಗರ ತಾಲ್ಲೂಕಿನ ನಲ್ಲೂರು ಮೋಳೆ ಗ್ರಾಮದಲ್ಲಿ ಗುರುವಾರ ಮಲ್ಲಿಗಮ್ಮ ದೇವಾಲಯ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮತ್ತೆ ಮುಖ್ಯಮಂತ್ರಿಯಾಗುವ ಬಯಕೆ ವ್ಯಕ್ತಪಡಿಸಿದರು.

      'ಮುಂದಿನ ದಿನಗಳಲ್ಲಿ ನಿಮ್ಮ ಸಮುದಾಯಕ್ಕೆ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ' ಎಂದು ಉಪ್ಪಾರ ಸಮುದಾಯಕ್ಕೆ ಅವರು ಭರವಸೆ ನೀಡಿದರು.

      ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಹಣಕಾಸಿನ ಕೊರತೆ ಎದುರಾಗಿದೆ. ನಾನು ಸಿಎಂ ಮುಖ್ಯಮಂತ್ರಿಯಾಗಿದ್ದಾಗ ಹಣಕಾಸಿನ ಸಮಸ್ಯೆ ಇರಲಿಲ್ಲ ಎಂದರು.

      ರಾಜ್ಯಕ್ಕೆ ತೆರಿಗೆ ಪಾಲು ನೀಡಿಲ್ಲ

      ರಾಜ್ಯಕ್ಕೆ ತೆರಿಗೆ ಪಾಲು ನೀಡಿಲ್ಲ

      'ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲನ್ನು ನೀಡಿಲ್ಲ. ಇದರಿಂದ ಹಣಕಾಸು ಇಲ್ಲದೆ ಎಲ್ಲ ಕೆಲಸಗಳೂ ಸ್ಥಗಿತಗೊಂಡಿವೆ. ಹೀಗಾಗಿ ಯಡಿಯೂರಪ್ಪ ಅವರ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿಕೊಂಡು ತಿರುಗಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚು ಮಾತನಾಡುತ್ತೇನೆ' ಎಂದು ಹೇಳಿದರು.

      ವಿಶ್ವನಾಥ್ ದುರಾಸೆಗೆ ತಕ್ಕ ಶಾಸ್ತಿ

      ವಿಶ್ವನಾಥ್ ದುರಾಸೆಗೆ ತಕ್ಕ ಶಾಸ್ತಿ

      ಎಚ್. ವಿಶ್ವನಾಥ್ ಅವರನ್ನು ಸಂಪುಟಕ್ಕೆ ಸೇರಿಸಿಲ್ಲ. ಅವರನ್ನು ಸೋಲಿಸುವ ಮೂಲಕ ಜನರು ಅವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಅತಯಾದ ದುರಾಸೆ ಹೊಂದಿದ್ದರೆ ಹೀಗೆಯೇ ನಿರಾಸೆ ಖಚಿತ. ಪಕ್ಷ ದ್ರೋಹ ಮಾಡಿದವರಿಗೆ ಜನರು ಸರಿಯಾದ ತೀರ್ಮಾನ ಕೊಟ್ಟಿದ್ದಾರೆ ಎಂದು ವಿಶ್ವನಾಥ್ ವಿರುದ್ಧ ಹರಿಹಾಯ್ದರು.

      ಸಿಎಂ ಅಸಹಾಯಕತೆ ಅಯ್ಯೋ ಪಾಪ ಎನಿಸುತ್ತೆ

      ಸಿಎಂ ಅಸಹಾಯಕತೆ ಅಯ್ಯೋ ಪಾಪ ಎನಿಸುತ್ತೆ

      ಸಂಪುಟ ವಿಸ್ತರಣೆ ಬಗ್ಗೆ ಸಂತೋಷ ಪಡುವುದೇನಿಲ್ಲ. ತಾಂತ್ರಿಕವಾಗಿ ಚುನಾವಣೆಯಲ್ಲಿ ಗೆದ್ದು ಶಾಸಕರಾದರೂ ನೈತಿಕವಾಗಿ ಸೋತಿರುವ ಅವರು ಈಗಲೂ ಅನರ್ಹರೇ ಆಗಿದ್ದಾರೆ. ನೂತನ ಸಚಿವರಿಗೆ ಒಳ್ಳೆಯದಾಗಲಿ. ಮುಖ್ಯಮಂತ್ರಿಯವರ ಕೈಕಾಲನ್ನು ಹೈಕಮಾಂಡ್ ಕಟ್ಟಿಹಾಕಿ ತಲೆಗೆ ಮಾತ್ರ ಕಿರೀಟ ಇಟ್ಟು ಕೂರಿಸಿದ್ದಾರೆ. ಅವರ ಅಸಹಾಯಕತೆಯನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೆ. ಮಾಡಿದುಣ್ಣೋ ಮಹರಾಯ ಎಂದು ಸಿದ್ದರಾಮಯ್ಯ ಟ್ವೀಟರ್‌ನಲ್ಲಿ ಬಿಜೆಪಿ ಸರ್ಕಾರವನ್ನು ವ್ಯಂಗ್ಯವಾಡಿದ್ದಾರೆ.

      ಎಸ್‌ಟಿ ಸೋಮಶೇಖರ್ ತೀಕ್ಷ್ಣ ಉತ್ತರ

      ಎಸ್‌ಟಿ ಸೋಮಶೇಖರ್ ತೀಕ್ಷ್ಣ ಉತ್ತರ

      ಸಿದ್ದರಾಮಯ್ಯ ಹೇಳಿಕೆಗೆ ಖಾರವಾದ ಉತ್ತರ ನೀಡಿರುವ ನೂತನ ಸಚಿವ ಎಸ್‌ಟಿ ಸೋಮಶೇಖರ್, ಪಕ್ಷದಲ್ಲಿ ಅಸರ್ಮಾಧಾನ ಇದ್ದರೆ ಹೈಕಮಾಂಡ್ ಸರಿಪಡಿಸುತ್ತದೆ. ಯಡಿಯೂರಪ್ಪ ಬಹಳ ಸ್ಟ್ರಾಂಗ್ ಮುಖ್ಯಮಂತ್ರಿ. ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ. ಹೀಗಾಗಿ ಯಾವುದೇ ಸಮಸ್ಯೆಗಳಾಗುವುದಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ಶಾಸಕರಲ್ಲಿ ಅಸಮಾಧಾನವಿತ್ತು. ಕುಮಾರಸ್ವಾಮಿ ಆದಾಗಲೂ ಇತ್ತು. ನಾವು ಚುನಾವಣೆಯಲ್ಲಿ ನಿಂತೂ ಆಗಿದೆ ಗೆದ್ದೂ ಆಗಿದೆ. ಈಗ ನಮ್ಮನ್ನು ಅನರ್ಹರು ಎನ್ನಲು ಸಿದ್ದರಾಮಯ್ಯ ಯಾರು? ಸುಪ್ರೀಂಕೋರ್ಟ್ ಹೇಳಿದ ಮೇಲೆ ಅವರದ್ದೇನು? ನಾವೀಗ ಬಿಜೆಪಿ ಸಚಿವರು. ನಾವು ಸಚಿರಾಗಿರುವುದರಿಂದ ಸಿದ್ದರಾಮಯ್ಯ ಅವರಿಗೇಕೆ ಖುಷಯಾಬೇಕು? ಅವರಿಂದ ನಾವು ಸಚಿವರಾಗಿಲ್ಲವಲ್ಲ ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+