Ram Mandir inauguration: ಚಾಮರಾಜನಗರದೆಲ್ಲೆಡೆ ಸಂಭ್ರಮಾಚರಣೆ ಬಲು ಜೋರು
ಚಾಮರಾಜನಗರ, ಜನವರಿ, 22: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನೆಲೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ದೇಗುಲಗಳ ಆವರಣ ಕೇಸರಿ ಧ್ವಜಗಳಿಂದ ಅಲಂಕೃತಗೊಂಡಿವೆ.
ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವ ಶುಭ ದಿನದಲ್ಲಿ ಚಾಮರಾಜನಗರ ರಾಮ ಭಕ್ತರ ಸಂಭ್ರಮ ಜೋರಾಗಿದೆ. ಅಲ್ಲದೆ ವಿಶೇಷ ಪೂಜೆ, ಹೋಮ ಹವನಗಳು ಕೂಡ ನಡೆಯುತ್ತಿವೆ.

ಚಾಮರಾಜನಗರದ ಶಂಕರಪುರ ಬಡಾವಣೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಹಬ್ಬದ ಸಡಗರ ಸೃಷ್ಟಿಯಾಗಿದ್ದು, ಶ್ರೀ ರಾಮತಾರಕ ಮಹಾ ಮಂತ್ರ ಜಪ ಸಾಂಗತಾ ಯಜ್ಞಯನ್ನು ಶ್ರೀ ಚಂದ್ರಶೇಖರ ಭಾರತೀ ಸೇವಾ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿದೆ.
ನೂರಾರು ಮಂದಿ ರಾಮ ಭಕ್ತರು ಈ ಯಜ್ಞದಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ ರಾಮಮಂದಿರದಲ್ಲಿ ಅಯೋಧ್ಯೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಎಲ್‌ಸಿಡಿ ಸ್ಕ್ರೀನ್ ಮೂಲಕ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.
ಚಾಮರಾಜೇಶ್ವರ ದೇಗುಲ ಮುಂಭಾಗ ಇಂದು ರಾಮ ಮಂದಿರ, ರಾಮನ ಚಿತ್ರ ಬಿಡುಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ನೂರಾರು ಚಿಣ್ಣರು ತಮ್ಮ ಕಲ್ಪನೆಯ ಬಾಲರಾಮ, ಶ್ರೀರಾಮಚಂದ್ರ ಹಾಗೂ ರಾಮ ಮಂದಿರದ ಚಿತ್ರಗಳನ್ನು ಬಿಡಿಸಿದ್ದಾರೆ.
5 ತಿಂಗಳ ಮಗುವಿಗೆ ನಾಮಕರಣ
ಸೋಮವಾರವಾದ ಇಂದು (ಜನವರಿ 22) ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಇಡೀ ದೇಶಾದ್ಯಂತ ಸಂಭ್ರಮಾಚರಣೆಯ ಮುಗಿಲು ಮುಟ್ಟಿದೆ. ವಿಶೇಷ ಪೂಜೆ, ಭಜನೆ, ಮಂತ್ರ ಪಠಣ, ಪ್ರಸಾದ ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳು ನಡೆಯುತ್ತಿವೆ. ಅದರಂತೆಯೇ ಕೋಟೆ ನಾಡು ಚಿತ್ರದುರ್ಗದಲ್ಲಿಲೂ ವಿಶೇಷ ಕಾರ್ಯಕ್ರಮವೊಂದು ನಡೆಯಿತು. ಶ್ರೀ ರಾಮಮಂದಿರ ಉದ್ಘಾಟನೆ ಅಂಗವಾಗಿ ಮಗುವಿಗೆ ಇಂದೇ ನಾಮಕರಣ ಮಾಡಲಾಗಿದೆ.
ಹೌದು ಚಿತ್ರದುರ್ಗ ಗಾಂಧಿನಗರದ ಸಾಗರ್ ಅವರು ಭಾವನಾ ಎಂಬುವರೊಂದಿಗೆ ಮದುವೆಯಾಗಿದೆ. ಮದುವೆಯ ನಂತರ ಭಾವನಾ ಅವರು 2023, ಸೆಪ್ಟೆಂಬರ್ 22ರಂದು ಗುಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಂದಿಗೆ ಮಗುವಿಗೆ 5 ತಿಂಗಳು ತುಂಬಿದ್ದು, ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಮಗುವಿಗೆ "ಶ್ರೀರಾಮ್" ಎಂದು ನಾಮಕರಣ ಮಾಡಿದ್ದಾರೆ.
ತಂದೆ ಸಾಗರ್ ಮೆಡಿಕಲ್ ರೆಪ್ರೆಸೆಂಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪತ್ನಿ ಭಾವನಾ ಗೃಹಿಣಿಯಾಗಿದ್ದಾರೆ ಎನ್ನಲಾಗಿದೆ. ಇವರಿಬ್ಬರೂ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತನ್ನ ಪುತ್ರನಿಗೆ ಅಯೋಧ್ಯೆ ರಾಮಮಂದಿರ ಪೂಜೆ ಸಮಯದಲ್ಲಿ ಮಗುವಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇನ್ನು ಈ ಬಗ್ಗೆ ಒನ್ ಇಂಡಿಯಾ ನ್ಯೂಸ್ ಜೊತೆ ಮಾತನಾಡಿ ಖುಷಿ ಹಂಚಿಕೊಂಡಿರುವ ತಾಯಿ ಭವನಾ "ಇಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇದು ಒಳ್ಳೆಯ ದಿನ ಆಗಿರುವುದರಿಂದ ಕುಟುಂಬದ ಸದಸ್ಯರು ಸೇರೀ ಮಗುವಿನ ಹೆಸರಿನ ಬಗ್ಗೆ ತಿರ್ಮಾನ ಮಾಡಲಾಯಿತು", ಎಂದರು.
ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಜರುಗಿದ ಸಮಯದಲ್ಲಿ ಮಗನಿಗೆ ಶ್ರೀರಾಮ್ ಎಂದು ನಾಮಕರಣ ಮಾಡಲಾಯಿತು. ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆಸಿ ನಾಮಕರಣ ಮಾಡಲಾಯಿತು. ಇದರಿಂದ ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.












Click it and Unblock the Notifications