ಚಾರ್ ದಾಮ್ ಯಾತ್ರೆಗೆ ತೆರಳಿದ್ದ ಕರ್ನಾಟಕದ ಯಾತ್ರಿ ಸಾವು
ಬೆಂಗಳೂರು, ಜೂನ್ 06: ಅಮರನಾಥದ ಚಾರ್ ದಾಮ್ ಯಾತ್ರೆಗೆ ತೆರಳಿದ್ದ ಕರ್ನಾಟಕದ ಯಾತ್ರಿ ಸಿದ್ದಯ್ಯ ಸಾವನ್ನಪ್ಪಿದ್ದಾರೆ.
ಚಾಮರಾಜನಗರದ ಗುಂಡ್ಲುಪೇಟೆ ನಿವಾಸಿಯಾಗಿರುವ ಸಿದ್ದಯ್ಯ(58) ಮೃತರು, ಅವರು ಅಲ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹರಿದ್ವಾರದಲ್ಲಿ ರಕ್ತವಾಂತಿ ಮಾಡಿಕೊಂಡಿದ್ದರು. ಮೀರಾಟ್‌ನ ಜಗದಾಂಬಿಕ ಆಸ್ಪತ್ರೆಗೆ ಮೊದಲು ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಗಿತ್ತು.

ಸೋಮವಾರ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಹಿತಿ ತಿಳಿದ ಕರ್ನಾಟಕ ಭವನ ಆಯುಕ್ತ ತಕ್ಷಣ ಸ್ಪಂದಿಸಿದ್ದರು. ಮಂಗಳವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬುಧವಾರ ಬೆಳಗ್ಗೆ ಬೆಂಗಳೂರಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗಿದೆ.












Click it and Unblock the Notifications