ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ತಿಂಗಳಲ್ಲಿ ಮಲೆ ಮಹದೇಶ್ವರನ ಹುಂಡಿಯಲ್ಲಿ ಸಂಗ್ರಹವಾದ ಹಣವೆಷ್ಟು ಗೊತ್ತಾ?

|
Google Oneindia Kannada News

ಚಾಮರಾಜನಗರ, ಡಿಸೆಂಬರ್ 30: ಜಿಲ್ಲೆಯ ಹನೂರು ತಾಲೂಕಿನ ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದ ಹುಂಡಿಗೆ ಕೋಟಿ ರೂಪಾಯಿ ಕಾಣಿಕೆ ಹಣ ಬೀಳುತ್ತಿದ್ದು, ಕಳೆದ ಕೆಲವು ತಿಂಗಳಿನಿಂದ ಕೋಟಿಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗುತ್ತಿರುವುದು ಗಮನಾರ್ಹವಾಗಿದೆ.

ಕಳೆದೊಂದು ತಿಂಗಳಲ್ಲಿ 1 ಕೋಟಿ 35 ಲಕ್ಷದ 61 ಸಾವಿರದ 178 ರೂಪಾಯಿಗಳು ಕಾಣಿಕೆ ಹಣ ಸಂಗ್ರಹವಾಗಿದ್ದು, ಕೋಟಿ ಒಡೆಯನಾಗಿಯೇ ಮಲೆಮಹದೇಶ್ವರ ಮುಂದುವರೆಯುತ್ತಿದ್ದಾನೆ. ಡಿಸೆಂಬರ್ ತಿಂಗಳಲ್ಲಿ ದೇಶದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಆಗಮಿಸಿ ಮಹದೇಶ್ವರ ದರ್ಶನ ಪಡೆದ ಬಳಿಕ ಕಾಣಿಕೆ ರೂಪವಾಗಿ 1 ಕೋಟಿ 35 ಲಕ್ಷದ 61 ಸಾವಿರದ 178 ರೂಪಾಯಿಗಳು ಹಾಗೂ 38 ಗ್ರಾಂ ಚಿನ್ನ ಹಾಗೂ 1 ಕೆಜಿ 225 ಗ್ರಾಂ ಬೆಳ್ಳಿ ಪದಾರ್ಥಗಳು ಕಾಣಿಕೆಯಾಗಿ ನೀಡಿದ್ದಾರೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ತಿರುಪತಿ ಮಾದರಿಯಲ್ಲೇ ಮೆಟ್ಟಿಲು: ಸಿಎಂ ಭರವಸೆಮಲೆ ಮಹದೇಶ್ವರ ಬೆಟ್ಟಕ್ಕೆ ತಿರುಪತಿ ಮಾದರಿಯಲ್ಲೇ ಮೆಟ್ಟಿಲು: ಸಿಎಂ ಭರವಸೆ

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಭಾರಿ ಬಿಗಿ ಭದ್ರತೆಯೊಂದಿಗೆ ಇತ್ತೀಚೆಗೆ ಸತತ 13 ಗಂಟೆಗಳ ಕಾಲ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ಮಲೆ ಮಹದೇಶ್ವರ ದೇವಸ್ಥಾನಗಳ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ. ಗಾಯತ್ರಿ ನೇತೃತ್ವದಲ್ಲಿ ಎಣಿಕೆ ಮಾಡಲಾಗಿದೆ.

More than a crore of gifts have been collected in Male Mahadeshwara Hundi

ಚಾಮರಾಜನಗರ: ಮಲೆ ಮಹದೇಶ್ವರನೀಗ ಕೋಟಿ ಒಡೆಯ!ಚಾಮರಾಜನಗರ: ಮಲೆ ಮಹದೇಶ್ವರನೀಗ ಕೋಟಿ ಒಡೆಯ!

ಈ ವೇಳೆ ಸಾಲೂರು ಬೃಹನ್ಮಠದ ಶ್ರೀ ಪಟ್ಟದ ಗುರುಸ್ವಾಮಿ, ಉಪ ಕಾರ್ಯದರ್ಶಿ ರಾಜಶೇಖರಮೂರ್ತಿ, ಅಧೀಕ್ಷಕ ಎಂ.ಬಸವರಾಜು, ಲೆಕ್ಕಾಧೀಕ್ಷಕ ಮಹದೇವಸ್ವಾಮಿ, ಆರೋಗ್ಯ ನಿರೀಕ್ಷಕ ಶ್ರೀಕಾಂತ್ ವಿಭೂತಿ ಹಾಗೂ ದೇವಸ್ಥಾನದ ಎಲ್ಲಾ ನೌಕರರುಗಳು, ಚಾಮರಾಜನಗರ ಜಿಲ್ಲಾಧಿಕಾರಿಯವರ ಕಚೆರಿಯ ಪ್ರಥಮ ದರ್ಜೆ ಸಹಾಯಕ ಮೋಹನ್ ಕುಮಾರ್ ಮತ್ತು ಮಹದೇಶ್ವರಬೆಟ್ಟ ಆರಕ್ಷಕ ಸಿಬ್ಬಂದಿ, ಎಸ್‌ಬಿಎಂ ವ್ಯವಸ್ಥಾಪಕರಾದ ಸೆಂದಿಲ್ ನಾಥನ್ ಮತ್ತು ಸಿಬ್ಬಂದಿ ಇದ್ದರು.

English summary
Over the past few months, more than a crore of gifts have been collected in Male Mahadeshwara Hundi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X