• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದೇ ತಿಂಗಳಲ್ಲಿ ಕೋಟಿ ದಾಟಿದೆ ಮಲೆಮಹದೇಶ್ವರನ ಆದಾಯ

|

ಚಾಮರಾಜನಗರ, ಆಗಸ್ಟ್ 28: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ದೇವಾಲಯದ ಹುಂಡಿಯಲ್ಲಿ ಒಂದು ತಿಂಗಳ ಮೊತ್ತ ಒಂದು ಕೋಟಿ ದಾಟಿದ್ದು, ಮಾದೇಶ್ವರ ಕೋಟ್ಯಾಧೀಶನಾಗಿದ್ದಾನೆ.

ರಾಜ್ಯದಲ್ಲೇ ಅತ್ಯಧಿಕ ಆದಾಯ ತರುವ ದೇವಾಲಯ ಮಲೆ ಮಹದೇಶ್ವರ

ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿಯಲ್ಲಿ ಕಳೆದೊಂದು ತಿಂಗಳಲ್ಲಿ 1,27,87341 ರೂಪಾಯಿ ಸಂಗ್ರಹವಾಗಿದೆ. ಇದಲ್ಲದೇ 28 ಗ್ರಾಂ ಚಿನ್ನ, 620 ಗ್ರಾಂ ಬೆಳ್ಳಿ ವಸ್ತುಗಳು ಶೇಖರಣೆಯಾಗಿವೆ.

ಹುಂಡಿ ಎಣಿಕೆ ಕಾರ್ಯ ಸಾಲೂರು ಮಠದ ಹಿರಿಯ ಶ್ರೀ ಮತ್ತು ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದಿದೆ. ಭೀಮನ ಅಮಾವಾಸ್ಯೆ ಬಿಟ್ಟರೆ ಬೇರೆ ಯಾವುದೇ ವಿಶೇಷ ಕಾರ್ಯಕ್ರಮಗಳು ಬೆಟ್ಟದಲ್ಲಿ ನಡೆದಿಲ್ಲದಿದ್ದರೂ ಒಂದು ಕಾಲು ಕೋಟಿ ರೂಪಾಯಿ ಸಂಗ್ರಹವಾಗಿರುವುದು ಶ್ರೀಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.

English summary
Rs 1.2 crore hundi donations collected in Sri Male Mahadeshwara Swamy Temple Chamarajanagar, during the time of July –August 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X