Lok sabha election: ಚಾಮರಾಜನಗರದಿಂದ ಬಿಜೆಪಿ ಟಿಕೆಟ್‌ಗಾಗಿ ವಿ.ಶ್ರೀನಿವಾಸ ಪ್ರಸಾದ್ ಅಳಿಯಂದಿರ ಪಟ್ಟು, ಹಾಗಾದ್ರೆ "ಕೈ"ನಿಂದ?
ಚಾಮರಾಜನಗರ, ಜನವರಿ, 10: ಲೋಕಸಭಾ ಚುನಾವಣೆ ಪ್ರಕ್ರಿಯೆ ಗರಿಗೆದರುತ್ತಿದ್ದು, ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದೆ. ಈ ನಡುವೆ ಅಧಿಕಾರದ ಮುಂದುವರಿಕೆಗಾಗಿ ಕುಟುಂಬ ರಾಜಕಾರಣವೂ ಮುನ್ನೆಲೆಗೆ ಬಂದಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಸಾಲು ಬೆಳೆಯುತ್ತಲೇ ಇದ್ದು, ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ 8-10 ಮಂದಿ ಆಕಾಂಕ್ಷಿಗಳಿದ್ದಾರೆ. ಇನ್ನು ಮತ್ತೊಂದೆಡೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಪುತ್ರ ಸುನೀಲ್ ಬೋಸ್ ಅವರು ಚಾಮರಾಜನಗರ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದು, ಈಗಾಗಲೇ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ.

ತಾವು ಈ ಬಾರಿ ಆಕಾಂಕ್ಷಿಯಲ್ಲ ಎಂದು ಮಹಾದೇವಪ್ಪ ಹೇಳುತ್ತಿದ್ದರೂ ಅವರ ಹೆಸರು ಕೂಡ ಪ್ರಬಲವಾಗಿ ಕೇಳಿ ಬರುತ್ತಿದೆ. ಈ ನಡುವೆ ಪುತ್ರ ಸುನೀಲ್ ಬೋಸ್ ಶತಾಯಗತಾಯ ಟಿಕೆಟ್ ಪಡೆಯಲೇಬೇಕು ಎಂದು ಭರ್ಜರಿ ಲಾಬಿ ನಡೆಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿ.ನರಸೀಪುರದಿಂದ ಟಿಕೆಟ್ ಆಕಾಂಕ್ಷಿಯಾಗಿ ಸುನಿಲ್ ಬೋಸ್ ಅರ್ಜಿ ಹಾಕಿದ್ದರು. ಬದಲಾದ ಸನ್ನಿವೇಶದಲ್ಲಿ ತಂದೆ ಮಹಾದೇವಪ್ಪಗೆ ಹೈಕಮಾಂಡ್ ಟಿ.ನರಸಿಪುರದಿಂದ ಟಿಕೆಟ್ ಕೊಟ್ಟಿತ್ತು.
ರೇಸ್‌ನಲ್ಲಿ ಸಂಸದರ ಅಳಿಯಂದಿರು: ಹಾಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಇಬ್ಬರು ಅಳಿಯಂದಿರಾದ ಹರ್ಷವರ್ಧನ್ ಮತ್ತು ಡಾ.ಮೋಹನ್ ಕುಮಾರ್ ಕೂಟ ಟಿಕೆಟ್ ರೇಸ್‌ನಲ್ಲಿದ್ದಾರೆ. ಈಗಾಗಲೇ ಎರಡು ತಿಂಗಳ ಹಿಂದೆ ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟಿರುವ ಡಾ.ಮೋಹನ್ ಕುಮಾರ್ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಮಾಜಿ ಶಾಸಕ ಹರ್ಷವರ್ಧನ್ ಕೂಡ ಆಕಾಂಕ್ಷಿಯಾಗಿದ್ದು, ಪಕ್ಷದ ತೀರ್ಮಾನಕ್ಕೆ ಬದ್ಧ ಎನ್ನುತ್ತಿದ್ದಾರೆ.
ಮಾವ ಹಾಗೂ ಸಂಸದ ಶ್ರೀನಿವಾಸ ಪ್ರಸಾದ್ ಮುಂದಿನ ಮಾರ್ಚ್‌ನಲ್ಲಿ ರಾಜಕೀಯ ನಿವೃತ್ತಿಯಾಗುವೆ ಎಂದು ಘೋಷಣೆ ಮಾಡಿದ್ದು, ಮಾವನ ನಾಮಬಲ ಯಾರಿಗೆ? ಎಂಬುದು ಇನ್ನೂ ನಿಗೂಢವಾಗಿದೆ.












Click it and Unblock the Notifications