ಟ್ಯಾಂಕರ್ ಮಗುಚಿ ಲಕ್ಷಾಂತರ ರುಪಾಯಿಯ ಹಾಲು ಬಾಳೆ ತೋಟದ ಪಾಲು
ಚಾಮರಾಜನಗರ, ಅಕ್ಟೋಬರ್ 10: ಗ್ರಾಮೀಣ ಭಾಗಗಳಿಂದ ಹಾಲನ್ನು ಸಂಗ್ರಹಿಸಿ ಸಾಗಿಸುತ್ತಿದ್ದ ಟ್ಯಾಂಕರ್ ವೊಂದು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಬಾಳೆ ತೋಟಕ್ಕೆ ಮಗುಚಿದ ಪರಿಣಾಮ ಹಾಲು ಹೊಳೆಯಾಗಿ ಹರಿದ ಘಟನೆ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಗತ್ತಾಪುರ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಪ್ರತಿ ದಿನವೂ ಹನೂರು ತಾಲೂಕಿನ ಎಲ್ಲೇಮಾಳ ವ್ಯಾಪ್ತಿಯ ಗ್ರಾಮಗಳ ಹಾಲು ಉತ್ಪಾದಕರ ಸಂಘಗಳು ಸಂಗ್ರಹಿಸುವ ಹಾಲನ್ನು ಟ್ಯಾಂಕರ್ ನಲ್ಲಿ ತುಂಬಿಸಿಕೊಂಡು ಹೋಗುವುದು ಮಾಮೂಲಿಯಾಗಿದ್ದು, ಅದರಂತೆ ಮಂಗಳವಾರವೂ ಹಾಲನ್ನು ತುಂಬಿಸಿಕೊಂಡು ಹೋಗಲಾಗುತ್ತಿತ್ತು.

ಚಿಗತ್ತಾಪುರ ಗ್ರಾಮದ ಬಳಿ ತೆರಳುತ್ತಿದ್ದಾಗ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ರಸ್ತೆಯಿಂದ ಬಾಳೆತೋಟಕ್ಕೆ ಮಗುಚಿತು. ಈ ಘಟನೆಯಲ್ಲಿ ಚಾಲಕ ಅದೃಷ್ಟವಶಾತ್ ಪಾರಾಗಿದ್ದಾರೆ. ಟ್ಯಾಂಕರ್ ನಲ್ಲಿ ಸಂಗ್ರಹವಾಗಿದ್ದ ಲಕ್ಷಾಂತರ ರುಪಾಯಿ ಮೌಲ್ಯದಷ್ಟು ಹಾಲು ಹೊಳೆಯಂತೆ ಬಾಳೆ ತೋಟದ ತುಂಬ ಹರಿದಿದೆ. ಸ್ಥಳಕ್ಕೆ ರಾಮಾಪುರ ಠಾಣೆ ಪೊಲೀಸರು ತೆರಳಿದ್ದಾರೆ.













Click it and Unblock the Notifications