ಕೊಳ್ಳೇಗಾಲ: ಯಾತ್ರೆಗೆ ಜಿ.ಎನ್‌‌.ನಂಜುಂಡಸ್ವಾಮಿ ಗೈರಾದ ಬಗ್ಗೆ ಶೋಭಾ ಕರಂದ್ಲಾಜೆ ಕೊಟ್ಟ ಸ್ಪಷ್ಟನೆ ಏನು?

ಕೊಳ್ಳೇಗಾಲದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಜಿ.ಎನ್‌‌.ನಂಜುಂಡಸ್ವಾಮಿ ಗೈರಾಗಿದ್ದು, ಈ ಬಗ್ಗೆ ಶೋಭಾ ಕರಂದ್ಲಾಜೆ ಕೊಟ್ಟ ಸ್ಪಷ್ಟನೆ ಏನು?, ಇಲ್ಲಿದೆ ವಿವರಪಾರ್ಟಿ ಅನ್ನುವುದು ಸಮುದ್ರ ಇದ್ದಂತೆ. ಇಲ್ಲಿ ಎಲ್ಲರೂ ಬೇಕು, ನಮ್ಮ ಜೊತೆ ಬಂದರೆ ಜೊತೆಯಾಗಿ ಹೋಗುತ

ಚಾಮರಾಜನಗರ, ಮಾರ್ಚ್‌, 02: ಪಾರ್ಟಿ ಅನ್ನುವುದು ಸಮುದ್ರ ಇದ್ದಂತೆ. ಇಲ್ಲಿ ಎಲ್ಲರೂ ಬೇಕು, ನಮ್ಮ ಜೊತೆ ಬಂದರೆ ಜೊತೆಯಾಗಿ ಹೋಗುತ್ತೇವೆ. ಬರದಿದ್ದವರನ್ನು ಬಿಟ್ಟು ಹೋಗುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಅವರು ಬೇಕು, ಇವರು ಬೇಕು ಅಂಥಲ್ಲಾ, ಎಲ್ಲರೂ ಬೇಕು. ಜೊತೆಯಾಗಿ ಬಂದರೆ ಜೊತೆಯಾಗಿ ಹೋಗುತ್ತೇವೆ. ಬರಲಿಲ್ಲವೆಂದರೇ ಬಿಟ್ಟು ಹೋಗುತ್ತೇವೆ ಎಂದು ಕೊಳ್ಳೇಗಾಲದಲ್ಲಿ ಟಿಕೆಟ್ ಆಕಾಂಕ್ಷಿ ಜಿ.ಎನ್‌‌.ನಂಜುಂಡಸ್ವಾಮಿ ಗೈರಾದ ಬಗ್ಗೆ ಕೇಳಿದ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟರು.

Kollegala: Shobha Karandlaje clarification about GN Nanjundaswamy absent for Vijaya Sankalpa Yatra

ಸಂಸದ ವಿ‌‌.ಶ್ರೀನಿವಾಸಪ್ರಸಾದ್ ಅನಾರೋಗ್ಯದ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿರುವುದರಿಂದ ಸಂಕಲ್ಪ ಅವರು ಯಾತ್ರೆಗೆ ಬರಲಿಲ್ಲ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರಿಗೂ ಸಣ್ಣ ಆರೋಗ್ಯ ತೊಂದರೆ ಕಾಣಿಸಿಕೊಂಡಿದೆ ಎಂದು ಕರೆ ಮಾಡಿ ತಿಳಿಸಿದ್ದಾರೆ. ಹೀಗೆ ಸೋಮಣ್ಣ ಗೈರಾದದ್ದ ಬಗ್ಗೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದರು.

ನನಗೆ ನಾಯಕರ ಆಶೀರ್ವಾದ ಇದೆ
ಅರಿಶಿಣದ ಬೆಲೆ ಪಾತಾಳಕ್ಕೆ ಕುಸಿತ ಕಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಅಧಿಕಾರಿಗಳನ್ನು ಚಾಮರಾಜನಗರಕ್ಕೆ ಕರೆತಂದು ಅರಿಶಿಣ ಉತ್ಪನ್ನ ತಯಾರಿಕೆ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು. ಯಡಿಯೂರಪ್ಪ ಸೇರಿದಂತೆ ಇನ್ನಿತರ ನಾಯಕರು ಆಶೀರ್ವಾದ ಮಾಡಿದ್ದಾರೆ, ನನಗೆ ಟಿಕೆಟ್ ಫೈನಲ್ ಎನ್ನುವಂತೆ ಬಿಎಸ್ವೈ ಆಶೀರ್ವಾದ ಮಾಡಿದ್ದಾರೆ, ಕೊಳ್ಳೇಗಾಲದಲ್ಲಿ ಬಿಜೆಪಿ ಮತ್ತೇ ಗೆಲ್ಲಲ್ಲಿದ್ದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಪೋಸ್ಟರ್‌ಗಳಿಗೆ ಸಗಣಿ ಎರೆಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪಮಾನ ಮಾಡುವ ಪೋಸ್ಟ್‌ಗಳ ಸಂಬಂಧ ಉತ್ತರಿಸಿ, ನೆಗೆಟಿವ್ ವಿಚಾರಗಳನ್ನು ಎದುರಿಸಿಕೊಂಡೇ ನಾನು ಬಂದಿರುವುದು. ಧ್ವೇಷದಿಂದ ಮಾತನಾಡುವವರು ಬಹಳ ಬೇಗ ಸುಸ್ತಾಗಿಬಿಡುತ್ತಾರೆ. ಇವೆಲ್ಲವನ್ನು ಆರೋಗ್ಯಕಾರಿಯಾಗಿ ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+