ಕೊಳ್ಳೇಗಾಲ: ಕಾಮಕಾರಿ ಪೂರ್ಣವಾಗದೇ ಹೈಟೆಕ್ ಬಸ್ ನಿಲ್ದಾಣದ ಉದ್ಘಾಟನೆ: ಎನ್.ಮಹೇಶ್ ವಿರುದ್ಧ ನಗರಸಭೆ ಸದಸ್ಯರ ಆಕ್ರೋಶ
ಕೊಳ್ಳೇಗಾಲ ತಾಲೂಕಿನ ಜನತೆಯ ಬಹು ವರ್ಷದ ಕನಸಾದ ಸುಸಜ್ಜಿತ ಬಸ್ ನಿಲ್ದಾಣದ ಉದ್ಘಾಟನೆ ವೇಳೆ ಬಿಜೆಪಿ ಕೆಲ ಸದಸ್ಯರು ಸೇರಿದಂತೆ, ನಗರಸಭೆ ಸದಸ್ಯರು ಶಾಸಕ ಮಹೇಶ್ ವಿರುದ್ಧ ಪ್ರತಿಭಟಿಸಿದ ಘಟನೆ ನಡೆಯಿತು. ಹಾಗೆಯೇ ಕ್ಷೇತ್ರದಲ್ಲಿ ಶಾಸಕ ಎನ್. ಮಹೇಶ್ ಅವರು ದೌಲತ್, ದರ್ಪ
ಚಾಮರಾಜನಗರ, ಮಾರ್ಚ್, 20: ಕೊಳ್ಳೇಗಾಲ ತಾಲೂಕಿನ ಜನತೆಯ ಬಹು ವರ್ಷದ ಕನಸಾದ ಸುಸಜ್ಜಿತ ಬಸ್ ನಿಲ್ದಾಣದ ಉದ್ಘಾಟನೆ ವೇಳೆ ಬಿಜೆಪಿ ಕೆಲ ಸದಸ್ಯರು ಸೇರಿದಂತೆ, ನಗರಸಭೆ ಸದಸ್ಯರು ಶಾಸಕ ಮಹೇಶ್ ವಿರುದ್ಧ ಪ್ರತಿಭಟಿಸಿದ ಘಟನೆ ನಡೆಯಿತು. ಹಾಗೆಯೇ ಕ್ಷೇತ್ರದಲ್ಲಿ ಶಾಸಕ ಎನ್. ಮಹೇಶ್ ಅವರು ದೌಲತ್, ದರ್ಪ ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಳ್ಳೇಗಾಲದಲ್ಲಿ ಕಳೆದ ಐದೂವರೆ ವರ್ಷಗಳಿಂದ ನಡೆಯುತ್ತಿದ್ದ ಹೈಟೆಕ್ ಬಸ್ ನಿಲ್ದಾಣವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟನೆ ಮಾಡಿದ್ದಾರೆ. ಕಾಮಗಾರಿ ಅಪೂರ್ಣವಾಗಿದ್ದರೂ ಉದ್ಘಾಟನೆ ಮಾಡಿದ್ದಾರೆ ಎನ್ನುವುದು ನಗರಸಭೆ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಇನ್ನಿತರ ಸದಸ್ಯರ ಆರೋಪವಾಗಿದೆ.

ಮತ್ತೊಮ್ಮೆ ಉದ್ಘಾಟನೆ ಮಾಡುತ್ತೇವೆ
ನಗರಸಭೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಸಭೆ ಕರೆಯದೇ ಏಕಪಕ್ಷೀಯವಾಗಿ ಶಾಸಕ ಮಹೇಶ್ ನಿರ್ಧಾರ ತೆಗೆದುಕೊಂಡು ಅಪೂರ್ಣ ಕಾಮಗಾರಿಯನ್ನು ಉದ್ಘಾಟಿಸುತ್ತಿದ್ದಾರೆ. ಯುಜಿಡಿ, ಶೌಚಾಲಯ ವ್ಯವಸ್ಥೆ ಇನ್ನೂ ಆಗಿಲ್ಲ. ಮಹಿಳಾ ಪ್ರಯಾಣಿಕರು ಶೌಚಾಲಯಕ್ಕೆ ಎಲ್ಲಿಗೆ ತೆರಳಬೇಕು? ಆದ್ದರಿಂದ ಕಾಮಗಾರಿ ಪೂರ್ಣಗೊಂಡ ಬಳಿಕ ನಗರಸಭೆಯಿಂದ ಮತ್ತೊಮ್ಮೆ ಉದ್ಘಾಟನೆ ಮಾಡುತ್ತೇವೆ ಎಂದು ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ರೇಖಾ ಆಕ್ರೋಶ ಹೊರಹಾಕಿದರು.
ಇನ್ನು ಪ್ಲೆಕಾರ್ಡ್ ಹಿಡಿದು ಪ್ರತಿಭಟಿಸುತ್ತಿದ್ದವರನ್ನು ಸಮಾಧಾನಪಡಿಸಲು ಸಚಿವ ಸೋಮಣ್ಣ ಮುಂದಾದ ವೇಳೆ ಸದಸ್ಯರು ಆರೋಪಗಳ ಸುರಿಮಳೆ ಗೈದಿದ್ದಾರೆ. ನಿಮ್ಮಲ್ಲಿರುವ ಸೌಜನ್ಯವೂ ಅವರಿಗಿಲ್ಲ. ಬರೀ ದರ್ಪ, ದೌಲತ್, ದರ್ಬಾರ್ ನಡೆಸುತ್ತಾರೆ. ಅನುದಾನಕ್ಕೆ ನಗರಸಭೆ ಬೇಕು, ಉದ್ಘಾಟನೆಗೆ ನಗರಸಭೆ ಬೇಡವೇ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು.

ಸೋಮಣ್ಣನ ಪುತ್ರನ ವಿರುದ್ಧ ಆಕ್ರೋಶ
ಹಾಗೆಯೇ ಸೋಮಣ್ಣ ಇಲ್ಲದೆಯೂ ರಾಮನಗರದಲ್ಲಿ ಸ್ಥಳೀಯ ಚುನಾವಣೆಗಳನ್ನು ಗೆದ್ದಿದ್ದೇವೆ ಎಂದು ವಿಜಯೇಂದ್ರ ಆಪ್ತ, ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಸೋಮಣ್ಣ ಪುತ್ರನಿಗೆ ಇತ್ತೀಚೆಗಷ್ಟೇ ತಿರುಗೇಟು ಕೊಟ್ಟಿದ್ದರು. ಚಾಮರಾಜನಗರದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ವಿತರಿಸಿ ಮಾತನಾಡಿದ ಅವರು, ಅರುಣ್ ಸೋಮಣ್ಣ ಪಾಪ, ಅವರು ತಂದೆಯ ನೆರಳಿನಲ್ಲಿ ಬೆಳೆದು ರಾಜಕೀಯ ನೋಡಿ ಬಂದವರಾಗಿದ್ದಾರೆ. ಅವರು ಸಂಘಟನೆ ಎಂದರೇನು ಎನ್ನುವುದನ್ನು ತಿಳಿದುಕೊಂಡು ಮಾತನಾಡಲಿ ಎಂದು ತಮ್ಮ ವಿರುದ್ಧ ಮಾಡಿದ್ದ ಟೀಕೆಗಳಿಗೆ ತಿರುಗೇಟು ನೀಡಿದ್ದರು.
ಗ್ರಾಮ ಪಂಚಾಯಿತಿಯಲ್ಲೂ ಗೆಲ್ಲದಿರುವವರು ಚಾಮರಾಜನಗರಕ್ಕೆ ಓಡಿ ಬಂದಿದ್ದಾರೆ ಎನ್ನುವ ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ರುದ್ರೇಶ್, ಸೋಮಣ್ಣ ಅವರ ಊರು ಕನಕಪುರದಲ್ಲಿ ನಾಲ್ಕು ಗ್ರಾಮ ಪಂಚಾಯತಿ ಸದಸ್ಯರನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ. ರಾಮನಗರ ಜಿಲಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸೋಮಣ್ಣನವರ ಸಹಕಾರ ಇಲ್ಲದೆಯೂ ಚುನಾವಣೆ ಗೆದ್ದಿದ್ದೇವೆ ಎಂದರು.
ಪಂಚಾಯತಿ ಚುನಾವಣೆಗೆ ನಿಂತು ಗೆಲ್ಲುವ ಹಂತ ಮುಗಿದುಹೋಗಿದೆ. ಯಾರನ್ನು ಗೆಲ್ಲಿಸಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡು ಬೂತ್ ಮಟ್ಟದಿಂದ ಬೆಳೆದು ಬಂದಿದ್ದೇವೆ. ಹೀಗಾಗಿ ನಾನು ಎಲ್ಲಿಂದಲೂ ಓಡಿ ಬಂದವನಲ್ಲ ಎಂದು ಆಕ್ರೋಶ ಹೊರಹಾಕಿದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ, ಬೂತ್ ಮಟ್ಟದ ಅಧ್ಯಕ್ಷನಾಗಿ, ಯುವ ಮೋರ್ಚಾಗಳಲ್ಲಿ ಕೆಲಸ ನೋಡಿ ಬಂದಿದ್ದೇನೆ ಎಂದಿದ್ದರು.
ಪಕ್ಷ ನನ್ನನ್ನು ಗುರುತಿಸಿ, ಮೊದಲು ಕಂಠೀರವ ಸ್ಟುಡಿಯೋ ಅಧ್ಯಕ್ಷನನ್ನಾಗಿ ಮಾಡಿತ್ತು. ಇದೀಗ ಕೆಆರ್ಐಡಿಎಲ್ ಅಧ್ಯಕ್ಷನನ್ನಾಗಿ ಮಾಡಿದೆ. ಎಲ್ಲೂ ಲೋಪ ಬಾರದಹಾಗೆ, ಪಕ್ಷಕ್ಕೆ ಕೆಟ್ಟ ಹೆಸರು ಬರದಹಾಗೆ ಒಳ್ಳೆಯ ಹೆಸರು ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ ಎಂದಿದ್ದರು.
ಚಾಮರಾಜನಗರದಲ್ಲಿ ಒಗ್ಗಟ್ಟು ಇದ್ದಿದ್ದರೆ ಇಷ್ಟುದಿನ ಕಾಂಗ್ರೆಸ್ ಗೆಲ್ಲಲು ಬಿಟ್ಟಿರುವುದಾದರು ಏಕೆ. ಇಷ್ಟು ದಿನ ಇಲ್ಲಿಗೆ ಬೇರೆಯವರು ಬಂದಿದ್ದರೇನು, ಇಲ್ಲಿ ಸ್ಥಳೀಯರೇ ಇದ್ದವರು. ಅವರವರೇ ಏಕೆ ಸೋಲುತ್ತಿದ್ದಾರೆ ಎಂದು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳ ವಿರುದ್ಧ ಟೀಕಿಸಿದ್ದರು.












Click it and Unblock the Notifications