ತುಂಬಿ ಹರಿಯುತ್ತಿರುವ ಮೂಲೆಹೊಳೆ ಹಳ್ಳ; ಕೇರಳ-ಕರ್ನಾಟಕ ಸಂಚಾರ ಬಂದ್
ಚಾಮರಾಜನಗರ, ಆಗಸ್ಟ್ 08: ಕೇರಳದ ವೈನಾಡಿನಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಕಾರಣ ಚಾಮರಾಜನಗರ ಜಿಲ್ಲೆಯ ಮೂಲೆಹೊಳೆ ಹಳ್ಳ ಉಕ್ಕಿ ಹರಿಯುತ್ತಿದೆ.
Recommended Video
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೂಲೆಹೊಳೆಯು ನಿರಂತರ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದು, ತಾತ್ಕಾಲಿಕವಾಗಿ ಕರ್ನಾಟಕ-ಕೇರಳ ಸಂಚಾರವನ್ನು ಬಂದ್ ಮಾಡಿದ್ದಾರೆ.
ಕೇರಳ-ಕರ್ನಾಟಕದ ಗಡಿ ಮೂಲೆಹೊಳೆ ಸಮೀಪದ ರಸ್ತೆಯಲ್ಲೆಲ್ಲಾ ನೀರು ಹರಿಯುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅನಾಹುತ ಸಂಭವಿಸದಂತೆ ತಡೆಯುವ ಉದ್ದೇಶದಿಂದ ಅರಣ್ಯಾಧಿಕಾರಿಗಳು ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಿದ್ದಾರೆ. ಈ ಕಾರಣ ನಿನ್ನೆ ಕೇರಳ ಕರ್ನಾಟಕ ಸಂಚರಿಸುವ ಸರಕು ಸಾಗಣೆ ಮಾಡುವ ವಾಹನಗಳು ಮದ್ದೂರು ಚೆಕ್ ಪೋಸ್ಟ್ ನಲ್ಲೇ ಸಾಲುಗಟ್ಟಿ ನಿಂತಿದ್ದವು.

ಮಳೆ ಕಡಿಮೆಯಾಗುವವರೆಗೂ ಯಾವುದೇ ವಾಹನಗಳನ್ನು ಈ ಮಾರ್ಗದಲ್ಲಿ ಸಂಚರಿಸಲು ಬಿಡದಂತೆ ಅರಣ್ಯಾಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಜಿಲ್ಲೆಯ ಪಕ್ಕದ ಮೈಸೂರಿನ ಗ್ರಾಮಾಂತರ ಪ್ರದೇಶಗಳಲ್ಲೂ ನದಿ ನೀರಿನ ಮಟ್ಟ ಏರಿಕೆಯಾಗಿ ಪ್ರವಾಹ ಉಂಟಾಗಿದೆ. ಹುಣಸೂರಿನಲ್ಲಿ ಜಮೀನುಗಳಿಗೆ ನೀರು ನುಗ್ಗಿದ್ದು, ರೈತರು ತಾವು ಬೆಳೆದ ಶುಂಠಿ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.












Click it and Unblock the Notifications