ಮತ ಎಣಿಕೆಗೆ ಕ್ಷಣ ಗಣನೆ: ಚಾಮರಾಜನಗರದ 3 ಕಡೆ ಕೈ-ಕಮಲ ಬಿಗ್ ಫೈಟ್

ಚಾಮರಾಜನಗರ, ಮೇ 13: ಚುನಾವಣೆ ಮುಗಿದು ಮತ‌ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು( ಮೇ 13) ಬೆಳಗ್ಗೆ 8ರಿಂದ ಚಾಮರಾಜನಗರ ಹೊರವಲಯದ ಬೇಡರಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ‌‌.

ಚಾಮರಾಜನಗರದಲ್ಲಿ ಬಿಜೆಪಿ ವಿ.ಸೋಮಣ್ಣ ಹಾಗೂ ಕಾಂಗ್ರೆಸ್‌ನ ಸಿ‌.ಪುಟ್ಟರಂಗಶೆಟ್ಟಿ ನಡುವೆ ನೇರಾ ಹಣಾಹಣಿ ನಡೆದಿದ್ದು, ಕೊಳ್ಳೇಗಾಲದಲ್ಲಿ ಕಾಂಗ್ರೆಸ್‌ನ ಎ.ಆರ್.ಕೃಷ್ಣಮೂರ್ತಿ ಹಾಗೂ ಬಿಜೆಪಿಯ ಎನ್‌.ಮಹೇಶ್, ಗುಂಡ್ಲುಪೇಟೆಯಲ್ಲಿ ಬಿಜೆಪಿ ಶಾಸಕ ಸಿ.ಎಸ್.ನಿರಂಜನ ಕುಮಾರ್ ಹಾಗೂ ಕಾಂಗ್ರೆಸ್‌ನ ಗಣೇಶ್ ಪ್ರಸಾದ್ ಬಿಗ್ ಫೈಟ್ ನಡೆಸಿದ್ದಾರೆ.

Karnataka Election Results 2023

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್‌ನ ಎಂ.ಆರ್.ಮಂಜುನಾಥ್, ಕಾಂಗ್ರೆಸ್ ನ ಆರ್.ನರೇಂದ್ರ ಹಾಗೂ ಬಿಜೆಪಿಯಿಂದ ಡಾ.ಪ್ರೀತನ್ ಕುಮಾರ್ ಕಾದಾಟ ನಡೆಸಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಎಷ್ಟು ಸುತ್ತಿನ‌ ಮತ ಎಣಿಕೆ..?

ಬೇಡರಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು ಬೆಳಗ್ಗೆ 8 ಗಂಟೆಗೆ ಅಂಚೆ ಮತ ಪತ್ರ ಎಣಿಕೆ ಮೂಲಕ ಕೌಂಟಿಂಗ್ ಆರಂಭವಾಗಲಿದೆ.

Karnataka Election Results 2023

ಪೋಸ್ಟಲ್ ಬ್ಯಾಲೆಟ್ ಎಣಿಕೆ ಕಾರ್ಯವು 2 ಟೇಬಲ್‌ಗಳಲ್ಲಿ ನಡೆಯಲಿದೆ. ಇಟಿಪಿಬಿಎಸ್ ಮತ ಎಣಿಕೆಗೆ 1 ಟೇಬಲ್ ಇರಲಿದೆ. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 18 ಸುತ್ತಿನಲ್ಲಿ ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ 19 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು 14 ಟೇಬಲ್(ಮೇಜು)ಗಳಲ್ಲಿ ನಡೆಯಲಿದೆ. ಪ್ರತಿ ಟೇಬಲ್‌ಗೆ ತಲಾ ಓರ್ವ ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆದಾರರು ಹಾಗೂ ಓರ್ವ ಮೈಕ್ರೋ ವೀಕ್ಷಕರು ಇರಲಿದ್ದಾರೆ.

ಮತದಾನ ಪ್ರಮಾಣ

ಚಾಮರಾಜನಗರ ಜಿಲ್ಲೆಯಲ್ಲಿ ಶೇ 81.70 ರಷ್ಟು ಮತದಾನವಾಗಿದೆ, ಜಿಲ್ಲೆಯಲ್ಲಿ ಒಟ್ಟು 8,61,489 ಮತದಾರರಿದ್ದು ಇವರಲ್ಲಿ 4,26,547 ಪುರುಷರು, 4,34,873 ಮಹಿಳೆಯರು, ಇತರರು 69 ಮಂದಿ ಇದ್ದಾರೆ. ಈ ಪೈಕಿ 3,51,642 ಪುರುಷರು, 3,52,179 ಮಹಿಳೆಯರು, 14 ಇತರೆ ಮಂದಿ ಸೇರಿದಂತೆ ಒಟ್ಟು 7,03,835 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ 80.86 ರಷ್ಟು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಶೇ 76.75 ರಷ್ಟು, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ 81.95 ರಷ್ಟು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 87.33 ರಷ್ಟು ಮತದಾನವಾಗಿದೆ.

ಒಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಕೈ ಭದ್ರಕೋಟೆ ಮುಂದುವರೆಯುವುದೋ ಇಲ್ಲವೇ ಕಮಲ ಹೆಚ್ಚು ಅರಳುವುದೋ, ತೆನೆ ಹೊತ್ತ ಮಹಿಳೆಗೆ ಸಿಹಿ ಸಿಗಲಿದೆಯಾ ಎನ್ನುವುದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+