ಚಾಮರಾಜನಗರ: ಹೈಫೈ ಶೋಕಿ ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ
ಚಾಮರಾಜನಗರ, ಮಾರ್ಚ್, 17: ಈಗಿನ ಕಾಲದಲ್ಲಿ ಮದುವೆ ಅನ್ನೋದು ಶೋಕಿ ಆಗಿಬಿಟ್ಟಿದೆ. ಅದರ ಅರ್ಥನೇ ಗೊತ್ತಿಲ್ಲದೆ, ಅದೆಷ್ಟೋ ಜನ ತಪ್ಪುದಾರಿಗಿಳಿಯುತ್ತಿದ್ದಾರೆ. ಕೆಲವರು ಸಣ್ಣಪುಟ್ಟ ವಿಚಾರಕ್ಕೂ ಜಗಳವಾಡಿ ವಿಚ್ಛೇದನ, ಆತ್ಮಹತ್ಯೆ ದಾರಿ ಹಿಡಿದಿರುವ ಉದಾಹರಣೆಗಳಿವೆ. ಈ ನಡುವೆಯೇ ಇದೀಗ ಶೋಕಿ ಪತ್ನಿಯ ಕಿರುಕುಳಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ಮೊದಲು ತಲೆಯಲ್ಲಿ ಕೋದಲಿಲ್ಲದಿದ್ದರೂ ಕೂಡ ಸಂಬಳ ಚೆನ್ನಾಗಿದ್ದರೆ ಸಾಕು ಆತನನ್ನೇ ವರಿಸುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಇಂತಹವರು ಕೆಲ ದಿನಗಳ ಬಳಿಕ ತಮ್ಮಿಷ್ಟದಂತೆ ಜೀವನ ಸಾಗಿಸಿ ಕೊನೆಗೆ ಕಟ್ಟಿಕೊಂಡ ಗಂಡನನ್ನೆ ಧಿಕ್ಕರಿಸುವ ಮಟ್ಟಕ್ಕೂ ಇಳಿಯಿತ್ತಿದ್ದಾರೆ ಎನ್ನುವುದಕ್ಕೆ ಚಾಮರಾಜನಗರದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ.

ನಿನ್ನ ತಲೆಯಲ್ಲಿ ಕೂದಲು ಇಲ್ಲ ಎಂದು ಪತ್ನಿ ಕೊಡುತ್ತಿದ್ದ ಟಾರ್ಚರ್‌ಗೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ. ಪರಶಿವ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ನೀನು ಚನ್ನಾಗಿಲ್ಲ, ನನಗೆ ಸರಿಯಾದ ಜೋಡಿ ಅಲ್ಲ ಎಂದು ಪತ್ನಿ ಎಲ್ಲರೆದುರೇ ಅವಮಾನ ಮಾಡುತ್ತಿದ್ದಳು. ಈ ಶೋಕಿ ಪತ್ನಿ ಹೈಫೈ ಜೀವನ ನಡೆಸಲು ಬಯಸಿದ್ದಳು. ಅಲ್ಲದೇ ರೀಲ್ಸ್ ಗೀಳು ಕೂಡ ಈಕೆಗೆ ಇತ್ತು ಎಂದು ತಿಳಿದುಬಂದಿದೆ.
ಬ್ರಾಂಡೆಟ್ ಬಟ್ಟೆ, ಆಭರಣ, ಬೇರೆಮನೆ ಮಾಡು ಎಂದು ಪತ್ನಿ ಪತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಳು. ಅಷ್ಟೇ ಅಲ್ಲದೆ, ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿ ಪತಿಯನ್ನು ಒಂದೂವರೆ ತಿಂಗಳು ಜೈಲಿಗೂ ಕಳುಸಿದ್ದಳಂತೆ.
ಇನ್ನು ಪತ್ನಿಯ ಕಿರುಕುಳಕ್ಕೆ ಬೇಸತ್ತ ಪತಿ ಪರಶಿವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಇದನ್ನು ಗಮನಿಸುತ್ತಿದ್ದರೆ, ಇಷ್ಟು ದಿನ ಗಂಡನ ಮನೆ ಕಡೆಯವರು ಹೆಣ್ಣಿನ ಕಡೆಯಿಂದ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎನ್ನುವ ಆರೋಪಗಳು ಕೇಳಿಬರುತ್ತಿದ್ದರು.
ಈಗಲೂ ಕೆಲವೆಡೆ ವರಸಕ್ಷಿಣೆ ಕೇಳುವ ಪದ್ಧತಿ ನಡೆಯುತ್ತಿದೆ. ಮದುವೆಯಾಗಿ ಗಂಡನ ಮನೆಗೆ ಬಂದಿರುವ ಪತ್ನಿಗೂ ವರದಕ್ಷಿಣ ಕಿರುಕುಳ ನೀಡುತ್ತಿರುವ ಪ್ರಕರಗಳು ನಡೆದಿರುವ ಉದಾಹರಣೆಗಳಿವೆ. ಇದೀಗ ಇದು ಉಲ್ಟಾ ಆಗಿದ್ದು, ಕೆಲ ಪತ್ನಿಯರು ಪತಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎನ್ನುವುದಕ್ಕೆ ಚಾಮರಾಜನಗರದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.
ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.












Click it and Unblock the Notifications