Get Updates
Get notified of breaking news, exclusive insights, and must-see stories!

ಮಳೆ ಅವಾಂತರ: ಮಲೆ ಮಹದೇಶ್ವರ ಬೆಟ್ಟದ 108 ಅಡಿ ಮಾದಪ್ಪನ ಪ್ರತಿಮೆ ಬಳಿ ತಡೆಗೋಡೆ ಕುಸಿತ

ಚಾಮರಾಜನಗರ, ಮೇ 12: ಕಳೆದ ಎರಡು ದಿನಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ವರುಣನ ಆರ್ಭಟಕ್ಕೆ ಈಗಾಗಲೇ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬೆಳೆ ಹಾಗೂ ಆಸ್ತಿಗಳಿಗೆ ಹಾನಿಯಾಗಿದೆ.

ನಿರಂತರ ಮಳೆಯಿಂದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೂ ಹಾನಿಯಾಗಿದ್ದು, ರಾಜ್ಯದ ಪ್ರಮುಖ ಯಾತ್ರ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡು ಎಂಬಲ್ಲಿ ನಿರ್ಮಾಣ ಮಾಡಿರುವ 108 ಅಡಿ ಮಲೆ ಮಹದೇಶ್ವರ ಪ್ರತಿಮೆ ಮುಂಭಾಗ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿತಗೊಂಡಿದೆ.

male mahadeshwarana betta

ಪ್ರತಿಮೆ ಸ್ಥಳದಲ್ಲಿ ಈಗಾಗಲೇ ಕಾಮಗಾರಿಗಳು ನಡೆಯುತ್ತಿರುವುದರಿಂದ ಭಕ್ತರ ಪ್ರವೇಶ ನಿಷೇಧ ಮಾಡಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನೆರಡು ದಿನಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ಪ್ರಾಧಿಕಾರದ ಮಾಹಿತಿ ನೀಡಿದೆ.

ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 108 ಅಡಿ ಮಲೆಮಹದೇಶ್ವರನ ಪ್ರತಿಮೆ ನಿರ್ಮಿಸಲಾಗಿದೆ. ಗದಗದ ಸಿಎಸ್ಎಪಿ ಆರ್ಕಿಟೆಕ್ಟ್ ಸಂಸ್ಥೆಯು ಪ್ರತಿಮೆ ನಿರ್ಮಿಸಿದೆ. ಶ್ರೀಧರ್ ಎನ್ನುವವರು ಪ್ರತಿಮೆಯ ಶಿಲ್ಪಿಯಾಗಿದ್ದು, ಮುರ್ಡೇಶ್ವರದ ಶಿವನ ಮೂರ್ತಿ, ಬಸವ ಕಲ್ಯಾಣದದಲ್ಲಿ ಬೃಹತ್‌ ಬಸವಣ್ಣನ ಪ್ರತಿಮೆಗಳ ರೂವಾರಿಯಾಗಿದ್ದಾರೆ.

ಹನೂರು ಭಾಗದಿಂದ ಬೆಟ್ಟಕ್ಕೆ ಬರುವವರು ಆನೆದಿಂಬ ತಲುಪುತ್ತಿದ್ದಂತೆಯೇ ಹುಲಿಮೇಲೆ ಕುಳಿತ ಮಾದಪ್ಪನ ಪ್ರತಿಮೆಯ ಸೊಬಗು ಕಾಣಬಹುದು. ತಮಿಳುನಾಡಿನಿಂದ ಬಂದರೆ ಗರಿಕೆಕಂಡಿ ಸಿಗುತ್ತಿದ್ದಂತೆ ಮಾದಪ್ಪನನ್ನು ಕಣ್ತುಂಬಿಕೊಳ್ಳಬಹುದಾಗಿದೆ. 108 ಅಡಿ ಎತ್ತರ ‌ಪ್ರತಿಮೆಯು ಎರಡು ಸ್ತರದಲ್ಲಿ ನಿರ್ಮಾಣವಾಗಿದೆ. ಕಲ್ಲು ಬಂಡೆಯ ರಚನೆಯ ಮೇಲೆ ವ್ಯಾಘ್ರನ ಮೇಲೆ ಕುಳಿತ ತ್ರಿಶೂಲ ಹಿಡಿದ ಮಹದೇಶ್ವರ ಸ್ವಾಮಿಯ ಪ್ರತಿಮೆ ರೂಪಿಸಲಾಗಿದೆ. ಈಗಾಗಲೇ ಪ್ರವಾಸಿಗರು ದಂಡು ಇಲ್ಲಿಗೆ ಆಗಮಿಸುತ್ತಿದ್ದು, ಪ್ರತಿಮೆ ಅನಾವರಣಗೊಂಡ ಕೆಲವೇ ತಿಂಗಳಲ್ಲಿ ಪ್ರತಿಮೆ ಮುಂಭಾಗ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿತಗೊಂಡಿದೆ.

male mahadeshwarana betta

ದುಪ್ಪಟ್ಟಾದ ದರ: ಹೊಗೆನಕಲ್ ನಲ್ಲಿ ಪ್ರವಾಸಿಗರು- ತೆಪ್ಪ ನಡೆಸುವರ ಮಧ್ಯೆ ಹೊಡೆದಾಟ

ಚಾಮರಾಜನಗರ: ದರ ದುಪ್ಪಟ್ಟು ವಸೂಲಿಯಿಂದ ತೆಪ್ಪ ನಡೆಸುವವರು ಹಾಗೂ ಪ್ರವಾಸಿಗರು ಹೊಡೆದಾಡಿಕೊಂಡಿರುವ ಘಟನೆ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ನಡೆದಿದೆ.

ಹೊಗೆನಕಲ್ ಜಲಪಾತವು ತಮಿಳುನಾಡು ಹಾಗೂ ಕರ್ನಾಟಕ ಎರಡೂ ಭಾಗದಲ್ಲೂ ಹರಡಿಕೊಂಡಿದ್ದು, ಗಲಾಟೆ ನಡೆದಿರುವುದು ತಮಿಳುನಾಡು ಭಾಗದಲ್ಲಿ ಎನ್ನುವ ಮಾಹಿತಿ ಲಭ್ಯವಾಗಿದೆ. ತಮಿಳುನಾಡು ಸರ್ಕಾರ ತೆಪ್ಪ ಸವಾರಿಗೆ 750 ರೂ. ನಿಗದಿ ಮಾಡಿದ್ದರೇ ಅಲ್ಲಿನ ಸಿಬ್ಬಂದಿ 4 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ನದಿಯ ಒಂದು ಭಾಗಕ್ಕೆ ಕರೆದೊಯ್ದು ಹಣ ಕೊಡದಿದ್ದರೇ ವಾಪಸ್ ಬಿಡುವುದಿಲ್ಲ ಎಂದು ಕ್ಯಾತೆ ತೆಗೆದಾಗ ಮಾತಿನ ಚಕಮಕಿ ನಡೆದು ಹೊಡದಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರವಾಸಿಗರು ಹಾಗೂ ತೆಪ್ಪ ನಡೆಸುವವರು ಹೊಡೆದಾಡಿಕೊಳ್ಳುವನ್ನು ಪ್ರವಾಸಿರೊಬ್ಬರು ವಿಡಿಯೋ ಮಾಡಿದ್ದು ಸದ್ಯ ವಿಡಿಯೋ ವೈರಲ್‌ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+