ಚಾಮರಾಜನಗರದಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗುವ ಆತಂಕ
ಚಾಮರಾಜನಗರ, ಮೇ, 01: ರಾಜ್ಯ ವಿಧಾನಸಭೆ ಚುನವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಕೆಲವೇ ಕ್ಷಣಗಳಲ್ಲಿ ಚಾಮರಾಜನಕ್ಕೆ ರಾಹುಲ್ ಗಾಂಧಿ ಆಗಸಲಿದ್ದಾರೆ. ಆದರೆ ಮತ್ತೊಂದೆಡೆ ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರೆದಿದ್ದು, ರಾಹುಲ್ ಗಾಂಧಿ ಅವರ ಸಮಾವೇಶ ಮೊಟಕುಗೊಳ್ಳುವ ಆತಂಕವೂ ಕೂಡ ಎದುರಾಗಿದೆ.
ಚಾಮರಾಜನಗರದಲ್ಲಿ ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಭಾಗಿಯಾಗಲು ರಾಹುಲ್, ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ಹೆಲಿಕಾಪ್ಟರ್‌ನಲ್ಲಿ ಆಗಮಿಸಲಿದ್ದಾರೆ. ಆದರೆ ಜಿಲ್ಲೆಯಲ್ಲಿ ಕಳೆದ 20 ನಿಮಿಷದಿಂದ ಸುರಿಯುತ್ತಿರುವ ಜೋರು ಮಳೆ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವ ಆತಂಕವೂ ಎದುರಾಗಿದೆ.

ಮತ ಚಲಾಯಿಸಿದವರ ವಿವರ
ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನ ಮಾಡಲು ಕೋರಿಕೆ ಸಲ್ಲಿಸಿದ್ದ 329 ಎಂಭತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರ ಮತದಾರರ ಪೈಕಿ 313 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ 50 ಹಿರಿಯ ನಾಗರಿಕರು, 25 ವಿಶೇಷಚೇತನರು ಮತ ಚಲಾಯಿಸಿದ್ದು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ 49 ಹಿರಿಯ ನಾಗರಿಕರು, 31 ವಿಶೇಷಚೇತನರು ಮತ ಚಲಾಯಿಸಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ 51 ಹಿರಿಯ ನಾಗರಿಕರು, 26 ವಿಶೇಷಚೇತನರು ಮತ ಚಲಾಯಿಸಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ 59 ಹಿರಿಯ ನಾಗರಿಕರು, 22 ವಿಶೇಷಚೇತನರು ಮತ ಚಲಾಯಿಸಿದ್ದಾರೆ.
ಕೋರಿಕೆ ಅರ್ಜಿ ಸಲ್ಲಿಸಿ ನೊಂದಣಿಯಾದ ಅವಧಿಯ ಬಳಿಕ 8 ಮಂದಿ ಹಿರಿಯ ನಾಗರಿಕರು ಮೃತಪಟ್ಟಿದ್ದಾರೆ. ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇಬ್ಬರು ಮನೆಯಲ್ಲಿ ಲಭ್ಯವಿಲ್ಲದೆ ಹೊರಗೆ ತೆರಳಿದ್ದಾರೆ. ಮೂವರು ನಿರಾಕರಿಸಿದ್ದಾರೆ. ಈ ಎಲ್ಲಾ ಉಳಿದ ಎಂಟು ಮಂದಿಗೆ ಮೇ 6ರಂದು ಮತ್ತೊಮ್ಮೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications