ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರ ತಪ್ಪಿ ಸರಕು ಸಾಗಾಣಿಕೆ ವಾಹನ ಪಲ್ಟಿ
ಚಾಮರಾಜನಗರ, ಜೂನ್ 9: ರಾಜ್ಯದಲ್ಲಿ ಅಪಘಾತ ಪ್ರಕರಣಗಳು ಕಡಿಮೆಯಾಗುತ್ತಿವೆ ಎನ್ನುವಷ್ಟರಲ್ಲಿ ಮತ್ತೆ ಹೆಚ್ಚಾಗುತ್ತಿವೆ. ಇದೀಹ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕು ಸಾಗಾಣಿಕೆ ವಾಹನವೊಂದು ಉರುಳಿ ಬಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಕುಳ್ಳೂರು ಕ್ರಾಸ್ ಸಮೀಪ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಕುಳ್ಳೂರು ಕ್ರಾಸ್ ಬಳಿ ಸರಕು ಸಾಗಾಣೆ ವಾಹನ ಸಂಚರಿಸುವಾಗಲೇ ಚಾಲಕನ ನಿಯಂತ್ರಣ ತಪ್ಪಿ ಉರುಳಿ ರಸ್ತೆ ಪಕ್ಕದ ಕಂದಕಕ್ಕೆ ಬಿದ್ದಿದೆ. ಪರಿಣಾಮ ರಘುಪತಿ ಹಾಗೂ ದಾಮೋದರ್ ಎಂಬವರಿಗೆ ಗಾಯ ಆಗಿದ್ದು, ಇಬ್ಬರನ್ನು ಚಾಮರಾಜನಗರ ಸರ್ಕಾರಿ ವೈದ್ಯಕೀಯ ಬೋಧನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದು ಕೇರಳ ಮೂಲದ ವಾಹನ ಆಗಿದ್ದು, ತಮಿಳುನಾಡಿಗೆ ಸರಕು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

15 ಜನ ಸಾವು: ಬಸ್ಸೊಂದು ಮಿನಿವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದು, 33 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಮಲೇಷ್ಯಾದ ಗೆರಿಕ್ ಬಳಿ ಸೋಮವಾರ ಮುಂಜಾನೆ ನಡೆದಿದೆ. ಅಲ್ಲಿನ ಪೊಲೀಸರು ಮಾಹಿತಿ ಪ್ರಕಾರ, ಸುಲ್ತಾನ್ ಇದ್ರಿಸ್ ಶಿಕ್ಷಣ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಮತ್ತೆ ತಮ್ಮ ಕ್ಯಾಂಪಸ್‌ಗೆ ಕರೆದೊಯ್ಯುತ್ತಿದ್ದ ಬಸ್ ಸ್ಥಳೀಯ ಸಮಯ ಸುಮಾರು 1 ಗಂಟೆಗೆ ನಿಯಂತ್ರಣ ಕಳೆದುಕೊಂಡು ಹಿಂದಿನಿಂದ ಮಿನಿವ್ಯಾನ್‌ಗೆ ಡಿಕ್ಕಿ ಹೊಡೆದಿದೆ.
ಮೃತರಲ್ಲಿ 14 ಜನ 21-23 ವರ್ಷದೊಳಗಿನ ವಿದ್ಯಾರ್ಥಿಗಳಾಗಿದ್ದರೆ, ಉಳಿದ 15ನೇಯವರು ಬಸ್ ಸಿಬ್ಬಂದಿ ಆಗಿದ್ದರು. 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. 7 ಮಂದಿ ಗಂಭೀರ ಸ್ಥಿತಿಯಲ್ಲಿರುವವರು ಸೇರಿ 33 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೆರಾಕ್ ರಾಜ್ಯದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯ ಚಿತ್ರಗಳು ಬಸ್ ಹಿಂಭಾಗಕ್ಕೆ ತೀವ್ರ ಹಾನಿಯೊಂದಿಗೆ ಉರುಳಿಬಿದ್ದಿರುವುದನ್ನು ತೋರಿಸಿವೆ. ಆದರೆ ಮಿನಿವ್ಯಾನ್ ಕಿಟಕಿಗಳು ಪುಡಿ ಪುಡಿಯಾದ ನಂತರ ಕಂದಕಕ್ಕೆ ತಳ್ಳಲ್ಪಟ್ಟಿದೆ. ನಜ್ಜುಗುಜ್ಜಾದ ಬಸ್ಸಿನಿಂದ ಸಿಕ್ಕಿಬಿದ್ದ ಬಲಿಪಶುಗಳನ್ನು ಹೊರತೆಗೆಯಲು ರಕ್ಷಣಾ ತಂಡವು ಹೈಡ್ರಾಲಿಕ್ ಕಟ್ಟರ್‌ಗಳನ್ನು ಬಳಸಿತು.
ಬಸ್ ನಿಯಂತ್ರಣ ಕಳೆದುಕೊಂಡು ಹಿಂದಿನಿಂದ ಮಿನಿ ವ್ಯಾನ್‌ಗೆ ಡಿಕ್ಕಿ ಹೊಡೆದಂತೆ ಕಾಣುತ್ತಿದೆ ಎಂದು ಪೆರಾಕ್ ರಾಜ್ಯ ಪೊಲೀಸ್ ಮುಖ್ಯಸ್ಥ ಹಿಸಾಮ್ ನಾರ್ಡಿನ್ ಹೇಳಿದ್ದಾರೆ. ಇನ್ನೂ ಇದಕ್ಕೆ ನಿಖರ ಕಾರಣ ಏನೆಂದು ತಿಳಿದುಬರಬೇಕಿದೆ ಅಷ್ಟೇ.












Click it and Unblock the Notifications