ಬಂಡೀಪುರದಲ್ಲಿ ಸಫಾರಿ ವಾಹನದ ಮೇಲೆ ಕಾಡಾನೆ ದಾಳಿ

ಚಾಮರಾಜನಗರ, ಸೆಪ್ಟೆಂಬರ್ 11 : ಪ್ರವಾಸಿಗರು ಸಫಾರಿಗೆ ತೆರಳಿದ ವಾಹನದ ಮೇಲೆ ಕಾಡಾನೆಯೊಂದು ಹಠಾತ್ ದಾಳಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.

ಇಂತಹ ಘಟನೆ ಇದೇ ಮೊದಲ ಬಾರಿ ಎನ್ನಲಾಗಿದ್ದು ಭಾನುವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಾನುವಾರ ಸಂಜೆ ಸಫಾರಿಗೆ ತೆರಳಿದ ಪ್ರವಾಸಿಗರು ಕಾಡಾನೆಯ ಹಿಂಡನ್ನು ಕಂಡು ಹಿರಿ ಹಿರಿ ಹಿಗ್ಗಿ ಮೊಬೈಲ್‍ನಲ್ಲಿ ವೀಡಿಯೋ ಫೋಟೋ ತೆಗೆದುಕೊಳ್ಳುವ ಆತುರದಲ್ಲಿದ್ದರು. ಈ ವೇಳೆ ಕಾಡಾನೆಯೊಂದು ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದಿದೆ.

Elephant

ಆದರೆ, ವಾಹನ ಚಾಲಕ ವಾಹನವನ್ನು ವೇಗವಾಗಿ ಚಾಲಾಯಿಸಿದ್ದರಿಂದ ಕಾಡಾನೆ ದಾಳಿಯಿಂದ ಆಗಬಹುದಾದ ಅನಾಹುತದಿಂದ ಪಾರಾಗಿದ್ದಾರೆ. ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ಭಯಭೀತರಾಗಿದ್ದು ಬಳಿಕ ನೆಮ್ಮದಿಯುಸಿರು ಬಿಟ್ಟಿದ್ದಾರೆ.

ಸಫಾರಿಗೆ ತೆರಳುವ ಪ್ರವಾಸಿಗರಿಗೆ ಅರಣ್ಯ ಇಲಾಖೆ ಯಾವುದೇ ವಿಧವಾದ ಭದ್ರತೆ ಇಲ್ಲದೆ ವಾಹನದಲ್ಲಿ ಕರೆದೊಯ್ಯಲಾಗುತ್ತಿದೆ ಎಂದು ಕೆಲವು ಪ್ರವಾಸಿಗರು ಆರೋಪಿಸಿದ್ದಾರೆ. ಇನ್ನು ಮುಂದೆಯಾದರೂ ಇತ್ತ ಅಧಿಕಾರಿಗಳು ಗಮನಹರಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+