ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋಮಾತೆ ಶಾಪದಿಂದ ಕಾಂಗ್ರೆಸ್ ಕಸದಬುಟ್ಟಿಗೆ ಸೇರಿದೆ: ಚಾಮರಾಜನಗರದಲ್ಲಿ ಪ್ರಮೋದ್ ಮುತಾಲಿಕ್ ವಾಗ್ದಾಳಿ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ನವೆಂಬರ್‌, 24: ಗೋಮಾತೆ ಶಾಪದಿಂದ ಕಾಂಗ್ರೆಸ್ ಇಂದು ಕಸದಬುಟ್ಟಿ‌ ಸೇರಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಚಾಮರಾಜನಗರದಲ್ಲಿ ಪ್ರಮೋದ್‌ ಮುತಾಲಿಕ್‌ ಆಕ್ರೋಶ ವ್ಯಕ್ತಪಡಿಸಿದರು.

ಚಾಮರಾಜನಗರದಲ್ಲಿ ಅಜಾದ್ ಹಿಂದೂ ಸೇನೆ ಸಂಘಟನೆಯ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 75 ವರ್ಷಗಳಿಂದ ಗೋ ಹತ್ಯೆಗೆ ಬೆಂಬಲಿಸಿದ ಪರಿಣಾಮ ಎಸಿ ರೂಂಗಳಲ್ಲಿ ಕುಳಿತವರು ಇಂದು ನಡೆಯುತ್ತಿದ್ದಾರೆ. ಮಳೆ, ಬಿಸಿಲು ಎನ್ನದೇ ರಸ್ತೆಯಲ್ಲಿ ನಡೆಯುತ್ತಿರುವುದು ಗೋಮಾತೆಯ ಶಾಪವಾಗಿದೆ. ಆದ್ದರಿಂದಲೇ ಕಾಂಗ್ರೆಸ್ ಕಸದಬುಟ್ಟಿಗೆ ಸೇರಿದೆ ಎಂದು ಹರಿಹಾಯ್ದರು. ಗೋ ಸಂರಕ್ಷಣಾ ಕಾಯ್ದೆ ಕೇವಲ ಕಾಗದದಲ್ಲಿ ಜಾರಿಯಾಗಿದ್ದು, ಇಂದಿಗೂ ಗೋಹತ್ಯೆ ನಡೆಯುತ್ತಿದೆ. ಪೊಲೀಸರಿಗೆ ಒಂದು ಆಕಳಿಗೆ ಇಂತಿಷ್ಟು ಎಂದು ಹಣ ಸಂದಾಯವಾಗುತ್ತಿದೆ. ಗೋರಕ್ಷಕರ ಮೇಲೆಯೇ ಪ್ರಕರಣ ದಾಖಲಾಗುತ್ತಿದೆ. ನನ್ನ ವಿರುದ್ಧ ಗೋರಕ್ಷಣೆ ಸಂಬಂಧ 17 ಪ್ರಕರಣ ಸೇರಿ ಒಟ್ಟು 107 ಕೇಸ್‌ ಹಾಕಿದ್ದಾರೆ. ಸಾವಿರ ಕೇಸ್ ದಾಖಲಿಸಿದರೂ ಹಿಂದೂ ಧರ್ಮದ ರಕ್ಷಣೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.

Congress is cursed by cows: Pramod Muthalik said in Chamarajanagar

ಗೋಮಾತೆ ರಕ್ಷಣೆಗಾಗಿ ಹೋರಾಟ

ಈ ದೇಶದಲ್ಲಿ ಹಿಂದೂಗಳು ಸಂಘಟನೆಯಾಗಿ ಧರ್ಮದ ಉಳಿವು ಮತ್ತು ಗೋಮಾತೆ ರಕ್ಷಣೆಗೆ ಹೋರಾಡದಿದ್ದರೆ, ಹಿಂದೂ ಧರ್ಮಕ್ಕೆ ಆಪಾಯ ಉಂಟಾಗಲಿದೆ. ಹಿಂದೂ ಸಂಘಟನೆ ಎಂದಾಕ್ಷಣ ನೂರಾರು ವಿಘ್ನಗಳು ಎದುರಾಗುತ್ತದೆ. ನಾಲ್ಕು ದುಷ್ಟ ಶಕ್ತಿಗಳಾದ ಇಸ್ಲಾಮಿಕ್ ಶಕ್ತಿ, ಕ್ರಿಶ್ಚಿಯನ್ ಮಿಷನರಿಗಳು, ನಾಸ್ತಿಕವಾದಿಗಳು ಹಾಗೂ ಭ್ರಷ್ಟ ರಾಜಕಾರಣಿಗಳು ಇವರು ತಮ್ಮದೇ ರೀತಿಯಲ್ಲಿ ಹಿಂದೂ ಧರ್ಮದ ಉಳಿವಿಗೆ ಅಡ್ಡಿಪಡಿಸುತ್ತಿದ್ದಾರೆ. ಈ ಮೂಲಕ ನೂರಾರು ವಿಘ್ನಗಳನ್ನು ಒಡ್ಡುತ್ತಿದ್ದಾರೆ. ಇವರ ವಿರುದ್ದ ಅಜಾದ್ ಹಿಂದೂ ಸೇನೆಯಂತಹ ಹತ್ತಾರು ಹಿಂದೂ ಸಂಘಟನೆಗಳು ಸಂಘಟಿತರಾಗಲೇಬೇಕು ಎಂದು ಕರೆಕೊಟ್ಟರು. ಹಾಗೂ ಕಾರ್ಯಕ್ರಮದ ಉದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಮುತಾಲಿಕ್, ಎರಡನೇ ಶ್ರೀರಾಮ, ಎರಡನೇ ಶಿವಾಜಿ ಎಂದು ಪ್ರಧಾನಿಯನ್ನು ಬಣ್ಣಿಸಿದರು.

ಕಾಂಗ್ರೆಸ್‌ನವರ ಮಾನಸಿಕತೆ ಹಾಗೂ ಓಲೈಕೆ ರಾಜಕಾರಣದಿಂದ ಗಲಭೆ- ಮುತಾಲಿಕ್ ಕಿಡಿಕಾಂಗ್ರೆಸ್‌ನವರ ಮಾನಸಿಕತೆ ಹಾಗೂ ಓಲೈಕೆ ರಾಜಕಾರಣದಿಂದ ಗಲಭೆ- ಮುತಾಲಿಕ್ ಕಿಡಿ

English summary
Sri Ram Sena chief Pramod Muthalik expressed outrage in Chamarajanagar that Congress party has curse of cows. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X