ಕಾವೇರಿ ಕಿಚ್ಚು:ತಮಿಳುನಾಡು ವಾಹನಗಳನ್ನು ಕರ್ನಾಟಕಕ್ಕೆ ಕಳುಹಿಸದ ಊಟಿ ಜಿಲ್ಲಾಡಳಿತ
ಚಾಮರಾಜನಗರ, ಸೆಪ್ಟೆಂಬರ್ 26: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ಗಡಿಯನ್ನು ಊಟಿ ಜಿಲ್ಲಾಡಳಿತ ಬಂದ್ ಮಾಡಿತ್ತು.
ಚಾಮರಾಜನಗರ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಸ್ಥಿತಿ ಶಾಂತಿಯುತವಾಗಿರುವುದನ್ನು ತಿಳಿಸಿದ ಬಳಿಕ ಬೆಳಗ್ಗೆ 8.30ರ ಬಳಿಕ ಕರ್ನಾಟಕ ವಾಹನಗಳು ಸೇರಿದಂತೆ ಇತರ ರಾಜ್ಯದ ನೋಂದಣಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ,ತಮಿಳುನಾಡು ವಾಹನಗಳನ್ನು ಕರ್ನಾಟಕ ಪ್ರವೇಶಿಸಿಲು ನಿರ್ಬಂಧ ಮುಂದುವರೆಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಕೆಕ್ಕನಹಳ್ಳ ಚೆಕ್ ಪೋಸ್ಟ್ ನಲ್ಲಿ ಎಲ್ಲಾ ರೀತಿಯ ವಾಹನಗಳನ್ನು ನಿರ್ಬಂಧಿಸಿ ಬಂದ್ ಮುಗಿಯುವ ತನಕ ವಾಹನಗಳು ಸಂಚರಿಸುವುದು ಬೇಡ ಎಂದು ಸೂಚಿಸಿದ್ದರು. ಆದರೆ, ಆದೇಶವನ್ನು ಈಗ ಮಾರ್ಪಟು ಮಾಡಿ ಕೇವಲ ತಮಿಳುನಾಡು ನೋಂದಣಿ ವಾಹನಗಳು ಕರ್ನಾಟಕಕ್ಕೆ ತೆರಳುವುದು ಬೇಡ ಎಂದು ಊಟಿ ಜಿಲ್ಲಾಡಳಿತ ನಿರ್ಧರಿಸಿದೆ.
ಏಕಾಏಕಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಎರಡು ರಾಜ್ಯದ ವಾಹನ ಸವಾರರು 2 ಗಂಟೆಗಳ ಕಾಲ ಪರದಾಡುವಂತಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದರು.
ಕಾವೇರಿ ಕಾವು: ತಮಿಳುನಾಡು ವಾಹನ ತಡೆದು ಬಾರುಕೋಲು ಚಳವಳಿ ನಡೆಸಿ ಆಕ್ರೋಶ
ಚಾಮರಾಜನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಚಾಮರಾಜನಗರದಲ್ಲಿ ನಿರಂತರ ಪ್ರತಿಭಟನೆ ನಡೆಸಲಾಗುತ್ತಿದ್ದು, ಅದೇ ರೀತಿ ಇತ್ತೀಚಿಗೆ ಕನ್ನಡಪರ ಸಂಘಟನೆಗಳು ಬಾರುಕೋಲು ಚಳವಳಿ ನಡೆಸಿದರು.

ಚಾಮರಾಜೇಶ್ವರ ದೇವಾಲಯದಿಂದ ಬಾರುಕೋಲು ಬೀಸುತ್ತಾ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಈ ವೇಳೆ, ಸರಕು ತುಂಬಿಕೊಂಡು ತಮಿಳುನಾಡಿಗೆ ತೆರಳುತ್ತಿದ್ದ ಲಾರಿಗಳನ್ನು ತಡೆದು ನೀರು ಕೇಳಿದರೆ ಬಾರುಕೋಲಿನಲ್ಲಿ ಹೊಡೆಯುತ್ತೇವೆ ಎಂದು ಆಕ್ರೋಶ ಹೊರಹಾಕಿದರು. ಚಾಮರಾಜನಗರದಲ್ಲಿಕನ್ನಡಪರ ಸಂಘಟನೆಗಳು ಕಳೆದ 19 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬರುತ್ತಿವೆ.












Click it and Unblock the Notifications